Ameena: ಪಾಕಿಸ್ತಾನದಿಂದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಸರ್ಕಾರ ‘ಆಪರೇಷನ್ ಸಿಂಧೂರ್’ ಅನ್ನು ಪ್ರಾರಂಭಿಸಿ 200 ಭಯೋತ್ಪಾದಕರನ್ನು ಹತ್ಯೆ ಮಾಡಿದೆ. ಭಾರತೀಯ ಸೇನೆಯ ಈ ಕಾರ್ಯಾಚರಣೆ ಕುರಿತು ದೇಶಾದ್ಯಂತ ಭಾರಿ ಮೆಚ್ಚುಗೆ ಮಾತುಗಳು ವ್ಯಕ್ತವಾಗುತ್ತಿದೆ. ವಿರೋಧ ಪಕ್ಷವು ಕೂಡ ಕೇಂದ್ರವನ್ನು ಬೆಂಬಲಿಸಿ, ಘೋಷಣೆ ನೀಡಿದೆ. ಆದರೆ ಈ ಬೆನ್ನಲ್ಲೇ ಮಲಯಾಳಂ ನಟಿ ಅಮಿನಾ ‘ಆಪರೇಷನ್ ಸಿಂಧೂರ್’ ಕುರಿತು ಭಾರತೀಯಳಾಗಿ ನನಗೆ ನಾಚಿಕೆಯಾಗುತ್ತಿದೆ ಎಂದು ಹೇಳಿಕೊಂಡಿದ್ದಾಳೆ.
ಹೌದು, ತನ್ನ ಸೋಷಿಯಲ್ ಮೀಡಿಯಾದಲ್ಲಿ ಸಂದೇಶ ಬರೆದುಕೊಂಡಿರುವ ಈಕೆ ‘ನನಗೆ ಭಾರತೀಯಳಾಗಿ ಈ ದಾಳಿ ಬಗ್ಗೆ ನಾಚಿಕೆಯಾಗ್ತಿದೆ. ಕೊಲ್ಲುವುದೇ ಎಲ್ಲದಕ್ಕೂ ಪರಿಹಾರವಲ್ಲ. ದೇಶದಲ್ಲಿ ಸಾಕಷ್ಟು ಉತ್ತರ ಸಿಗದ ಪ್ರಶ್ನೆಗಳಿರುವಾಗ, ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವಾಗ ನೆನಪಿರಲಿ ಯುದ್ಧ ಶಾಂತಿಯನ್ನು ತರುವುದಿಲ್ಲ. ನಾನು ಇದನ್ನು ಬೆಂಬಲಿಸುವುದಿಲ್ಲ. ಪಹಲ್ಗಾಮ್ ದಾಳಿಗೆ ಇದರಿಂದ ಪ್ರತೀಕಾರ ಮಾಡಿದಂತಾಯಿತು ಎನ್ನುವವರು ನಿಜಕ್ಕೂ ತಪ್ಪು ಕಲ್ಪನೆ ಹೊಂದಿದ್ದಾರೆ. ಇದೊಂದು ನಾಗಿರಕರನ್ನು ಕಳೆದುಕೊಳ್ಳುವ ಯುದ್ಧ’ ಎಂದು ನಟಿ ಬರೆದುಕೊಂಡಿದ್ದಾಳೆ.
ಅಮೀನಾ ಈ ಪೋಸ್ಟ್ ಬೆನ್ನಲ್ಲೇ ಸಾರ್ವಜನಿಕರಿಂದ ಬಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಭಾರತೀಯಳಾಗಿ ಈ ರೀತಿ ಹೇಳಿಕೆ ನೀಡುವುದು ನಾಚಿಕೆಗೇಡಿನತನ ಎಂದು ನೆಟ್ಟಿಗರು ನೆಟಿಗೆ ಛೀಮಾರಿ ಹಾಕಿದ್ದಾರೆ
