Home » Black Milk: ಗೆಸ್ ಮಾಡಿ! ಒಂದು ಪ್ರಾಣಿ ಕಪ್ಪು ಹಾಲು ಕೊಡುತ್ತೆ ಹಾಗಿದ್ರೆ ಯಾವುದು ಆ ಪ್ರಾಣಿ?

Black Milk: ಗೆಸ್ ಮಾಡಿ! ಒಂದು ಪ್ರಾಣಿ ಕಪ್ಪು ಹಾಲು ಕೊಡುತ್ತೆ ಹಾಗಿದ್ರೆ ಯಾವುದು ಆ ಪ್ರಾಣಿ?

0 comments

Black Milk: ಜಗತ್ತಿನಲ್ಲಿ ಅನೇಕ ಅಚ್ಚರಿಯ ಸಂಗತಿಗಳು ಇವೆ. ಕೆಲವು ನಮಗೆ ತಿಳಿಯದೆ ಇರಬಹುದು. ಅದರಲ್ಲೂ ಶೇ 99% ಜನರಿಗೆ ಗೊತ್ತಿಲ್ಲದ ಒಂದು ವಿಷಯವನ್ನು ಇಲ್ಲಿ ನಾವು ತಿಳಿಸುತ್ತೇವೆ ನೋಡಿ.

ಹೌದು, ಸಾಮಾನ್ಯವಾಗಿ ಹಾಲು ಎಂದಾಗ ಬಿಳಿ ಬಣ್ಣ ಮಾತ್ರ ನೆನಪಾಗುತ್ತೆ. ಮನುಷ್ಯರು ಮಾತ್ರವಲ್ಲದೆ ದನ, ಆಡು, ಒಂಟೆ, ಸಿಂಹ ಮತ್ತು ಹುಲಿ ಸೇರಿದಂತೆ ಹಲವು ಪ್ರಾಣಿಗಳು, ಅನೇಕ ಸಸ್ತನಿಗಳು ಕೂಡ ತಾಯಿಯ ಹಾಲನ್ನು ಸೇವಿಸಿಯೇ ಬೆಳೆಯುತ್ತವೆ. ಮತ್ತು ಇವುಗಳು ಯಾವುದೇ ಬಣ್ಣದಿಂದ ಕೂಡಿದ್ದರು ಕೂಡಾ ಅದರ ಹಾಲು ಬಿಳಿ ಬಣ್ಣದ್ದೇ ಆಗಿರುತ್ತೆ.

ಮಾಹಿತಿ ಪ್ರಕಾರ, ಪ್ರಪಂಚದಲ್ಲಿ ಸುಮಾರು 6,400 ಬಗೆಯ ಸಸ್ತನಿಗಳಿವೆ ಎಂದು ಹೇಳಲಾಗುತ್ತದೆ. ವಿಶೇಷವೆಂದರೆ ಈ 6,400 ಸಸ್ತನಿಗಳಲ್ಲಿ ಒಂದು ಪ್ರಾಣಿ ಮಾತ್ರ ಕಪ್ಪು ಹಾಲನ್ನು (Black Milk) ಉತ್ಪಾದಿಸುತ್ತದೆ ಅಂದರೆ ನೀವು ನಂಬಲೇ ಬೇಕು. ಆ ಪ್ರಾಣಿ ಯಾವುದು ನೋಡೋಣ ಬನ್ನಿ.

ಕಪ್ಪು ಹಾಲನ್ನು ನೀಡುವ ಘೇಂಡಾಮೃಗಗಳನ್ನು ಆಫ್ರಿಕನ್ ಕಪ್ಪು ಘೇಂಡಾಮೃಗ ಎಂದು ಕರೆಯಲಾಗುತ್ತದೆ. ಈ ಜಾತಿಯ ಘೇಂಡಾಮೃಗಗಳ ಹಾಲಿನಲ್ಲಿ ಕೇವಲ ಶೇ.0.2ರಷ್ಟು ಕೊಬ್ಬಿದೆ. ಘೇಂಡಾಮೃಗದ ಹಾಲು ನೀರು ಮತ್ತು ಕಪ್ಪು ಬಣ್ಣದಿಂದ ಕೂಡಿರುತ್ತದೆ.

ಈ ಕಪ್ಪು ಘೇಂಡಾಮೃಗಗಳು 4 ರಿಂದ 5 ವರ್ಷ ವಯಸ್ಸಿನಲ್ಲಿ ಮಾತ್ರ ಸಂತಾನೋತ್ಪತ್ತಿ ಮಾಡುತ್ತದೆ. ಈ ಘೇಂಡಾಮೃಗಗಳು ಒಂದು ವರ್ಷಕ್ಕಿಂತಲೂ ಹೆಚ್ಚಿನ ಕಾಲದವರೆಗೆ ಗರ್ಭಿಣಿಯಾಗಿರುತ್ತದೆ. ಈ ಪ್ರಾಣಿಗಳು ಒಂದು ಬಾರಿಗೆ ಕೇವಲ ಒಂದು ಮರಿಗೆ ಮಾತ್ರ ಜನ್ಮ ನೀಡುತ್ತದೆ.

You may also like

Leave a Comment