Plane crash: ಅಹಮದಾಬಾದ್ ವಿಮಾನ ದುರಂತವಾಗಿ 24 ಗಂಟೆಗಳು ಆಗುತ್ತಿದ್ದಂತೆ ಹೃದಯವಿದ್ರಾವಕ ಎನ್ನುವ ಕಥೆಗಳು ಹೊರಬರುತ್ತಿದೆ. ಒಬ್ಬೊಬ್ಬರದ್ದು ಒಂದೊಂದು ಕಥೆಗಳು.
ಗುಜರಾತ್‌ನ ಅಮ್ರೇಲಿ ಜಿಲ್ಲೆಯ ವಾಡಿಯಾ ಗ್ರಾಮದ ಮೂಲದ ಮತ್ತು ಲಂಡನ್ ನಿವಾಸಿ ಅರ್ಜುನ್‌ಭಾಯ್ ಮನುಭಾಯ್ ಪಟೋಲಿಯಾ ಕೆಲವೇ ದಿನಗಳ ಹಿಂದೆ ಅಹಮದಾಬಾದ್‌ಗೆ ಬಂದಿದ್ದು, ಕೆಲವೇ ವಾರದ ಹಿಂದೆ ಲಂಡನ್ ನಲ್ಲಿ ಆತನ ಪತ್ನಿ ಭಾರತಿಬೆನ್ ನಿಧನರಾಗಿದ್ದು ಅವರ ಅಸ್ತಿಯನ್ನು, ಪೂರ್ವಜರ ನೀರಿನಲ್ಲಿಯೇ ಬಿಡಬೇಕು ಎಂಬುದು ಆಕೆಯ ಕೊನೆಯ ಆಸೆಯಾಗಿತ್ತು. ಈ ಆಸೆಯನ್ನು ನೆರವೇರಿಸಲು ಇಬ್ಬರು ಹೆಣ್ಣು ಮಕ್ಕಳನ್ನು ಲಂಡನ್ ನಲ್ಲೆ ಬಿಟ್ಟು ಅರ್ಜುನ್ ಬಾಯ್ ಭಾರತಕ್ಕೆ ಬಂದಿದ್ದರು.
ಕೇವಲ 8 ಮತ್ತು 4 ವರ್ಷ ವಯಸ್ಸಿನ ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಲಂಡನ್‌ನಲ್ಲಿ ಬಿಟ್ಟು ಬಂದಿದ್ದ ಅರ್ಜುನ್, ಪತ್ನಿ ಭಾರತಿಬೆನ್ ಅಂತಿಮ ವಿಧಿಗಳನ್ನು ನೆರವೇರಿಸಿದ್ದರು. ಆದರೆ ಇದೀಗ ಅರ್ಜುನ್ ಬಾಯ್ ವಿಧಿಯ ಆಟಕ್ಕೆ ಅಪಘಾತದಲ್ಲಿ ದುರಂತ ಸಾವು ಕಂಡಿದ್ದು, ಇನ್ನು ಲಂಡನ್‌ನಲ್ಲಿ ತಂದೆಯ ಬರುವಿಕೆಗೆ ಕಾದಿದ್ದ ಇಬ್ಬರು ಚಿಕ್ಕ ಹೆಣ್ಣುಮಕ್ಕಳು ಈಗ ಅನಾಥರಾಗಿದ್ದಾರೆ.
