Home » Rambapuri Shri: ‘ಜಾತಿ ಗಣತಿ ವರದಿ ‘ ಜಾರಿಯಾದ್ರೆ ಸರ್ಕಾರ ಪತನ – ರಂಭಾಪುರಿ ಶ್ರೀಗಳಿಂದ ಅಚ್ಚರಿ ಭವಿಷ್ಯ!!

Rambapuri Shri: ‘ಜಾತಿ ಗಣತಿ ವರದಿ ‘ ಜಾರಿಯಾದ್ರೆ ಸರ್ಕಾರ ಪತನ – ರಂಭಾಪುರಿ ಶ್ರೀಗಳಿಂದ ಅಚ್ಚರಿ ಭವಿಷ್ಯ!!

0 comments

Ramba Puri Shri: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015ರ (ಜಾತಿ ಗಣತಿ) ದತ್ತಾಂಶಗಳ ಅಧ್ಯಯನ ವರದಿಯು ರಾಜ್ಯದಲ್ಲಿ ಹೊಸ ರೀತಿ ಕಿಚ್ಚನ್ನು ಹಬ್ಬಿಸಿದೆ. ಪ್ರಬಲ ಸಮುದಾಯಗಳು ಈ ಜಾತಿಗಣತಿ ವರದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಈ ಬೆನ್ನಲ್ಲೇ ರಂಭಾಪುರಿ ಮಠದ ಶ್ರೀಗಳು ಸರ್ಕಾರದ ಕುರಿತು ಅಚ್ಚರಿ ಭವಿಷ್ಯ ನುಡಿದಿದ್ದಾರೆ.

ಹೌದು,ರಾಜ್ಯದಲ್ಲಿ ಜಾತಿಗಣತಿ ವರದಿ ಜಾರಿಯಾದ್ರೆ ಸರ್ಕಾರ ಪತನವಾಗಲಿದೆ ಎಂದು ಹಾವೇರಿಯಲ್ಲಿ ರಂಭಾಪುರಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಈ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಾತಿ ಗಣತಿ ಜಾರಿಯಾದ್ರೆ ಸರ್ಕಾರ ಪತನವಾಗುತ್ತೆ ಅಂತ ಕಾಂಗ್ರೆಸ್ ನಾಯಕರೇ ಹೇಳ್ತಾರೆ. ಹೀಗಾಗಿ ಜಾತಿಗಣವತಿ ವರದಿ ಪಾರದರ್ಶವಕಾಗಿ ಆಗಿಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಜಾತಿಗಣತಿ ವರದಿ ಜಾರಿಯಾಗಬಾರದು ಎಂದು ಹೇಳಿದ್ದಾರೆ.

You may also like