ಜನರು ಎಷ್ಟೇ ಕೆಲಸದ ಒತ್ತಡ ಇದ್ದರೂ ಸಹ ಮನೋರಂಜನೆಗಾಗಿ ಸ್ವಲ್ಪ ಬಿಡುವು ಮಾಡಿಕೊಳ್ಳುತ್ತಾರೆ ಅನ್ನೋದು ಸತ್ಯ. ಹೌದು ಸಿನಿಮಾ, ಆಟೋಟ ಮುಂತಾದವುಗಳನ್ನು ವೀಕ್ಷಿಸುವುದರಲ್ಲಿ ಕೆಲವರಂತೂ ಎತ್ತಿದ ಕೈ ಅನ್ನಬಹುದು.ಭಾರತದಲ್ಲಿ ಕ್ರಿಕೆಟ್‌ಗೆ ಇರುವಷ್ಟು ಕ್ರೇಜ್ ಬಹುಶಃ ಮತ್ತೆ ಯಾವುದೇ ಕ್ರೀಡೆಗೂ ಸಿಗೋದಿಲ್ಲ. ಸಿಗೋಕೆ ಸಾಧ್ಯವೂ ಇಲ್ಲ. ಅದಲ್ಲದೆ ಈಗಾಗಲೇ ಟಿ 20ವಿಶ್ವ ಕಪ್ ಆರಂಭ ಆಗಿರುವ ವಿಷಯ ಗೊತ್ತೇ ಇದೆ.
ಹೌದು ಟಿ20 ವಿಶ್ವಕಪ್‌ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯ ಕುತೂಹಲ ಮೂಡಿಸಿದೆ. ಭಾರತವು ಇಂಗ್ಲೆಂಡ್ ಗೆಲುವಿಗೆ 169 ರನ್‌ಗಳ ಟಾರ್ಗೆಟ್ ನೀಡಿದೆ. ಭಾರತದಲ್ಲಿ ಸೆಮಿಫೈನಲ್ ಜೋಶ್ ಎಷ್ಟರ ಮಟ್ಟಿಗೆ ಇದೆ ಎಂದರೆ, ಮಧ್ಯಾಹ್ನದ ನಂತರ ಪಂದ್ಯ ವೀಕ್ಷಣೆಗಾಗಿ ಕೋರ್ಟ್ ಕಲಾಪವನ್ನೇ ಬಂದ್ ಮಾಡಲಾಗಿದೆ.
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದ ಸೂಪರ್ ಆಗಿ ನಡೆಯುತ್ತಿದೆ. ಆದರೆ, ಪಟಿಯಾಲಾದಲ್ಲಿ ಸೆಮಿಫೈನಲ್ ಪಂದ್ಯ ನೋಡುವ ಸಲುವಾಗಿಯೇ ಮಧ್ಯಾಹ್ನದ ನಂತರದ ಕೋರ್ಟ್ ಕಲಾಪಗಳನ್ನೇ ರದ್ದು ಮಾಡಲಾಗಿದೆ.
ಪಟಿಯಾಲಾದ ಜಿಲ್ಲಾ ವಕೀಲರ ಸಂಘವು (ಡಿಬಿಎ) ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್‌ನ ಸೆಮಿಫೈನಲ್ ಕ್ರಿಕೆಟ್ ಪಂದ್ಯದ ದೃಷ್ಟಿಯಿಂದ ಪಟಿಯಾಲಾದ ಜಿಲ್ಲಾ ನ್ಯಾಯಾಲಯದಲ್ಲಿ ಮಧ್ಯಾಹ್ನ 1.30ರ ನಂತರ ನೋ ವರ್ಕ್ ಆಫ್ಟರ್ ಲಂಚ್ ಅಂದರೆ ಭೋಜನದ ಬಳಿಕ ಕೆಲಸವಿಲ್ಲ ಎನ್ನುವ ನಿರ್ಣಯವನ್ನು ಹೊರಡಿಸಿದೆ.
ಅಡ್ವೋಕೇಟ್ ಜತೀಂದರ್ ಪಾಲ್ ಸಿಂಗ್ ಘುಮಾನ್ ಅವರ ಅಧ್ಯಕ್ಷತೆಯಲ್ಲಿ ಇಂದು ಕಾರ್ಯಕಾರಿಣಿಯ ತುರ್ತು ಸಭೆಯಲ್ಲಿ ಈ ನಿರ್ಧಾರ ನಡೆಸಲಾಗಿತ್ತು. ಅದಲ್ಲದೆ “ಎಲ್ಲಾ ಗೌರವಾನ್ವಿತ ನ್ಯಾಯಾಂಗ ಅಧಿಕಾರಿಗಳು, ಕಂದಾಯ ನ್ಯಾಯಾಲಯಗಳು, ನ್ಯಾಯಮಂಡಳಿಗಳ ಅಧ್ಯಕ್ಷರು, ಕಮಿಷನರ್ ನ್ಯಾಯಾಲಯಗಳು ಇಂದು ಪಟ್ಟಿ ಮಾಡಲಾದ ವಿಷಯಗಳನ್ನು ಇತರ ಕೆಲವು ದಿನಾಂಕಗಳಿಗೆ ಮುಂದೂಡಲು ವಿನಂತಿಸಲಾಗಿದೆ” ಎಂದು ನೋಟಿಸ್ ಮೂಲಕ ತಿಳಿಸಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ T20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯ ಇಂದು ಅಂದರೆ 10/11/2022 ರಂದು ಸುಮಾರು 1:30 PM ಕ್ಕೆ ನಡೆಯಲಿದೆ. ಆದ್ದರಿಂದ ಡಿಬಿಎ ನೀಡಿದ ನೋಟಿಸ್‌ನ ಪ್ರಕಾರ ಪಟಿಯಾಲದ ಜಿಲ್ಲಾ ನ್ಯಾಯಾಲಯಗಳಲ್ಲಿ ಮಧ್ಯಾಹ್ನದ ಊಟದ ನಂತರ, ಪಟಿಯಾಲಾದ ಜಿಲ್ಲಾ ವಕೀಲರ ಸಂಘ ಯಾವುದೇ ಕೆಲಸವನ್ನು ಮಾಡೋದಿಲ್ಲ ಎಂದು ನಿರ್ಧರಿಸಲಾಗಿದೆ,”
