Home » Indian Railway: ರೈಲಿನಲ್ಲಿ ಒಣಕೊಬ್ಬರಿ ಕೊಂಡೊಯ್ದರೆ ದಂಡ, ಜೈಲು ಫಿಕ್ಸ್ !! ಯಾಕೆ ಗೊತ್ತಾ?

Indian Railway: ರೈಲಿನಲ್ಲಿ ಒಣಕೊಬ್ಬರಿ ಕೊಂಡೊಯ್ದರೆ ದಂಡ, ಜೈಲು ಫಿಕ್ಸ್ !! ಯಾಕೆ ಗೊತ್ತಾ?

by V R
0 comments

Indian Railway : ರೈಲ್ವೆ ಇಲಾಖೆಯು ತನ್ನ ಪ್ರಯಾಣಿಕರಿಗೆ ಕೆಲವೊಂದು ನಿಯಮಗಳನ್ನು ವಿಧಿಸಿವೆ ಅಂದರೆ ರೈಲಿನಲ್ಲಿ ಯಾವ ವಸ್ತುಗಳನ್ನು ಕೊಂಡೊಯ್ಯಬಾರದು, ಯಾವುದನ್ನು ಕೊಂಡೊಯ್ಯಬಹುದು, ಎಷ್ಟು ಮಿತಿ ಇರಬೇಕು ಎಂಬೆಲ್ಲಾ ರೂಲ್ಸ್ ಗಳನ್ನು ಜಾರಿಗೊಳಿಸಿದೆ. ಅಂತಯೇ ಒಣಕೊಬ್ಬರಿಯನ್ನು ಕೂಡ ರೈಲಿನಲ್ಲಿ ಕೊಂಡೊಯ್ಯಬಾರದು ಎಂಬ ನಿಯಮವಿದೆ. ಒಂದು ವೇಳೆ ನೀವು ತೆಗೆದುಕೊಂಡು ಹೋದರೆ ಜೈಲು ಫಿಕ್ಸ್ ಎಂದು ನಿಯಮ ಹೇಳುತ್ತದೆ. ಹಾಗಿದ್ರೆ ಯಾಕೆ ಈ ನಿಯಮ?

ಹೌದು, ಭಾರತೀಯ ರೈಲ್ವೆಯು ಪ್ರಯಾಣಿಕರ ಹಿತದೃಷ್ಟಿಯಿಂದ ಕೆಲವೊಂದು ವಸ್ತುಗಳನ್ನು ರೈಲು ಪ್ರಯಾಣದ ವೇಳೆ ಬಳಸದಂತೆ ಸೂಚಿಸುತ್ತದೆ. ಮತ್ತೆ ಕೆಲವು ವಸ್ತುಗಳನ್ನು ರೈಲಿನಲ್ಲಿ ತೆಗೆದುಕೊಂಡು ಹೋಗುವುದು ನಿಷಿದ್ಧಗೊಂಡಿದ್ದು, ದಂಡಕ್ಕೂ ಇದು ದಾರಿಯಾಗುತ್ತದೆ. ಅಂತಹ ಕೆಲವು ವಸ್ತುಗಳಲ್ಲಿ ಒಣ ಕೊಬ್ಬರಿ ಕೂಡ ಒಂದಾಗಿದೆ.

ರೈಲ್ವೆ ನಿಯಮಗಳ ಪ್ರಕಾರ ಈ ರೀತಿಯ ಒಣ ಕೊಬ್ಬರಿಯನ್ನು ತೆಗೆದುಕೊಂಡು ಹೋಗುವುದು ಅಪಾಯಕಾರಿ ಎಂದು ಹೇಳಿದೆ. ರೈಲ್ವೆಯ ಪ್ರಮುಖ ನಿಯಮಗಳ ಪ್ರಕಾರ ಸ್ಟೌವ್‌ಗಳು, ಗ್ಯಾಸ್ ಸಿಲಿಂಡರ್‌ಗಳು, ರಾಸಾಯನಿಕಗಳು, ಪಟಾಕಿ, ಚರ್ಮ ಅಥವಾ ಒದ್ದೆಯಾದ ಚರ್ಮ, ಗ್ರೀಸ್, ಸಿಗರೇಟ್ ಮತ್ತು ಸ್ಫೋಟಕಗಳಂತಹ ವಸ್ತುಗಳನ್ನು ರೈಲುಗಳಲ್ಲಿ ಸಾಗಿಸಬಾರದು. ಅದರಲ್ಲೂ ಒಣ ಕೊಬ್ಬರಿಯು ಅದರ ಸುತ್ತಲೂ ಒಣಗಿರುವ ನಾರಿನ ಪದಾರ್ಥ ಹೊಂದಿರಲಿದೆ. ಒಮ್ಮೆ ಇದಕ್ಕೆ ಬೆಂಕಿ ತಗುಲಿದರೆ ಅದರನ್ನು ನಂದಿಸುವುದು ಬಹಳ ಕಷ್ಟ, ಹೀಗಾಗಿ ಒಣ ಕೊಬ್ಬರಿಯನ್ನ ತೆಗೆದುಕೊಂಡು ಹೋಗುವುದು ನಿಷೇಧವಾಗಿದೆ.

ಯಾವುದೇ ಪ್ರಯಾಣಿಕನು ರೈಲಿನಲ್ಲಿ ನಿಷೇಧಿತ ವಸ್ತುಗಳೊಂದಿಗೆ ಪ್ರಯಾಣಿಸುತ್ತಿರುವುದು ಕಂಡುಬಂದರೆ, ರೈಲ್ವೆ ಅವನ ವಿರುದ್ಧ ಕ್ರಮ ಕೈಗೊಳ್ಳಬಹುದು. ಅಂತಹ ಸಂದರ್ಭದಲ್ಲಿ ಪ್ರಯಾಣಿಕನಿಗೆ 1,000 ರೂ. ದಂಡ ಇಲ್ಲವೆ 3 ವರ್ಷಗಳ ಕಾಲ ಜೈಲು ಶಿಕ್ಷೆ ಇಲ್ಲವೆ ಎರಡನ್ನೂ ವಿಧಿಸುವ ಅಧಿಕಾರ ಹೊಂದಿದೆ.

ಇದನ್ನೂ ಓದಿ: UP: ತಾನು ರಕ್ಷಿಸಿದ್ದ ಬೀದಿ ನಾಯಿಯಿಂದಲೇ ಖ್ಯಾತ ಕಬಡ್ಡಿ ಆಟಗಾರ ಸಾವು!!

You may also like