ICICI Bank : ಸಾಲ(loan) ಎಂಬುದು ಮನುಷ್ಯನ ಅವಿಭಾಜ್ಯ ಅಂಗವಾಗಿದೆ ಎಂದರೆ ತಪ್ಪಾಗಲಾರದು. ಯಾಕಂದ್ರೆ ಯಾವುದೇ ಒಂದು ಕೆಲಸಕ್ಕೆ ಕೈ ಹಾಕಬೇಕಾದರೂ ಹಣ (money) ಅವಶ್ಯಕ. ಹೀಗಾಗಿ ಇಂತಹ ದುಬಾರಿ ದುನಿಯಾದಲ್ಲಿ ಸಾಲವೇ ಮೊದಲ ಆಯ್ಕೆಯಾಗಿದೆ. ಆದ್ರೆ, ಸಾಲದ ಜೊತೆಗೆ ಬಡ್ಡಿಯ ಚಿಂತೆ ಅಧಿಕವಾಗಿದೆ. ಇಂತಹ ಸಮಸ್ಯೆ ಬಗೆಹರಿಸಲೆಂದೆ ಬ್ಯಾಂಕ್(bank) ಗಳು ಕಡಿಮೆ ಬಡ್ಡಿ ಸಾಲ ನೀಡುತ್ತಿದೆ. ಇಂತಹ ಬ್ಯಾಂಕ್ ಗಳಲ್ಲಿ ಐಸಿಐಸಿಐ ಬ್ಯಾಂಕ್ (ICICI Bank )ಕೂಡ ಒಂದು. ಹಾಗೆಯೇ ಉತ್ತಮ ಉಳಿತಾಯ ಯೋಜನೆಗಳನ್ನು ಕೂಡ ಹೊಂದಿದೆ.
ಹೌದು. ಐಸಿಐಸಿಐ ಬ್ಯಾಂಕ್ ಗೋಲ್ಡನ್ ಇಯರ್ಸ್ ಎಫ್ಡಿ ಸ್ಕೀಮ್ನ್ನು ಒಳಗೊಂಡಿದ್ದು, ಶೇ. 0.6ರಷ್ಟು ಹೆಚ್ಚುವರಿ ಬಡ್ಡಿ ಕೊಡುವ ಯೋಜನೆ ಇದಾಗಿದೆ. ಹಿರಿಯ ನಾಗರಿಕರಿಗೆಂದು 2020 ಮೇ 20ರಂದು ಆರಂಭಗೊಂಡ ಐಸಿಐಸಿಐ ಬ್ಯಾಂಕ್ ಗೋಲ್ಡನ್ ಇಯರ್ಸ್ ಎಫ್ಡಿ ಸ್ಕೀಮ್ನ ನಿಶ್ಚಿತ ಠೇವಣಿ ಇದಾಗಿದ್ದು, ಇದರ ಅಂತಿಮ ಅವಧಿ ಅಕ್ಟೋಬರ್ 31ರವರೆಗೂ ವಿಸ್ತರಿಸಲಾಗಿದೆ.
ಇಂದು ಏಪ್ರಿಲ್ 7, ಐಸಿಐಸಿಐ ಬ್ಯಾಂಕ್ ಗೋಲ್ಡನ್ ಇಯರ್ಸ್ ಎಫ್ಡಿ ಸ್ಕೀಮ್ನ ಕೊನೆಯ ದಿನ ಆಗಿತ್ತು. ಇದೀಗ ಇದರ ಅವಧಿಯನ್ನು ಆರು ತಿಂಗಳವರೆಗೆ ಹೆಚ್ಚಿಸಲಾಗಿದೆ. ಈ ವಿಶೇಷ ಎಫ್ಡಿ ಸ್ಕೀಮ್ನಲ್ಲಿ ಇಡಲಾಗುವ ಠೇವಣಿಗಳಿಗೆ ಶೇ. 6.9ರವರೆಗೂ ಬಡ್ಡಿ ಕೊಡಲಾಗುತ್ತದೆ. ಅದರ ಮೇಲೆ 50 ಮೂಲಾಂಕಗಷ್ಟು ಹೆಚ್ಚುವರಿ ಬಡ್ಡಿ ಸಿಗುತ್ತದೆ. ಇನ್ನೂ 10 ಮೂಲಾಂಕಗಳಷ್ಟು ಇನ್ನಷ್ಟು ಹೆಚ್ಚುವರಿ ಬಡ್ಡಿ ಸಿಗುತ್ತದೆ. ಒಟ್ಟು ಶೇ. 7.6ರಷ್ಟು ಬಡ್ಡಿ ಈ ಠೇವಣಿಗಳಿಗೆ ಸಂದಾಯವಾಗುತ್ತದೆ.
