Home » ಪರಮಹಿಳೆಯ ಬಯಸಿದಾತನ ಕತ್ತಿಗೆ ಬಿತ್ತು ಮಚ್ಚು!! ತಾನು ಪ್ರೀತಿಸಿದ ಯುವತಿ ಬೇರೆ ಮದುವೆಯಾಗಿದ್ದರೂ ಬೆನ್ನು ಬಿಡದ ಬೇತಾಳನಂತೆ ಆಡಿದಾತನಿಗೆ ಟಿಕೆಟ್ ಕೊಟ್ಟ ಗಂಡ

ಪರಮಹಿಳೆಯ ಬಯಸಿದಾತನ ಕತ್ತಿಗೆ ಬಿತ್ತು ಮಚ್ಚು!! ತಾನು ಪ್ರೀತಿಸಿದ ಯುವತಿ ಬೇರೆ ಮದುವೆಯಾಗಿದ್ದರೂ ಬೆನ್ನು ಬಿಡದ ಬೇತಾಳನಂತೆ ಆಡಿದಾತನಿಗೆ ಟಿಕೆಟ್ ಕೊಟ್ಟ ಗಂಡ

0 comments

ಅದಾಗಲೇ ಮದುವೆಯಾಗಿದ್ದ ಮಹಿಳೆಯೋರ್ವಳ ಸಹವಾಸ ಬಯಸಿ ಆಕೆಯ ಗಂಡನ ಮಚ್ಚಿನೇಟಿಗೆ ಇಲ್ಲೋರ್ವ ಇಹಲೋಕವನ್ನೇ ತ್ಯಜಿಸಿದ್ದಾನೆ. ಮೊದಲು ತಾನು ಪ್ರೀತಿಸುತ್ತಿದ್ದ ಮಹಿಳೆಗೆ ಬೇರೆ ವಿವಾಹವಾದ ವಿಚಾರ ಅರಿತಿದ್ದರೂ ಆ ಮಹಿಳೆಯ ಸಹವಾಸ ಬಯಸಿದ್ದೇ ಆತನ ಅಂತ್ಯಕ್ಕೆ ಕಾರಣವಾಗಿದೆ.ಮೃತ ಯುವಕನನ್ನು 32 ವರ್ಷದ ವೆಂಕಟರಮಣ ಯಾನೇ ವೆಂಕಿ ಎಂದು ಗುರುತಿಸಲಾಗಿದೆ.

ಘಟನೆ ವಿವರ: ಮೃತ ಯುವಕ ವೆಂಕಿ ಈ ಮೊದಲು ಯುವತಿಯೊರ್ವಳನ್ನು ಪ್ರೀತಿಸುತ್ತಿದ್ದ. ಆಕೆಯೂ ಈತನೊಂದಿಗೆ ಸಲುಗೆಯಿಂದಲೇ ಇದ್ದಳು. ಆದರೆ ಆಕೆಗೆ ರಾಕೇಶ್ ಎಂಬ ಇನ್ನೊಬ್ಬ ಯುವಕನೊಂದಿಗೆ ವಿವಾಹ ನಡೆದಿತ್ತು.ಇದರಿಂದ ಬೇಸತ್ತ ವೆಂಕಿ, ಆಕೆ ತನಗೇ ಬೇಕು ಎಂದು ಹಠ ಹಿಡಿದಿದ್ದ. ಇದೇ ವಿಚಾರವಾಗಿ ಆಕೆಯ ಗಂಡನೊಂದಿಗೆ ಹಲವಾರು ಬಾರಿ ಜಗಳ ನಡೆಸಿದ್ದ.

ಘಟನೆ ನಡೆದ ದಿನದಂದು ಕೂಡಾ ಇದೇ ವಿಚಾರವಾಗಿ ಜಗಳ ನಡೆದಿದ್ದು, ಇದರಿಂದ ಕೋಪಗೊಂಡ ಮಹಿಳೆಯ ಗಂಡ ರಾಕೇಶ್ ವೆಂಕಿಯನ್ನು ಬಾರ್ ಗೆ ಕರೆದುಕೊಂಡು ಹೋಗಿ ಕಂಠಪೂರ್ತಿ ಕುಡಿಸಿದ್ದ. ಇಬ್ಬರೂ ಬಾರ್ ನಿಂದ ಹೊರಗೆ ಬಂದಾಗಲೂ ಇಬ್ಬರ ನಡುವೆ ಜಗಳ ನಡೆದಿದ್ದು, ಜಗಳ ತಾರಕಕ್ಕೇರಿ ರಾಕೇಶ್ ವೆಂಕಿಯನ್ನು ಮಚ್ಚಿನಿಂದ ಕಡಿದು ಕೊಲೆನಡೆಸಿದ್ದಾನೆ. ವೆಂಕಿಯು ಆರೋಪಿ ರಾಕೇಶ್ ನ ಹೆಂಡತಿಯ ಹಿಂದೆ ಬಿದ್ದಿದ್ದ ಎನ್ನುವ ಕಾರಣದಿಂದಲೇ ಕೊಲೆಯಾಗಿದ್ದಾನೆ ಎಂದು ತಿಳಿದುಬಂದಿದೆ.

You may also like

Leave a Comment