Dharmasthala case: ಧರ್ಮಸ್ಥಳದ ವಿಚಾರವಾಗಿ ಅನೇಕ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಒಬ್ಬ ವ್ಯಕ್ತಿ ಬಂದು ನಾನೇ ಶವ ಮುಚ್ಚಿ ಹಾಕಿದ್ದೇನೆ ಎಂದು ಹೇಳಿದ್ದಾನೆ. ಹೀಗಾಗಿ ಸರ್ಕಾರ ಎಸ್ ಐ ಟಿ ರಚನೆ ಮಾಡಿದೆ. ಇದನ್ನ ನಾನು ಸ್ವಾಗತಿಸುವೆ ಆದ್ರೆ ಕೂಲಂಕಷವಾಗಿ ತನಿಖೆಯಾಗಲಿ ನಿಷ್ಪಕ್ಷಪಾತವಾಗಿ ಅಗ್ಬೇಕು ಎಂದು ವಿರೋಧ ಪಕ್ಷದ ನಾಯಕ ಅರ್ ಅಶೋಕ್ ಹೇಳಿದ್ದಾರೆ.
ನನಗೆ ಒಂದು ಅನುಮಾನವಿದೆ. ಧರ್ಮಸ್ಥಳ ವಿಚಾರವಾಗಿ ಇದನ್ನ ಒಬ್ಬ ಮುಸ್ಲಿಂ ಹುಡುಗ ಪ್ರತಿದಿನ ಅಪ್ಲೋಡ್ ಮಾಡ್ತಿದ್ದಾನೆ. ಜೊತೆಗೆ ಕೇರಳ ಸರ್ಕಾರ ಬಹಳ ಮುತುವರ್ಜಿಯಿಂದ ಧರ್ಮಸ್ಥಳ ವಿಚಾರದಲ್ಲಿ ತಲೆ ಹಾಕುತ್ತಿದೆ. ಧರ್ಮಸ್ಥಳ ಗುರಿ ಮಾಡಬೇಡಿ. ತಪ್ಪು ಮಾಡಿದ್ರೆ ಅಂತಹ ವ್ಯಕ್ತಿಗಳ ಮೇಲೆ ಶಿಕ್ಷೆ ಆಗಲಿ. ಆದರೆ ಧರ್ಮಸ್ಥಳವನ್ನು ಗುರಿ ಮಾಡಬೇಡಿ ಎಂದು ಆರ್ ಆಶೋಕ್ ಹೇಳಿದ್ದಾರೆ.
ಧರ್ಮಸ್ಥಳ ಹಿಂದೂಗಳಿಗೆ ಪವಿತ್ರ ಸ್ಥಳ, ವರ್ಷ ವರ್ಷ ಕೋಟ್ಯಂತರ ಭಕ್ತರು ಬರ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ನಿತ್ಯ ಅಪ್‌ಲೋಡ್ ಮಾಡ್ತಿರೋನು ಮುಸ್ಲಿಂ ವ್ಯಕ್ತಿ. ಕೇರಳದ ಕಮ್ಯೂನಿಸ್ಟ್ ಸರ್ಕಾರ ಈ ವಿಚಾರದಲ್ಲಿ ಮುತುವರ್ಜಿ ವಹಿಸ್ತಿದೆ. ಕರ್ನಾಟಕಕ್ಕೆ ಸಂಬಂಧಿಸಿದ ಸೂಕ್ಷ್ಮ ವಿಚಾರದಲ್ಲಿ ಕೇರಳ ಸರ್ಕಾರ ಯಾಕೆ ಮಧ್ಯಪ್ರವೇಶ ಮಾಡಬೇಕು? ಅಯ್ಯಪ್ಪ ಸ್ವಾಮಿ ದೇಗುಲ ವಿಚಾರದಲ್ಲಿ ಕೇರಳ ಸರ್ಕಾರದ ನಡೆ ಹೇಗಿತ್ತು ಅಂತ ಎಲ್ರಿಗೂ ಗೊತ್ತಿದೆ. ಅವರ್ಯಾಕೆ ಈಗ ಕರ್ನಾಟಕ ವಿಚಾರಕ್ಕೆ ಮೂಗು ತೂರಿಸಬೇಕು? ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು ಬಹಳಷ್ಟು ಶವಗಳನ್ನು ಹೂತಿದ್ದಾರೆ ಅಂದ್ರೆ ಅಷ್ಟೇ ಸಂಖ್ಯೆಯ ದೂರುಗಳೂ ದಾಖಲಾಗಬೇಕಿತ್ತಲ್ಲ. ಯಾಕೆ ದಾಖಲಾಗಿಲ್ಲ? ಇಂಥ ಪ್ರಕರಣಗಳಲ್ಲಿ ಪೊಲೀಸರು ಸಾಮಾನ್ಯವಾಗಿ ಅಚಾತುರ್ಯ ಮಾಡಲ್ಲ. ಈಗ ಏಕಾಏಕಿ ಆ ನಿಗೂಢ ವ್ಯಕ್ತಿಗೆ ಜ್ಞಾನೋದಯ ಯಾಕಾಯ್ತು? ದುರುದ್ದೇಶದ ತನಿಖೆ ಮಾಡದೇ ನಿಸ್ಪಪಕ್ಷಪಾತ ತನಿಖೆ ಮಾಡಲಿ ಎಸ್ಐಟಿ. ಧರ್ಮಸ್ಥಳ ಹೆಸರ ಮೇಲೆ ಅಪಪ್ರಚಾರ ಮಾಡ್ತಿರೋದು ಸರಿಯಲ್ಲ ಎಂದು ಹೇಳಿದ್ದಾರೆ.
ತಪ್ಪು ಮಾಡಿರೋದು ವ್ಯಕ್ತಿ, ಆದ್ರೆ ಸಂಸ್ಥೆ ಹೆಸರಿಗೆ ಯಾಕೆ ಅಪಪ್ರಚಾರ ಮಾಡಬೇಕು. ಎಸ್ಐಟಿ ತಂಡದವರಿಗೆ ಬೇರೆ ಯಾವುದೇ ಹೊಣೆ ಕೊಡದೇ ಇದನ್ನಷ್ಟೇ ತನಿಖೆ ಮಾಡಿಸಲಿ. ಈ ತನಿಖೆಯಲ್ಲೇ ಎಸ್ಐಟಿ ತಂಡ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲಿ ಎಂದು ಆರ್ ಆಶೋಕ್ ಮಾಧ್ಯಮಗಳಿಗೆ ಹೇಳಿದ್ದಾರೆ.
ಇದನ್ನೂ ಓದಿ: Aadhaar card: ಇನ್ನು ಶಾಲೆಗಳಲ್ಲೇ ಮಕ್ಕಳ ಆಧಾರ್ ಕಾರ್ಡ್ ಅಪ್ಡೇಡ್!
