Congress: ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಇತ್ತೀಚಿಗೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ಕೇಂದ್ರ ಸಚಿವ ಅಮಿತ್ ಶಾ ಜೊತೆ ಡಿಕೆ ಶಿವಕುಮಾರ್ ವೇದಿಕೆ ಹಂಚಿಕೊಂಡ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ “ಕಾಂಗ್ರೆಸ್ (Congress) ನಲ್ಲಿ ಬೇರೆ ನಾಯಕನ ತರ ಡಿ.ಕೆ ಶಿವಕುಮಾರ್ ಅಲ್ಲ, ಅವರದ್ದು ಒದ್ದು ಕಿತ್ತುಕೊಳ್ಳುವ ಜಾಯಮಾನ” ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕರು ಕುಂಭಮೇಳ ವಿಚಾರವಾಗಿ ಟೀಕೆ ಮಾಡಿದ್ರು. ಆದರೆ ಯುಪಿ ಸಿಎಂ ಅವರನ್ನು ಡಿಕೆ ಶಿವಕುಮಾರ್ ಹಾಡಿ ಹೊಗಳಿದ್ರು. ಈಗ ಈಶ ಫೌಂಡೇಶನ್ ಗೆ ಹೋಗಿ ಅಮಿತ್ ಶಾ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ.ಅದಕ್ಕೆ ಕಾಂಗ್ರೆಸ್ ನಾಯಕರು ಹೇಳಿಕೆ ನೀಡುತ್ತಿದ್ದಾರೆ.
“ಕಾಂಗ್ರೆಸ್ ಗೆ ಧಮ್ ಇದ್ದರೆ ಡಿಕೆ ಶಿವಕುಮಾರ್ ಅವರನ್ನು ಅಮಾನತು ಮಾಡಿ” ಎಂದು ಸವಾಲು ಹಾಕಿದ ಆರ್ ಅಶೋಕ್, “ಆದ್ರೆ ಡಿಕೆ ಶಿವಕುಮಾರ್ ಬಿಜೆಪಿಗೆ ಬರುವ ವಿಚಾರವಾಗಿ ಚರ್ಚೆಯಾಗಿಲ್ಲ, ಮೊದಲು ಡಿಕೆ ಯನ್ನು ಅಮಾನತು ಮಾಡಲಿ ಮುಂದೆ ನೋಡೋಣ ಎಂದಿದ್ದಾರೆ.
