Home » Hyderabad: 10 ರ ಬಾಲಕಿಯ ಮೇಲೆ ಹತ್ತು ಮಂದಿಯಿಂದ ಗ್ಯಾಂಗ್‌ರೇಪ್‌; ಬಾಲಕಿ ಗರ್ಭಿಣಿ

Hyderabad: 10 ರ ಬಾಲಕಿಯ ಮೇಲೆ ಹತ್ತು ಮಂದಿಯಿಂದ ಗ್ಯಾಂಗ್‌ರೇಪ್‌; ಬಾಲಕಿ ಗರ್ಭಿಣಿ

0 comments
Hyderabad

Hyderabad: 10 ವರ್ಷದ ಬಾಲಕಿಯನ್ನು ಅಪಹರಿಸಿ, ಮಾದಕವಸ್ತು ಮಿಶ್ರಿತ ಪಾನೀಯಗಳನ್ನು ಸೇವಿಸುವಂತೆ ಹಾಗೂ ಸಾಮೂಹಿಕ ಅತ್ಯಾಚಾರ ಮಾಡಿದ ಘೋರ ಘಟನೆಯೊಂದು ಹೈದರಾಬಾದ್‌ನಲ್ಲಿ ನಡೆದಿದೆ. ಈ ಕೃತ್ಯದಿಂದ ಬಾಲಕಿ ಇದೀಗ ಗರ್ಭಿಣಿಯಾಗಿದ್ದು, ಈ ಕೃತ್ಯ ಎಸಗಿದ 10 ಮಂದಿಯನ್ನು ಕೂಡಾ ಬಂಧಿಸಲಾಗಿದೆ.

T20 World Cup 2024: ಟಿ20 ವಿಶ್ವಕಪ್​ ಗೆದ್ದ ಟೀಮ್ ಇಂಡಿಯಾಕ್ಕೆ ಮೋದಿಯಿಂದ ಮರೆಯಲಾರದ ಉಡುಗೊರೆ!

ಪೊಲೀಸರ ಪ್ರಕಾರ, ಜೂನ್ 25 ರಂದು ನಗರದ ಕಾಚಿಗುಡಾ ಪ್ರದೇಶದಿಂದ ಬಾಲಕಿಯನ್ನು ನರೇಶ್ ಮತ್ತು ವಿಜಯ್ ಕುಮಾರ್ ಎಂಬ ಇಬ್ಬರು ವ್ಯಕ್ತಿಗಳು ಅಪಹರಿಸಿದ್ದರು. ಈ ಇಬ್ಬರು ಪರಿಚಯದ ಮೂಲಕ ಅವಳೊಂದಿಗೆ ಸ್ನೇಹ ಬೆಳೆಸಿದ್ದರು. ನಂತರ ಆರೋಪಿಗಳು ಇತರ ಎಂಟು ವ್ಯಕ್ತಿಗಳನ್ನು ಸೇರಿಸಿಕೊಂಡು ಘೋರ ಅಪರಾಧದಲ್ಲಿ ತೊಡಗಿಸಿಕೊಂಡಿದ್ದಾರೆ.

ದುಷ್ಕರ್ಮಿಗಳು ಅಪ್ರಾಪ್ತ ಬಾಲಕಿಯ ಮೇಲೆ ಪದೇ ಪದೇ ಹಲ್ಲೆ ನಡೆಸಿದ್ದರ ಜೊತೆಗೆ ಲೈಂಗಿಕ ದೌರ್ಜನ್ಯ ನಡೆಸುವ ಮೊದಲು ಮಾದಕ ದ್ರವ್ಯ ಸೇವಿಸುವಂತೆ ಒತ್ತಾಯಿಸಿದ್ದಾರೆ. ಈ ಘಟನೆಯಿಂದ ಬಾಲಕಿ ಇದೀಗ ಗರ್ಭಿಣಿಯಾಗಿದ್ದಾಳೆ.

ನರೇಶ್(26) ವಿಜಯ್ ಕುಮಾರ್( 23), ಬಾಲಾಜಿ (23), ಕೃಷ್ಣ (22), ಕಿರಣ್ ಕುಮಾರ್ (26), ಅಜಯ್ (23), ಕ್ಸೇವಿಯರ್ (24), ದೀಪಕ್ (25), ಸಬವತ್‌ ಹತ್ಯಾ ನಾಯ್ಕ್‌ (25), ಮತ್ತು ಮಧು (30) ಸೇರಿದಂತೆ ಎಲ್ಲಾ ಹತ್ತು ಆರೋಪಿಗಳನ್ನು ಜೂನ್ 29 ರಂದು ಬಂಧಿಸಲಾಯಿತು.

ಈ ಆರೋಪಿಗಳು ಕ್ರಿಮಿನಲ್‌ ಹಿನ್ನೆಲೆ ಹೊಂದಿರುವವರು ಎಂದು ವರದಿಯಾಗಿದೆ.

Robot Commits Suicide: ಕೆಲಸದ ಒತ್ತಡ; ಮೆಟ್ಟಿಲಿನಿಂದ ಹಾರಿ ರೊಬೋಟ್‌ ಆತ್ಮಹತ್ಯೆ

You may also like

Leave a Comment