Dog Satish : ಬಿಗ್ ಬಾಸ್ ಖ್ಯಾತಿಯ ಡಾಗ್ ಸತೀಶ್ ಅವರು ಇತ್ತೀಚಿನ ದಿನಗಳಲ್ಲಿ ತಮ್ಮ ಹೇಳಿಕೆಗಳ ಮುಖಾಂತರ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಸದ್ದು ಮಾಡುತ್ತಿದ್ದಾರೆ. ಅವರು ಹೇಳುವುದು ಸುಳ್ಳೋ, ನಿಜವೋ ತಿಳಿಯದು. ಆದರೆ ಅವರ ಕಾನ್ಫಿಡೆನ್ಸ್ ಲೆವೆಲ್ ನೋಡಿದರೆ ಎಂಥವರೇ ಆದರೂ ಮೆಚ್ಚಲೇಬೇಕು. ತನ್ನ ಬಗ್ಗೆ ತಾನೇ ಬಿಲ್ಡಪ್ ಕೊಟ್ಟುಕೊಳ್ಳುವ ಡಾಗ್ ಸತೀಶ್ ಅವರು ಇದೀಗ ಮಲಗುವ ವಿಚಾರದಲ್ಲಿ ದೊಡ್ಡ ಸ್ಟೇಟ್ಮೆಂಟ್ ಕೊಟ್ಟು ಸುದ್ದಿಯಾಗುತ್ತಿದ್ದಾರೆ.
ಹೌದು, ಬಾಯಿ ಬಿಟ್ಟರೆ ಕೋಟಿ ಲೆಕ್ಕದಲ್ಲಿಯೇ ಮಾತನಾಡುವ ಡಾಗ್ ಸತೀಶ್ ಅವರು ಇದೀಗ ಆಯಂಕರ್ ವಿಷ್ ಎನ್ನುವ ಇನ್ಸ್ಟಾಗ್ರಾಮ್ಗೆ ನೀಡಿರುವ ಸ್ಟೇಟ್ಮೆಂಟ್ ಮಾತ್ರ ಶಾಕಿಂಗ್ ಆಗಿದೆ. ಅದರಲ್ಲಿ ಅವರು, ನಾನು ಆ ಸ್ಥಳಕ್ಕೆ ಹೋದಾಗ ಸಿಎಂ ಮಲಗೋ ಜಾಗವನ್ನು ನನಗೆ ಕೊಟ್ಟಿದ್ದರು, ಡಿಸಿಎಂ ಮಲಗುವ ಜಾಗದಲ್ಲಿ ನನ್ನ ನಾಯಿ ಮಲಗಿತ್ತು ಎಂದು ಹೇಳಿದ್ದಾರೆ!
ನಾನು ಸಿಂಪಲ್ ಡ್ರೆಸ್ನಲ್ಲಿ ಹೋಗಿದ್ದೆ. ಅಲ್ಲಿಯ ಡಿಸಿ ಮೇಡಮ್ಮು ಬಂದು ನನ್ನ ನಾಯಿ ನೋಡಿದರು. ನಾಯಿಯ ಜೊತೆಗೆ ಒಂದು ಫೋಟೋ ಬೇಕು ಅಂದೆ. ಆದರೆ ನಾಯಿಯನ್ನು ನೋಡಿದ ಮೇಡಂ ಥೂ ಎಂದರು. ಆಮೇಲೆ ನಾನು ಆ ನಾಯಿ 20 ಕೋಟಿಯದ್ದು ಎಂದೆ ಎಂದೆ. ಆಗ ನನ್ನ ನಾಯಿಯ ಬೆಲೆ ಕೇಳಿದ ಬಳಿಕ ಆ ಮೇಡಂ, ನನಗೆ ನಾಯಿ ಬೇಡ, ಅದರ ಮಾಲೀಕ ಬೇಕು ಎಂದು ನನ್ನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
