Home » Hyderabad : ‘ಮನುಷ್ಯರ ರಕ್ತ’ವೆಂದು ಕುರಿಗಳ ರಕ್ತ ತೆಗೆದು 2 ಸಾವಿರಕ್ಕೆ ಮಾರಾಟ – ಖದೀಮರ ಬಂಧನ

Hyderabad : ‘ಮನುಷ್ಯರ ರಕ್ತ’ವೆಂದು ಕುರಿಗಳ ರಕ್ತ ತೆಗೆದು 2 ಸಾವಿರಕ್ಕೆ ಮಾರಾಟ – ಖದೀಮರ ಬಂಧನ

0 comments

Hyderabad : ದುಡ್ಡು ಮಾಡಲು ಕೆಲವು ವ್ಯಕ್ತಿಗಳು ಮನುಷ್ಯರ ಜೀವದ ಜೊತೆ ಯಾವ ಮಟ್ಟಕ್ಕೆಲ್ಲಾ ಚೆಲ್ಲಾಟವಾಡುತ್ತಾರೆ ಎಂಬುದಕ್ಕೆ ಇದೀಗ ಪ್ರತ್ಯಕ್ಷ ಸಾಕ್ಷಿ ಒಂದು ಸಿಕ್ಕಿದೆ. ಅದೇನೆಂದರೆ ಮನುಷ್ಯರ ರಕ್ತವೆಂದು ಕುರಿಗಳಿಂದ ರಕ್ತ ತೆಗೆದು ಮಾರಾಟ ಮಾಡುತ್ತಿದ್ದ ಖದೀಮರ ಗುಂಪೊಂದು ಪತ್ತೆಯಾಗಿದೆ. ಇದೀಗ ಈ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.

ಹೌದು, ಹೈದರಾಬಾದ್‌ನ ಕೀಸರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಕುರಿ ಹಾಗೂ ಆಡುಗಳ ರಕ್ತವನ್ನು ಅಕ್ರಮವಾಗಿ ಸಿರಿಂಜ್ ಮೂಲಕ ತೆಗೆದು ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ಬರೋಬ್ಬರಿ 130 ಪ್ಯಾಕೆಟ್ ರಕ್ತವನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸರ ಪ್ರಕಾರ, ಆರೋಪಿಗಳು ಕೀಸರಾ ಪ್ರದೇಶದ ಸತ್ಯನಾರಾಯಣ ಕಾಲೋನಿಯೊಂದರ ಮಟನ್ ಶಾಪ್‌ನಲ್ಲಿ ಜೀವಂತ ಕುರಿ ಹಾಗೂ ಮೇಕೆಗಳಿಂದ ಸಿರೀಂಜ್ ಮೂಲಕ ಅಕ್ರಮವಾಗಿ ರಕ್ತವನ್ನು ತೆಗೆದು ಪ್ಯಾಕೇಟ್ ಮಾಡುತ್ತಿದ್ದರು. ಈ ಕಾರ್ಯಾಚರಣೆ ಮಧ್ಯರಾತ್ರಿಯ ವೇಳೆ ನಡೆಯುತ್ತಿತ್ತು. ಹಾಗೂ ಯಾವುದೇ ಅನುಮತಿ ಅಥವಾ ವೈದ್ಯಕೀಯ ಮೇಲ್ವಿಚಾರಣೆಯಿಲ್ಲದೆ ಈ ರಕ್ತವನ್ನು ಇಲ್ಲಿಂದ ಸಾಗಿಸಲಾಗುತ್ತಿತ್ತು. ಕಳೆದೊಂದು ವರ್ಷಗಳಿಂದ ಈ ಅಕ್ರಮ ಕಾರ್ಯಾಚರಣೆ ನಡೆಯುತ್ತಿದೆ. ಪಶುವೈದ್ಯರ ಯಾವುದೇ ಮೇಲುಸ್ತುವಾರಿ ಇಲ್ಲದೇ ಹಾಗೂ ಯಾವುದೇ ಅಧಿಕಾರಿಗಳ ಅಧಿಕೃತ ಅನುಮತಿ ಇಲ್ಲದೇ ಪ್ರತಿ ಪ್ರಾಣಿಯಿಂದಲೂ ಆರೋಪಿಗಳು 1000 ಎಂಎಲ್ ರಕ್ತವನ್ನು ತೆಗೆದು, ಲೀಟರ್‌ಗೆ 2000 ರೂಪಾಯಿಗೆ ಸೇಲ್ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.

You may also like