Monalisa: ಕುಂಭಮೇಳದಲ್ಲಿ ರಾತ್ರೋರಾತ್ರಿ ಫೇಮಸ್ ಆಗಿದ್ದ ಸುಂದರಿ ಮೊನಾಲಿಸಾ ಅವರು ಶಾಕಿಂಗ್ ಹೇಳಿಕೆ ಒಂದನ್ನು ನೀಡಿದ್ದು ನಾನು ಹೋಟೆಲ್ ನಲ್ಲಿ ಆ ನಿರ್ದೇಶಕರೊಂದಿಗೆ ತಂಗಿದ್ದೇನೆ ಎಂದು ಶಾಕಿಂಗ್ ವಿಚಾರ ಬಿಚ್ಚಿಟ್ಟಿದ್ದಾರೆ.
ಹೌದು, ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳಕ್ಕೆ ಆಗಮಿಸಿದ ಕೋಟ್ಯಂತರ ಮಂದಿಯ ನಡುವೆ, ರುದ್ರಾಕ್ಷಿ ಸರ ಮಾರಾಟ ಮಾಡುತ್ತಿದ್ದ 16 ವರ್ಷದ ಹುಡುಗಿ ಮೊನಾಲಿಸಾ ಎಲ್ಲರನ್ನು ತನ್ನತ್ತ ಸೆಳೆಯುವ ಮೂಲಕ ರಾತ್ರೋ ರಾತ್ರಿ ಇಡೀ ದೇಶದ ಗಮನ ಸೆಳೆದಿದ್ದಳು. ಸೋಷಿಯಲ್ ಮೀಡಿಯಾಗಳಲ್ಲಿ ಈಕೆಯದ್ದೇ ಕಾರುಬಾರು ಆಗಿತ್ತು. ಕುಂಭಮೇಳ ಎಂದರೆ ಮೊನಾಲಿಸಾ ಎನ್ನುವಷ್ಟರ ಮಟ್ಟಿಗೆ ಈಕೆ ಸದ್ದು ಮಾಡುತ್ತಿದ್ದಳು. ಮೊನಾಲಿಸಾಳಿಗೆ ಸಿನಿಮಾಗಳ ಆಫರ್ ಕೂಡ ಬಂದಿದ್ದು ಸನೋಜ್ ಮಿಶ್ರಾ ಅವರು ಮೊನಾಲಿಸಾಗೆ ಚಿತ್ರದಲ್ಲಿ ಒಂದು ಪಾತ್ರವನ್ನು ನೀಡಿದ್ದರು. ಬಳಿಕಾ ಮನಾಲಿಸಳಿಗೆ ನಟನೆಯ ತರಬೇತಿ ಕೂಡ ನಡೆದಿತ್ತು. ಇದರ ನಡುವೆ ಸನೋಜ್ ಮಿಶ್ರಾ ಅವರನ್ನು ಇತ್ತೀಚೆಗೆ ಪೊಲೀಸರು ಬಂಧಿಸಿದ್ದು, ಅತ್ಯಾಚಾರದಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ.
ಇದರ ನಡುವೆ ಮೊನಾಲಿಸಾ ಸಂದರ್ಶನವೊಂದರಲ್ಲಿ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ತಾನು ಸನೋಜ್ ಮಿಶ್ರಾ ಅವರೊಂದಿಗೆ ಹೋಟೆಲ್‌ನಲ್ಲಿ ತಂಗಿದ್ದಾಗಿ ಒಪ್ಪಿಕೊಂಡಿದ್ದಾರೆ. ಮೊನಾಲಿಸಾ ಹೇಳುವಂತೆ.. ಸನೋಜ್ ಸರ್ ತುಂಬಾ ಒಳ್ಳೆಯ ವ್ಯಕ್ತಿ. ಅವರಿಗೆ ಕೆಟ್ಟದಾಗುತ್ತಿದೆ.. ನನಗೆ ಅವರು ಯಾವುದೇ ಕೆಟ್ಟದ್ದನ್ನು ಮಾಡಿಲ್ಲ ಎಂದು ಹೇಳಿದ್ದಾರೆ.
