Home » Sadhu Kokila: ‘ಸಿನಿಮಾದವರ ನಟ್-ಬೋಲ್ಟ್ ಸರಿ ಮಾಡುವೆ’ – ಡಿಕೆಶಿ ಹೇಳಿಕೆಗೆ ನಟ ಹಾಗೂ ಕಾಂಗ್ರೆಸ್ ನಾಯಕ ಸಾಧು ಕೋಕಿಲ ಫಸ್ಟ್ ರಿಯಾಕ್ಷನ್!!

Sadhu Kokila: ‘ಸಿನಿಮಾದವರ ನಟ್-ಬೋಲ್ಟ್ ಸರಿ ಮಾಡುವೆ’ – ಡಿಕೆಶಿ ಹೇಳಿಕೆಗೆ ನಟ ಹಾಗೂ ಕಾಂಗ್ರೆಸ್ ನಾಯಕ ಸಾಧು ಕೋಕಿಲ ಫಸ್ಟ್ ರಿಯಾಕ್ಷನ್!!

0 comments

Sadhu Kokila: ಬೆಂಗಳೂರಿನಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಿನಿಮಾದವರ ನಟ್ ಬೋಲ್ಟ್ ಸರಿ ಮಾಡುವುದು ಹೇಗೆ ಎಂದು ನನಗೆ ಗೊತ್ತಿದೆ ಎಂದು ಹೇಳಿಕೆ ನೀಡಿದ್ದರು. ಇದು ರಾಜ್ಯಾದ್ಯಂತ ಭಾರಿ ವೈರಲಾಗಿತ್ತು. ಇದಕ್ಕೆ ಅನೇಕ ನಟ ನಟಿಯರು ರಿಯಾಕ್ಟ್ ಮಾಡಿದರು. ಇದೀಗ ಈ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಹಾಗೂ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಆಗಿರುವ ಸಾಧುಕೋಕಿಲ(Sadhu Kokila) ಅವರು ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಯಸ್, ಡಿಸಿಎಂ ಡಿಕೆಶಿ ನಟನಟಿಯರಿಗೆ ನೀಡಿದ ‘ನಟ್ ಬೋಲ್ಟ್ ಟೈಟ್’ ಹೇಳಿಕೆ ಕುರಿತು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಸ್ಪಷ್ಟನೆ ನೀಡಿದ್ದಾರೆ. ಡಿಸಿಎಂ ಅವರು ನಟನಟಿಯರಿಗೆ ಯಾವುದೇ ವಾರ್ನಿಂಗ್ ನೀಡಿಲ್ಲ, ಬದಲಾಗಿ ಅವರು ಕೂಡ ಒರ್ವ ವಿತರಕರಾಗಿದ್ದರಿಂದ ಸಿನಿಮಾ ಮೇಲಿನ ಪ್ರೀತಿಯಿಂದ ಹಾಗೆ ಹೇಳಿರಬಹುದು ಎಂದು ಸಾಧು ಕೋಕಿಲ ಹೇಳಿದ್ದಾರೆ. “ಅದನ್ನೇ ವಿವಾದ ಮಾಡಿಕೊಂಡು ಮಾತನಾಡುತ್ತಿದ್ದರೆ ನಾವೇನು ಮಾಡಲು ಸಾಧ್ಯ? ನಮ್ಮ ಚಿತ್ರರಂಗದಲ್ಲಿ ಒಗ್ಗಟ್ಟಿದೆ ಎಂದಿದ್ದಾರೆ.

You may also like