Gruha Jyothi: ಗ್ಯಾರೆಂಟಿ ಯೋಜನೆಗಳ ಜಾರಿಯಿಂದಾಗಿ ರಾಜ್ಯ ಸರ್ಕಾರ ಕಂಗೆಟ್ಟಿ ಹೋಗಿದೆ. ಯಾವುದಕ್ಕೆ ಹಣ ಹೊಂದಿಸಬೇಕು ಯಾವುದಕ್ಕೆ ಬಿಡಬೇಕು ಎಂಬುದೇ ಸರ್ಕಾರಕ್ಕೆ ಪ್ರಶ್ನೆಯಾಗಿದೆ. ಈಗಾಗಲೇ 3-4 ತಿಂಗಳ ಗೃಹಲಕ್ಷ್ಮಿ ಹಣವನ್ನು ಯಜಮಾನರಿಗೆ ನೀಡಲಾಗಿಲ್ಲ. ಇನ್ನು ಶಕ್ತಿ ಯೋಜನೆಯು ಕೂಡ ಹಣವಿಲ್ಲದೆ ಸರ್ಕಾರ ಸಾಲದ ಸುಳಿಯಲ್ಲಿ ಸಿಲುಕಿದೆ. ಈ ಬೆನ್ನಲ್ಲೇ ಗೃಹ ಜ್ಯೋತಿ ಯೋಜನೆಗೆ ಕೂಡ ಸರ್ಕಾರದ ಬಳಿ ಹಣವಿಲ್ಲ ಎನ್ನಲಾಗಿದೆ. ಅಚ್ಚರಿ ಏನೆಂದರೆ ಸರ್ಕಾರವೇನಾದರೂ ಗೃಹ ಜ್ಯೋತಿ ಯೋಜನೆಗೆ ಅನುದಾನ ನೀಡದಿದ್ದರೆ ಗ್ರಾಹಕರಿಂದ ಹಣವಸೂಲಿ ಮಾಡಲಾಗುವುದು ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಹೇಳಿಕೆ ನೀಡಿದ್ದಾರೆ.
ಹೌದು ಈ ಕುರಿತು ಬೆಂಗಳೂರಿನಲ್ಲಿ ಬೆಸ್ಕಾಂ ಎಂಡಿ ಶಿವಶಂಕರ್ ಸ್ಪಷ್ಟನೆ ನೀಡಿದ್ದು, ಗೃಹಜ್ಯೋತಿ ಯೋಜನೆಗೆ ಮುಂಗಡ ಅನುದಾನ ನಮಗೆ ನೀಡಲಾಗಿದೆ.ಈ ಯೋಜನೆ ಸಂಬಂಧ ನಮ್ಮಲ್ಲಿ ಮುಂಗಡ 50 ಕೋಟಿ ರೂಪಾಯಿ ಇದೆ. ಸರ್ಕಾರ ಮುಂಗಡ ಹಣ ಕೊಡದೆ ಇದ್ದಲ್ಲಿ ಗ್ರಾಹಕರು ಕೊಡಬೇಕು ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ ತಿಳಿಸಿದ್ದಾರೆ.
ಅಲ್ಲದೆ ಮುಂದುವರೆದ ಮಾತನಾಡಿದ ಅವರು ಆದರೆ ಸರ್ಕಾರ ನಮಗೆ ಪ್ರತಿ ತಿಂಗಳು ಮುಂಗಡ ಹಣ ಬಿಡುಗಡೆ ಮಾಡುತ್ತಿದೆ.ಹಾಗಾಗಿ ಗ್ರಾಹಕರು ಬಿಲ್ ಪಾವತಿಸಬೇಕಾದ ಪ್ರಮೇಯ ಬರುವುದಿಲ್ಲ. ರಾಜ್ಯ ಸರ್ಕಾರ ಉಚಿತ ಯೋಜನೆಗಳ ಸಬ್ಸಿಡಿ ಹಣ ಕೊಡದೆ ಇದ್ದಲ್ಲಿ ಕೆಇಆರ್‌ಸಿ ನಿಯಮಗಳ ಪ್ರಕಾರ ನಾವು ಹಣ ವಸೂಲಿ ಮಾಡುತ್ತೇವೆ ಎಂದು ಹೇಳಿದ್ದಾರೆ.
