Meghana Raj: ಕನ್ನಡ ಚಿತ್ರರಂಗದಲ್ಲಿ, ಬಾಳಿ ಬದುಕಬೇಕಾಗಿರುವಂತಹ ಅನೇಕ ನಟ-ನಟಿಯರ ಜೋಡಿ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಸಂಗಾತಿಯನ್ನು ಕಳೆದುಕೊಂಡಿವೆ. ಅದರಲ್ಲಿ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಅವರ ಜೋಡಿ ಕೂಡ ಒಂದು. ಹೌದು. ಮದುವೆಯಾಗಿ ತುಂಬಾ ಗರ್ಭಿಣಿಯಾದ ಕೆಲವೇ ಸಮಯದಲ್ಲಿ ಮೇಘನಾ ಅವರು ಚಿರು ಅವರನ್ನು ಕಳೆದುಕೊಂಡರು. ಇಂದಿಗೂ ಮೇಘನಾ, ಚಿರು ನೆನಪಲ್ಲೇ ಜೀವನ ಕಳೆಯುತ್ತಿದ್ದಾರೆ. ಈ ನಡುವೆ ಮೇಘನ ಅವರು ಎರಡನೇ ಮದುವೆಯಾಗುತ್ತಾರೆ ಎಂಬ ವಿಚಾರ ಮುನ್ನಡೆಗೆ ಬಂದಿದ್ದು ಈ ಕುರಿತು ಅವರೇ ಸ್ಪಷ್ಟೀಕರಣ ನೀಡಿದ್ದಾರೆ.
ಗೋಲ್ಡ್ ಕ್ಲಾಸ್ ವಿತ್ ಮಯೂರ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಎರಡನೇ ಮದುವೆಯ ಕುರಿತು ಮಾತನಾಡಿರುವ ಮೇಘನಾ ರಾಜ್ ಸಮಾಜ ಒಪ್ಪಿಕೊಳ್ಳುತ್ತಾ ಅಥವಾ ನನ್ನ ನಿರ್ಧಾರವನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎಂದು ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಆದರೆ ಒತ್ತಡ ಇದ್ದೇ ಇದೆ ಎಂದು ಹೇಳಿದ್ದಾರೆ. ನನಗೆ ಇರುವ ಇಮೇಜ್ ನನ್ನದಲ್ಲ ಬದಲಿಗೆ ಅದು ನನ್ನ ಸುತ್ತ ಮುತ್ತ ಇರುವ ವ್ಯಕ್ತಿಗಳಿಂದ, ಅಭಿಮಾನಿಗಳಿಂದ, ಸೋಶಿಯಲ್ ಮೀಡಿಯಾ ಫ್ಯಾಮಿಲಿಯಿಂದ ಸೃಷ್ಟಿಯಾಗಿದ್ದು ಹೀಗಾಗಿ ಬೇರೆ ರೀತಿ ಯೋಚನೆ ಮಾಡಬೇಕು ಎಂದು ಅಂದುಕೊಂಡರು ಕೂಡ ಅದು ನನ್ನಿಂದ ಸಾಧ್ಯವಾಗುತ್ತಿಲ್ಲ ಎಂದು ಮೇಘನಾ ಹೇಳಿದ್ದಾರೆ.
ಅಲ್ಲದೆ ನಾನು ಎರಡನೇ ಮದುವೆಯಾಗುವುದಿಲ್ಲ ಅಂತ ಅಲ್ಲ. ಹಾಗೊಂದು ವೇಳೆ ಚಿರು ಹರಸಿ ಹಾರೈಸಿದರೆ ಒಪ್ಪಿಗೆ ನೀಡಿದರೆ ಖಂಡಿತ ನಾನು ಮದುವೆಯಾಗುತ್ತೇನೆ ಎಂದು ಹೇಳಿದ್ದಾರೆ ಮೇಘನಾ. ಈ ಕುರಿತು ಮಾತನಾಡಿರುವ ಮೇಘನಾ ರಾಜ್ ಮುಂಬರುವ ದಿನಗಳಲ್ಲಿ ನನ್ನ ಬದುಕಿನಲ್ಲಿ ಯಾರಾದರೂ ಒಬ್ಬ ವ್ಯಕ್ತಿ ಬಂದರೆ, ಚಿರುಗೆ ಆ ವ್ಯಕ್ತಿ ನನಗೆ ಸೂಕ್ತ ಎಂದು ಅನಿಸಿದರೆ ಖುದ್ದು ಚಿರು ಅವರೇ ಮುಂದುವರೆಸುತ್ತಾರೆ ಇಲ್ಲದಿದ್ದರೆ ಚಿರು ತಡೆಯುತ್ತಾರೆ ಎಂದು ಹೇಳಿದ್ದಾರೆ. ನಾನು ಹೀಗೆ ಇರುವುದು ಬೆಸ್ಟ್ ಎಂದು ಅನಿಸಿದರೆ ಚಿರು ಅದನ್ನು ನೋಡಿಕೊಳ್ಳುತ್ತಾರೆ ಎಂದಿದ್ದಾರೆ.
