Home » Safari: ಗಂಡ ಹೆಂಡತಿ ಜಗಳದಲ್ಲಿ ಹೆಂಡತಿಯನ್ನ ಎಳೆದೊಯ್ದು ರಕ್ತ ಹೀರಿ ತಿಂದು ತೇಗಿದ ಹುಲಿ! ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?

Safari: ಗಂಡ ಹೆಂಡತಿ ಜಗಳದಲ್ಲಿ ಹೆಂಡತಿಯನ್ನ ಎಳೆದೊಯ್ದು ರಕ್ತ ಹೀರಿ ತಿಂದು ತೇಗಿದ ಹುಲಿ! ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?

375 comments
Safari

Safari: ಗಂಡ ಹೆಂಡತಿಯ ನಡುವೆ ಜಗಳ ಆಗೋದು ಸಾಮಾನ್ಯವಾಗಿ ಇದ್ದಿದ್ದೇ. ಆದ್ರೆ ಇಲ್ಲಿ ಗಂಡ ಹೆಂಡತಿ ಇಬ್ಬರ ಜಗಳ ಮೂರನೇಯವರಿಗೆ ಲಾಭ ಅನ್ನೋ ಪರಿಸ್ಥಿತಿ ಬಂದಿದೆ. ಹೌದು, ಎಲ್ಲೆಂದರಲ್ಲಿ ಜಗಳವಾಡಿಕೊಂಡರೆ ಅವರಿಗೆ ದೊಡ್ಡ ನಷ್ಟವೇ ಸಂಭವಿಸಬಹುದು ಎಂದು ನೀವು ಇಲ್ಲಿ ಮನದಟ್ಟು ಮಾಡಿಕೊಳ್ಳಿ. ಯಾಕಂದ್ರೆ ಎಲ್ಲೆಂದರಲ್ಲಿ ಜಗಳ ಮಾಡಿದರೆ ಏನಾಗುತ್ತದೆ ಎಂಬುದಕ್ಕೆ ಇಲ್ಲಿದೆ ನೋಡಿ ಉದಾಹರಣೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಗಂಡ ಹೆಂಡತಿ ಕಾರಿನಲ್ಲಿ ಟೈಗರ್ ಸಫಾರಿಗೆ (Safari) ಹೋಗಿದ್ದಾರೆ. ಆದರೆ, ಇಲ್ಲಿ ಗಂಡ ಕಾರಿನ ಡ್ರೈವರ್ ಪಕ್ಕದಲ್ಲಿ ಕುಳಿತುಕೊಂಡಿದ್ದಾನೆ. ಇನ್ನು ಹೆಂಡತಿ ಕಾರಿನ ಹಿಂಬದಿಯಲ್ಲಿ ಕುಳಿತುಕೊಂಡಿದ್ದಾಳೆ.

ಕಾರಿನಲ್ಲಿ ಜಗಳ ಮಾಡುತ್ತಲೇ ಬಂದ ಜೋಡಿ ಜಗಳ ಜೋರಾಗಿ ಟೈಗರ್ ಸಫಾರಿ ರಸ್ತೆಯ ಮಧ್ಯದಲ್ಲಿಯೇ ಕಾರನ್ನು ನಿಲ್ಲಿಸಲು ಪತ್ನಿ ಹೇಳಿದ್ದಾಳೆ. ಕಾರು ನಿಲ್ಲಿಸಿದ ಕೂಡಲೇ ಇಳಿದುಬಂದ ಹೆಂಡತಿ ಗಂಡನೊಂದಿಗೆ ಜಗಳ ಮಾಡಲು ಮುಂದಾಗಿದ್ದಾಳೆ. ಈ ವೇಳೆ ಅಲ್ಲೇ ದೂರದಲ್ಲಿ ಹೊಂಚು ಹಾಕಿ ಕುಳಿತಿದ್ದ ಹುಲಿ ಮರದ ಪಕ್ಕದಲ್ಲಿ ಅಡಗಿಕೊಂಡಿತ್ತು.ಮಹಿಳೆ ಕಾರಿನಿಂದ ಹೊರಗೆ ಇಳಿದು  ಜಗಳ ಮಾಡುವಾಗ ಅಡಗಿ ಕುಳಿತಿದ್ದ ಹುಲಿ ಏಕಾಏಕಿ ದಾಳಿ ಮಾಡಿ ಆಕೆಯನ್ನು ಕಚ್ಚಿ ಹಿಡಿದು ಕಾಡಿನೊಳಗೆ ಎಳೆದುಕೊಂಡು ಹೋಗಿದೆ.

