Home » Kerala: ಗಂಡನ ಮೊಬೈಲ್ ನಲ್ಲಿತ್ತು ಮಾಜಿ ಗೆಳತಿಯ ಫೋಟೋ – ಖಾಸಗಿ ಭಾಗಕ್ಕೆ ಬಿಸಿ ಎಣ್ಣೆ ಎರಚಿದ ಹೆಂಡತಿ

Kerala: ಗಂಡನ ಮೊಬೈಲ್ ನಲ್ಲಿತ್ತು ಮಾಜಿ ಗೆಳತಿಯ ಫೋಟೋ – ಖಾಸಗಿ ಭಾಗಕ್ಕೆ ಬಿಸಿ ಎಣ್ಣೆ ಎರಚಿದ ಹೆಂಡತಿ

0 comments

Kerala: ಗಂಡನ ಮೊಬೈಲ್ ನಲ್ಲಿ ಮಾಜಿ ಗೆಳತಿಯ ಫೋಟೋ ನೋಡಿ ಪತ್ನಿ ಒಬ್ಬಳು ಆತನ ಖಾಸಗಿ ಭಾಗಕ್ಕೆ ಬಿಸಿ ಎಣ್ಣೆ ಎರಚಿದ ಅಘಾತಕಾರಿ ಘಟನೆ ಒಂದು ಕೇರಳದಲ್ಲಿ ಬೆಳಕಿಗೆ ಬಂದಿದೆ.

ಕೇರಳದ ಎರ್ನಾಕುಲಂ ಜಿಲ್ಲೆಯ ಪೆರುಂಬವೂರ್‌ನಲ್ಲಿ ಮೊಬೈಲ್ ಫೋನ್‌ನಲ್ಲಿ ಗಂಡ ಮಾಜಿ ಗರ್ಲ್‌ಫ್ರೆಂಡ್ ಜೊತೆ ಇರುವ ಫೋಟೋ ನೋಡಿದ ಪತ್ನಿಗೆ ಆತ ಆಕೆಯ ಜೊತೆ ಸಂಪರ್ಕದಲ್ಲಿದ್ದುಕೊಂಡು ತನಗೆ ಮೋಸ ಮಾಡುತ್ತಿದ್ದಾನೆ ಎಂಬ ಸಂಶಯದ ಜೊತೆಗೆ ಕೋಪವೂ ನೆತ್ತಿಗೇರಿದೆ. ಫೋಟೋ ನೋಡಿ ಉರಿದು ಹೋದ ಪತ್ನಿಯೊಬ್ಬಳು ಬಿಸಿ ಎಣ್ಣೆ ಕಾಯಿಸಿ ಗಂಡನ ಮರ್ಮಾಂಗಕ್ಕೆ ಎರಚಿದ್ದು, ಇದರಿಂದ ಗಂಡ ಗಂಭೀರ ಗಾಯಗೊಂಡಿದ್ದಾನೆ.

ಬಿಸಿ ಎಣ್ಣೆ ಎರಚಿದ್ದರಿಂದ ಗಂಡನ ಎದೆ ಕೈಗಳು, ಮರ್ಮಾಂಗ ಹಾಗೂ ತೊಡೆಯಲ್ಲಿ ಸುಟ್ಟ ಗಾಯಗಳಾಗಿವೆ. ಕೂಡಲೇ ಆತನನ್ನು ಎರ್ನಾಕುಲಂನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾಗಿ ವರದಿಯಾಗಿದೆ. ಪತ್ನಿಯ ವಿರುದ್ಧ ಪ್ರಕರಣ ದಾಖಲಾಗಿದೆ.

You may also like