by V R
0 comments

Shriranga Pattana: ಸರ್ಕಾರಿ ಜಮೀನುಗಳನ್ನೇನಾದರೂ ಮುಸ್ಲಿಮರ ಹೆಸರಿಗೆ ಮಾಡಿಕೊಟ್ಟರೆ ನಿಮ್ಮನ್ನು ನೇಣು ಹಾಕಿಬಿಡುತ್ತೀನಿ ಎಂದು ಕಾಂಗ್ರಸ್‌ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಅಧಿಕಾರಿಗಳಿಗೆ ಧಮ್ಕಿ ಹಾಕಿದ್ದಾರೆನ್ನಲಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಶ್ರೀರಂಗಪಟ್ಟಣದ ಕಾಂಗ್ರೆಸ್‌ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ತಾಲೂಕಿನ ಮಹದೇವಪುರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಬಗರ್ ಹುಕ್ಕುಂನಲ್ಲಿ ಅರ್ಜಿ ಹಾಕಿರುವ ಮುಸ್ಲಿಮರಿಗೆ ಜಮೀನು ನೀಡಬಾರದು. ಸರ್ಕಾರಿ ಜಮೀನು ಸರ್ಕಾರಕ್ಕೆ ಇರಬೇಕು ಎಂದಿರುವ ಶಾಸಕ ರಮೇಶ್‌, ಯಾರಾದ್ರು ಅದನ್ನ ಸಾಬ್ರು ಹೆಸ್ರಿಗೆ ಮಾಡಿದ್ರೆ ನೇಣಾಕೋದು ಗ್ಯಾರಂಟಿ ಎಂದು ಕೈ ಶಾಸಕ ರಮೇಶ್ ಬಾಬು ಜನರ ಮುಂದೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಇನ್ನು ಶಾಸಕರು ಈ ರೀತಿ ಹೇಳಿಕೆ ಕೊಡುತ್ತಿದ್ದಂತೆ ಇದುವರೆಗೂ ಮುಸ್ಲಿಂರ ಪರ ಇದ್ದ ಶಾಸಕ ಇದೀಗ ಸಾಬ್ರು ಎಂದು ಉಲ್ಟಾ ಹೊಡೆದಿದ್ದಾರೆಂದು ಕ್ಷೇತ್ರದ ಮುಸ್ಲಿಮರು ಆರೋಪಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: School: ಶಾಲಾ ಮೇಲ್ಚಾವಣಿ ಕುಸಿತ – ಇಬ್ಬರು ವಿದ್ಯಾರ್ಥಿಗಳು ಹಾಗೂ ಶಿಕ್ಷಕನಿಗೆ ಗಾಯ

You may also like