7
Suicide: ಹೆಂಡತಿಯ ಕಾಟ ಸಹಿಸಲಾರದೆ “ಮೈ ವೈಫ್ ಈಸ್ ರಿಜನ್ ಫಾರ್ ಮೈ ಡೆತ್” ಎಂದು ಡೆತ್ ನೋಟ್ ಬರೆದಿಟ್ಟು, ಪತಿಯೊಬ್ಬ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.
ಬೆಳಗಾವಿ ಅನಗೋಳದ ದುರ್ಗಾಲಯ ಸುನಿಲ್ ಮೂಲಿಮನಿ (33) ನಾಲ್ಕು ವರ್ಷಗಳ ಹಿಂದೆ ಪೂಜಾ ಎಂಬಾಕೆಯನ್ನು ಮದುವೆಯಾಗಿದ್ದು, ದಂಪತಿಗೆ ಮೂರು ವರ್ಷದ ಮಗು ಇದೆ .ಇದೀಗ ಡೆತ್ ನೋಟ್ ಬರೆದಿಟ್ಟು, ತನ್ನದೇ ಅಂಗಡಿಯಲ್ಲಿ ವೈಯರ್ ನಿಂದ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
