Home » ಗಂಡ ಹೆಂಡಿರ ಜಗಳ ಉಂಡು ಶಾಶ್ವತ ಮಲಗಿಸುವ ತನಕ ! | ಮಲಗಿದ ಪತ್ನಿ, ದೀರ್ಘ ನಿದ್ರೆಯಲ್ಲಿ ಪತಿ!!

ಗಂಡ ಹೆಂಡಿರ ಜಗಳ ಉಂಡು ಶಾಶ್ವತ ಮಲಗಿಸುವ ತನಕ ! | ಮಲಗಿದ ಪತ್ನಿ, ದೀರ್ಘ ನಿದ್ರೆಯಲ್ಲಿ ಪತಿ!!

0 comments

ಗಂಡಹೆಂಡಿರ ಜಗಳ ಉಂಡು ಮಲಗುವ ತನಕ ಎಂಬ ಗಾದೆಗೆ ತದ್ವಿರುದ್ಧವಾಗಿ ಇಲ್ಲೊಂದು ಘಟನೆ ಬೆಳಕಿಗೆ ಬಂದಿದ್ದು,ಜಗಳವು ಶಾಶ್ವತವಾಗಿ ಮಲಗಿಸುವ ಮೂಲಕ ಕೊನೆಯಾಗಿದೆ.

ವಿಜಯನಗರ ಜಿಲ್ಲೆಯಲ್ಲಿ ನಡೆದ ಈ ಭೀಕರ ಘಟನೆಯಲ್ಲಿ ಪತಿ-ಪತ್ನಿ ಪರಸ್ಪರ ಜಗಳವಾಡಿ ಚೂರಿಯಿಂದ ಕೊಚ್ಚಿಕೊಂಡ ಕಾರಣ ಪತ್ನಿ ಮೃತಪಟ್ಟು ಪತಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಮೃತ ಮಹಿಳೆಯನ್ನು ಶಾಂತಮ್ಮ(45) ಎಂದು ಗುರುತಿಸಲಾಗಿದ್ದು, ಕೃತ್ಯ ಎಸಗಿದ ಪತಿ ಗಂಭೀರ ಗಾಯಗೊಂಡಿದ್ದಾನೆ.

ಸುಮಾರು ಅರ್ಧ ಗಂಟೆಗಳ ಕಾಲ ನಡೆದ ಜಗಳವು ತಾರಕಕ್ಕೇರಿ ಪತಿಯು ಪತ್ನಿಗೆ ಕೊಡಲಿಯಿಂದ ಕಡಿದು, ತಾನೂ ಚೂರಿಯಿಂದ ಚುಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದೆಂದು ಮೇಲ್ನೋಟಕ್ಕೆ ಕಂಡು ಬಂದಿದ್ದು,ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

You may also like

Leave a Comment