ಗರಿಷ್ಠ ಬಡ್ಡಿ 5 ವರ್ಷ 1ದಿನದಿಂದ 10 ವರ್ಷದವರೆಗಿನ ಠೇವಣಿಗಳಿಗೆ ಸಿಗುತ್ತದೆ. ಬೇರೆ ಅವಧಿಯ ಠೇವಣಿಗಳಿಗೆ ಬಡ್ಡಿ ದರ ತುಸು ಕಡಿಮೆ ಇರುತ್ತದೆ. ಹೊಸದಾಗಿ ಎಫ್ಡಿ ಮಾಡಿಸುವವರಷ್ಟೇ ಅಲ್ಲದೇ, ಈಗಾಗಲೇ ಈ ಸ್ಕೀಮ್ ಪಡೆದು ಅದನ್ನು ಅಕ್ಟೋಬರ್ 31ರಷ್ಟರಲ್ಲಿ ನವೀಕರಿಸಿದವರಿಗೂ ಶೇ. 0.1ರಷ್ಟು ಹೆಚ್ಚುವರಿ ಬಡ್ಡಿಯ ಸೌಲಭ್ಯ ಸೇರ್ಪಡೆಯಾಗುತ್ತದೆ.
ಇಷ್ಟೇ ಅಲ್ಲದೆ, ಐಸಿಐಸಿಐ ಬ್ಯಾಂಕ್ನ ಈ ವಿಶೇಷ ಎಫ್ಡಿ ಸ್ಕೀಮ್ ಪಡೆದರೆ ಸಾಲದ ಸೌಲಭ್ಯವೂ ಸಿಗುತ್ತದೆ. ಹೌದು. ಎಫ್ಡಿಯಾಗಿ ಇಟ್ಟಿರುವ ಹಣ, ಹಾಗೂ ಆವರೆಗೂ ಜಮೆಯಾಗಿರುವ ಬಡ್ಡಿ ಇವೆಲ್ಲವೂ ಸೇರಿದ ಶೇ. 90ರಷ್ಟು ಮೊತ್ತದ ಹಣವನ್ನು ಸಾಲವಾಗಿ ಪಡೆಯಬಹುದು. ಹಾಗೂ ಎಫ್ಡಿ ಮೊತ್ತದ ಆಧಾರವಾಗಿ ಐಸಿಐಸಿಐ ಬ್ಯಾಂಕಿನಲ್ಲಿ ಕ್ರೆಡಿಟ್ ಕಾರ್ಡ್ ಕೂಡ ಪಡೆಯುವ ಅವಕಾಶ ಇರುತ್ತದೆ. ಐಸಿಐಸಿಐ ಬ್ಯಾಂಕ್ನ ವೆಬ್ಸೈಟ್, ಮೊಬೈಲ್ ಬ್ಯಾಂಕಿಂಗ್, ಆಯಪ್ಗಳ ಮೂಲಕ ಆನ್ಲೈನ್ನಲ್ಲೇ ಎಫ್ಡಿ ತೆರೆಯಬಹುದು. ಬ್ಯಾಂಕ್ನ ಶಾಖಾ ಕಚೇರಿಗೆ ಹೋಗಿಯೂ ನಿಶ್ಚಿತ ಠೇವಣಿ ಆರಂಭಿಸಬಹುದು. ಗರಿಷ್ಠ 2 ಕೋಟಿ ರೂವರೆಗೆ ಠೇವಣಿ ಇಡಬಹುದು.
