ಈಗಂತೂ ಎಲ್ಲಾ ಕಡೆ ಎಲೆಕ್ಟ್ರಿಕ್ ಕಾರುಗಳದ್ದೇ ಕಾರುಬಾರು. ಭಾರತದ ಮಾರುಕಟ್ಟೆಯಲ್ಲಿ ನವ ನವೀನ ವಿನ್ಯಾಸದ ಎಲೆಕ್ಟ್ರಿಕ್ ಕಾರುಗಳು ಒಂದರ ಹಿಂದೆ ಒಂದರಂತೆ ಸಾಲು ಸಾಲು ಬಿಡುಗಡೆಗೊಂಡಿದೆ. ಕಂಪನಿಗಳು ಪೈಪೋಟಿಗಿಳಿದು ಹೊಸ ಹೊಸ ಕಾರುಗಳನ್ನು ಮಾರುಕಟ್ಟೆಗೆ ತರುತ್ತಿವೆ.
ಇತ್ತೀಚೆಗೆ ಮತ್ತೆರಡು ಹೊಸ ಕಾರುಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಪ್ರಮುಖ ಕಾರು ತಯಾರಿಕಾ ಕಂಪನಿಗಳಲ್ಲಿ ಒಂದಾದ ಹ್ಯುಂಡೈ ಇತ್ತೀಚೆಗೆ ಮಹತ್ವದ ಘೋಷಣೆಯನ್ನು ಮಾಡಿದೆ. IONIQ 5 ಎಲೆಕ್ಟ್ರಿಕ್ SUV ಬುಕಿಂಗ್‌ನ ಪ್ರಾರಂಭವನ್ನು ಘೋಷಿಸಿದೆ.
ಕಂಪನಿಯು ಈ ಕಾರನ್ನು ಹುಂಡೈ eGMP ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಿದ್ದಾರೆ. ಕಾರು ಪ್ಯಾರಾಮೆಟ್ರಿಕ್ ಪಿಕ್ಸೆಲ್ ವಿನ್ಯಾಸವನ್ನು ಹೊಂದಿದ್ದೂ, 20 ಇಂಚಿನ ಮಿಶ್ರಲೋಹದ ಚಕ್ರಗಳಿವೆ. ಇದು ಸಂಪರ್ಕಿತ ಕಾರ್ ಟೆಕ್, ಎಆರ್ ಅಸಿಸ್ಟೆಡ್ ಹೆಡ್ಸ್ ಅಪ್ ಡಿಸ್ಪ್ಲೇ, ADAS, ಮ್ಯಾಗ್ನೆಟಿಕ್ ಡ್ಯಾಶ್‌ಬೋರ್ಡ್, ಪನೋರಮಿಕ್ ಗ್ಲಾಸ್ ರೂಫ್, ಹೊಂದಾಣಿಕೆಯ ಮುಂಭಾಗದ ಸೀಟ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಈ ಕಾರು 4 ಪವರ್‌ಟ್ರೇನ್ ಆಯ್ಕೆಗಳಲ್ಲಿ ಲಭ್ಯವಿದ್ದೂ, ಒಂದು ಬಾರಿ ಚಾರ್ಜ್ ಮಾಡಿದರೆ 480 ಕಿಲೋಮೀಟರ್ ವರೆಗೆ ಚಲಿಸಬಹುದು. ಅಲ್ಲದೇ 5.2 ಸೆಕೆಂಡುಗಳಲ್ಲಿ 0 ರಿಂದ 100 kmph ವೇಗವನ್ನು ಪಡೆಯುತ್ತದೆ. ಈ ಕಾರಿನ ಎಕ್ಸ್ ಶೋ ರೂಂ ಬೆಲೆ ರೂ. 59.95 ಲಕ್ಷ ರೂ. ಆಗಿದ್ದೂ, Kia EV6 ಗಿಂತ ಕಡಿಮೆಯಾಗಿದೆ ಎಂಬುದು ಗಮನಾರ್ಹ. ಇವುಗಳ ಬುಕಿಂಗ್ ಡಿಸೆಂಬರ್ 20 ರಿಂದ ಪ್ರಾರಂಭವಾಗಲಿದೆ.
ಇನ್ನೊಂದು ಬಗೆಯಾದ ಪ್ರವಿಗ್ ಡಿಫೈ SUV ಎಲೆಕ್ಟ್ರಿಕ್ ಕಾರ್ 90KW ಬ್ಯಾಟರಿಯನ್ನು ಹೊಂದಿದ್ದೂ, 2.5 ಲಕ್ಷ ಕಿಲೋಮೀಟರ್‌ಗಳವರೆಗೆ ಪ್ರಯಾಣಿಸಬಹುದು. ಒಮ್ಮೆ ಚಾರ್ಜ್ ಮಾಡಿದರೆ 500 ಕಿಲೋಮೀಟರ್ ವರೆಗೆ ಹೋಗಬಹುದಾದ ಈ ವೈಶಿಷ್ಟ್ಯವು ಗಮನಾರ್ಹವಾಗಿದೆ. ಕೇವಲ 4.9 ಸೆಕೆಂಡುಗಳಲ್ಲಿ 0 ರಿಂದ 100 kmph ವೇಗವನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿದೆ.

ಇದರ ಗರಿಷ್ಠ ವೇಗವು ಗಂಟೆಗೆ 210 ಕಿಮೀ. ಇದರಲ್ಲಿ 18-ಇಂಚಿನ ಮಿಶ್ರಲೋಹದ ಚಕ್ರಗಳಿದ್ದೂ, ಟೈರ್ ಗಾತ್ರವು 255/65 R18.ಈ SUV ಯ ಕ್ಯಾಬಿನ್ ನಾಲ್ಕು ಆಸನಗಳನ್ನು ಹೊಂದಿದೆ. ನವೀನ ಪರದೆಗಳು, ವಿಹಂಗಮ ಸ್ಥಿರ ಛಾವಣಿಯ ವಿನ್ಯಾಸವು ಇದರಲ್ಲಿದೆ. ಮುಂದಿನ ವರ್ಷಾಂತ್ಯದಿಂದ ಈ ಕಾರಿನ ವಿತರಣೆ ಆರಂಭವಾಗಲಿದೆ. ಈ ಕಾರಿನ ಡೆಲಿವರಿ ಸೌಲಭ್ಯವು ದೇಶಾದ್ಯಂತ 3400 ಪಿನ್ ಕೋಡ್‌ಗಳಲ್ಲಿ ಲಭ್ಯವಿರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
