Rahul gandhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಚುನಾವಣಾ ಆಯೋಗದ ಮೇಲೆ ತಮ್ಮ ಅತ್ಯಂತ ಪ್ರಬಲ ದಾಳಿಯನ್ನು ಆರಂಭಿಸಿದ್ದಾರೆ , ದೇಶದ ಚುನಾವಣಾ ವ್ಯವಸ್ಥೆ “ಈಗಾಗಲೇ ಸತ್ತಿದೆ” ಎಂದು ಘೋಷಿಸಿದರು. ಮತ್ತು ಇತ್ತೀಚಿನ ಲೋಕಸಭಾ ಚುನಾವಣೆಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದಾರೆ.
ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, 2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಹಳ ಕಡಿಮೆ ಅಂತರದಿಂದ ಗೆದ್ದಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ರಾಹುಲ್ ಪ್ರಕಾರ, “15 ಸ್ಥಾನಗಳಲ್ಲಿ ಮೋಸದಾಟ ಇಲ್ಲದಿದ್ದರೆ, ಪ್ರಧಾನಿ ಮೋದಿ ಇಂದು ಪ್ರಧಾನಿಯಾಗುತ್ತಿರಲಿಲ್ಲ.
ಲೋಕಸಭಾ ಚುನಾವಣೆಯನ್ನು ಹೇಗೆ ತಿರುಚಬಹುದು ಮತ್ತು ಹೇಗೆ ತಿರುಚಲಾಯಿತು ಎಂಬುದನ್ನು ಮುಂದಿನ ಕೆಲವು ದಿನಗಳಲ್ಲಿ ನಾವು ನಿಮಗೆ ಸಾಬೀತುಪಡಿಸಲಿದ್ದೇವೆ” ಎಂದು ಅವರು ಹೇಳಿದರು. ಭಾರತದ ಸಂವಿಧಾನದ ಪ್ರತಿಯನ್ನು ಎತ್ತಿ ಹಿಡಿದು ರಾಹುಲ್ ಗಾಂಧಿ, “ಇದನ್ನು ಹೊಂದಿರುವ ಮತ್ತು ರಕ್ಷಿಸುವ ಸಂಸ್ಥೆಯನ್ನು ಅಳಿಸಿ ಹಾಕಲಾಗಿದೆ ಮತ್ತು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂಬುದು ಬಹಳ ಸ್ಪಷ್ಟವಾಗಿದೆ” ಎಂದು ಹೇಳಿದರು.
ಚುನಾವಣಾ ಆಯೋಗದ ವಿರುದ್ಧದ ತಮ್ಮ ಟೀಕೆಯನ್ನು ತೀಕ್ಷ್ಣಗೊಳಿಸಿದ ಅವರು, “ಚುನಾವಣಾ ಆಯೋಗ ಎಂಬ ಸಂಸ್ಥೆ ಅಸ್ತಿತ್ವದಲ್ಲಿಲ್ಲ ಎಂದು ಇಡೀ ದೇಶಕ್ಕೆ ತೋರಿಸುವಂತಹ ಪುರಾವೆಗಳು ನಮ್ಮಲ್ಲಿವೆ. ಅದು ಕಣ್ಮರೆಯಾಗಿದೆ” ಎಂದು ಹೇಳಿದರು. ಈ ಪುರಾವೆಯನ್ನು ಕಂಡುಹಿಡಿಯಲು ನಾವು 6 ತಿಂಗಳ ನಿರಂತರ ಕೆಲಸ ಮಾಡಿದ್ದೇವೆ. ಲೀಖಸಭೆ ಚುನಾವಣೆಯಲ್ಲಿ ಹೇಗೆ ಕಳ್ಳತನ ಮಾಡಲಾಗುತ್ತದೆ ಎಂಬುದನ್ನು ನೀವು ಸಂದೇಹವಿಲ್ಲದೆ ನೋಡುತ್ತೀರಿ. 6.5 ಲಕ್ಷ ಮತದಾರರು ಮತ ಚಲಾಯಿಸುತ್ತಾರೆ ಮತ್ತು ಆ ಮತದಾರರಲ್ಲಿ 1.5 ಲಕ್ಷ ಮತದಾರರು ನಕಲಿ ಎಂದು ರಾಹುಲೆ ಹೇಳಿದರು.
ಇದನ್ನೂ ಓದಿ: Tirupati : 11, 000 ಕೆಜಿಗೆ ಏರಿಕೆ ತಿಮ್ಮಪ್ಪನ ಚಿನ್ನದ ಭಂಡಾರ!!ಇದರ ಮೌಲ್ಯವೆಷ್ಟು ಗೊತ್ತಾ?