ಮಹಿಳೆಯನ್ನು ಎಳೆದೊಯ್ದ ತಕ್ಷಣವೇ ಕಾರಿನಲ್ಲಿದ್ದ ಗಂಡ ಹಾಗೂ ಹಿಂಬದಿ ಸೀಟಿನಲ್ಲಿದ್ದ ಮತ್ತೊಬ್ಬ ವ್ಯಕ್ತಿಯೂ ಕಾರಿನಿಂದ ಇಳಿದು ಮಹಿಳೆಯನ್ನು ರಕ್ಷಣೆ ಮಾಡಲು ಮುಂದೆ ಹೋಗಿದ್ದಾರೆ. ಆಗ, ಅಲ್ಲಿದ್ದವರು ನೀವೂ ಕೂಡ ಇತರೆ ಹುಲಿಗಳಿಗೆ ಬಲಿಯಾಗುವ ಸಾಧ್ಯತೆಯಿದೆ. ಕಾರಿನಲ್ಲಿ ಕುಳಿತುಕೊಳ್ಳಿ ಎಂದು ಹೇಳಿದ್ದಾರೆ. ನಂತರ, ಸಫಾರಿ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಆದ್ರೆ ಸಫಾರಿ ನಡೆಸುವ ಸಿಬ್ಬಂದಿ ಬಂದು ಮಹಿಳೆಯನ್ನು ರಕ್ಷಣೆ ಮಾಡುವ ವೇಳೆಗಾಗಲೇ ಹುಲಿ ಆಕೆಯ ಕುತ್ತಿಗೆಗೆ ಬಾಯಿ ಹಾಕಿ ರಕ್ತವನ್ನು ಹೀರಿತ್ತು. ಜೊತೆಗೆ, ಆಕೆಯ ದೇಹದ ಮಾಂಸವನ್ನೂ ತಿಂದು ಹಾಕಿತ್ತು. ಆ ನಂತರ ಖಾಸಗಿ ವಾಹನಗಳಲ್ಲಿ ಹೋಗುವ ಸಫಾರಿ ಪ್ರಿಯರಿಗೆ ಕಾರಿನಿಂದ ಇಳಿದು ಹೊರಗೆ ಬರದಂತೆ ಖಡಕ್ ಸೂಚನೆಯನ್ನೂ ರವಾನೊಸಲಾಗುತ್ತಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿರುವ ವ್ಯಕ್ತಿ, ಸಫಾರಿ ವೇಳೆ ಮಹಿಳೆ ಕಾರಿನಿಂದ ಇಳಿದುಬಂದು ಗಂಡನೊಂದಿಗೆ ಜಗಳ ಮಾಡುತ್ತಿರುವಾಗ ಹುಲಿ ಬಂದಿ ಆಕೆಯನ್ನು ಕಚ್ಚಿ ಎಳೆದೊಯ್ದಿದೆ ಎಂದು ಬರೆದುಕೊಂಡಿದ್ದಾನೆ. ಮುಂದುವರೆದು ಗಂಡನ ಮೇಲೆ ಇಂತಹ ಸ್ಥಳದಲ್ಲಿ ನೀವು ಕೂಡ ಹೀಗೆ ರಿಯಾಕ್ಟ್ ಮಾಡ್ತೀರಾ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ.

You may also like

Leave a Comment