Home » Muslim: ವಕ್ಫ್ ಸುದ್ದಿಗೆ ಬಂದರೆ ಮುಸ್ಲಿಂ ಸಮುದಾಯ ನಿಮ್ಮ ಸಂತತಿಯನ್ನೇ ಮುಗಿಸುತ್ತದೆ: BJP ಮತ್ತು RSS ಗೆ ಎಚ್ಚರಿಕೆ

Muslim: ವಕ್ಫ್ ಸುದ್ದಿಗೆ ಬಂದರೆ ಮುಸ್ಲಿಂ ಸಮುದಾಯ ನಿಮ್ಮ ಸಂತತಿಯನ್ನೇ ಮುಗಿಸುತ್ತದೆ: BJP ಮತ್ತು RSS ಗೆ ಎಚ್ಚರಿಕೆ

0 comments

Muslim: ಕೊಪ್ಪಳದಲ್ಲಿ ನಡೆದ ವಕ್ಫ್ ಮಂಡಳಿಗೆ ತಿದ್ದುಪಡಿ ಮಸೂದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಎಸ್ ಡಿಪಿಐ ಸಂಘಟನೆ ಕಾರ್ಯಕರ್ತ ಇಮ್ರಾನ್ ವಕ್ಫ್ ತಂಟೆಗೆ ಬಂದರೆ ಮುಸ್ಲಿಂ (Muslim) ಸಮುದಾಯ ನಿಮ್ಮ ಕತೆ ಮುಗಿಸುತ್ತದೆ ಎಂದು ಬಿಜೆಪಿ ಮತ್ತು ಆರ್ ಎಸ್‌ಎಸ್ ಗೆ ಎಚ್ಚರಿಕೆ ನೀಡಿದ್ದಾರೆ.

ಒಂದು ವೇಳೆ ವಕ್ಫ್ ತಂಟೆಗೆ ಬಂದರೆ ನಿಮ್ಮ ಮತ್ತು ನೀವು ಯಾವ ಸಂತತಿಯಿಂದ ಬಂದಿದ್ದೀರೋ ಅವರನ್ನು ಮುಸ್ಲಿಂ ಸಮುದಾಯ ಮುಗಿಸುತ್ತದೆ ಎಂದು ಪ್ರಚೋದನಕಾರೀ ಹೇಳಿಕೆ ನೀಡಿದ್ದಾರೆ.

ನೀವಲ್ಲ ನಿಮ್ಮ ಗುರುವಾದಂತಹ ನಾಗ್ಪುರದಲ್ಲಿರುವ ಸಾವರ್ಕರ್ ನ ಸಂತತಿಗಳು ಬಂದರೂ ಸಹ ಈ ಮುಸಲ್ಮಾನರ ವಕ್ಫ್ ಆಸ್ತಿಯನ್ನು ಮುಟ್ಟಸಲು ಸಾಧ್ಯವಿಲ್ಲ. ಒಂದು ವೇಳೆ ಮುಸಲ್ಮಾನರು ಈಗ ಸಣ್ಣ ಸಣ್ಣ ಪ್ರತಿಭಟನೆ ಮಾಡುತ್ತಿರಬಹುದು. ಇದೇ ದೇಶದಲ್ಲಿ ಮೊದಲು ಎನ್‌ಆರ್ ಸಿ ಜಾರಿಗೆ ತರಲು ಪ್ರಯತ್ನ ಮಾಡಲಾಗಿತ್ತು. ಆಗಲು ನಿಮ್ಮನ್ನು ಹೆಣ್ಣು ಮಕ್ಕಳು ಸದೆ ಬಡಿದಿದ್ದಾರೆ. ಈಗ ಗಂಡು ಮಕ್ಕಳೂ ಹೋರಾಟಕ್ಕಿಳಿದರೆ ನೀವು ಯಾವ ರಾಷ್ಟ್ರದಿಂದ ಬಂದಿದ್ದೀರಿ, ಯಾವ ಸಂತತಿಗಳು ನೀವು ಆ ಸಂತತಿಗಳನ್ನೂ ಕೂಡಾ ಈ ಮುಸಲ್ಮಾನ ಸಮುದಾಯ ಮುಗಿಸಲಿದೆ ಎಂಬ ಸ್ಪಷ್ಟ ಸಂದೇಶವನ್ನು ಬಿಜೆಪಿ ಸರ್ಕಾರ ಮತ್ತು ಆರ್ ಎಸ್‌ಎಸ್ ಗೆ ಎಚ್ಚರಿಕೆ ನೀಡಿದ್ದೇನೆ ಎಂದಿದ್ದಾರೆ.

You may also like

Leave a Comment