Home » Exam: ನನ್ನನ್ನು ಪಾಸ್ ಮಾಡದಿದ್ದರೆ ನಿಮಗೆ ಡೆಂಗ್ಯೂ ಬರುತ್ತೆ, ಇಡೀ ಕುಟುಂಬ ಸಾಯುತ್ತೆ – ಉತ್ತರಪತ್ರಿಕೆಯಲ್ಲಿ ಶಿಕ್ಷಕರಿಗೆ ವಿದ್ಯಾರ್ಥಿ ಹಿಡಿಶಾಪ

Exam: ನನ್ನನ್ನು ಪಾಸ್ ಮಾಡದಿದ್ದರೆ ನಿಮಗೆ ಡೆಂಗ್ಯೂ ಬರುತ್ತೆ, ಇಡೀ ಕುಟುಂಬ ಸಾಯುತ್ತೆ – ಉತ್ತರಪತ್ರಿಕೆಯಲ್ಲಿ ಶಿಕ್ಷಕರಿಗೆ ವಿದ್ಯಾರ್ಥಿ ಹಿಡಿಶಾಪ

0 comments

Exam: ಪರೀಕ್ಷೆಯಲ್ಲಿ ತನ್ನನ್ನು ಪಾಸ್ ಮಾಡಿ ಎಂದು ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ಶಿಕ್ಷಕರಿಗೆ ಅಥವಾ ಉತ್ತರ ಪತ್ರಿಕೆ ತಿದ್ದುವರ ಬಳಿ ಬಳಿ ಬೇಡಿಕೊಳ್ಳುವ ಬರಹಗಳನ್ನು ನಾವು ನೋಡಿದ್ದೇವೆ. ಅಂತೆಯೇ ಇದೀಗ ಮತ್ತೊಂದು ಬರಹ ಪತ್ತೆಯಾಗಿದೆ. ಆದರೆ ಇದರಲ್ಲಿ ವಿದ್ಯಾರ್ಥಿ ಬರೆದ ಬರಹ ನೋಡಿದರೆ ನೀವು ಅಚ್ಚರಿ ಪಡುತ್ತೀರಿ. ಈ ಉತ್ತರ ಪತ್ರಿಕೆ ಸದ್ಯ ಎಲ್ಲೆಡೆ ವೈರಲಾಗುತ್ತಿದೆ.

ವೈರಲ್ ಆಗಿರುವ ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿ, ಸರ್/ಮೇಡಂ, ನಾನು ನನಗೆ ತಿಳಿದಷ್ಟು ಮಾಡಿದ್ದೇನೆ, ಈಗ ನನಗೆ ಏನು ಮಾಡಬೇಕೆಂದು ತಿಳಿದಿಲ್ಲ. ದಯವಿಟ್ಟು ನನ್ನನ್ನು ಪಾಸ್ ಮಾಡಿ, ನಾನು ಪಾಸ್ ಆಗದಿದ್ದರೆ ನಮ್ಮ ಇಡೀ ಕುಟುಂಬ ಸಾಯುತ್ತದೆ. ಸತ್ತ ನಂತರ ನಾವು ದೆವ್ವಗಳಾಗಿ ನಿಮ್ಮೆಲ್ಲರನ್ನು ಹೆದರಿಸಿ ಬೆದರಿಸುತ್ತೇವೆ. ನನ್ನನ್ನು ಪಾಸ್ ಮಾಡದೇ ಇದ್ದರೆ ನಿಮಗೆ ಡೆಂಘಿ ಬರುತ್ತದೆ ಎಂದೆಲ್ಲಾ ಬರೆದಿದ್ದಾನೆ.

ಈ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡುವ ಶಿಕ್ಷಕರು ಅದರ ಮೇಲೆ ಕೆಂಪು ರೇಖೆಯನ್ನು ಎಳೆದಿದ್ದಾರೆ. ಇನ್ನು ಉತ್ತರ ಪ್ರತಿ ವೈರಲ್ ಆಗುತ್ತಿದ್ದಂತೆ ಮಕ್ಕಳ ಶೈಕ್ಷಣಿಕ ಗುಣಮಟ್ಟದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದ್ದು, ಉತ್ತರಗಳ ಬದಲು ಅವರು ನೆಪ ಮತ್ತು ಶಾಪಗಳನ್ನು ಬರೆಯುತ್ತಿದ್ದಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಶಿಕ್ಷಕರಿಂದ ಪಡೆದ ಮಾಹಿತಿಯಿಂದ, ಈ ಮೌಲ್ಯಮಾಪನ ಮಾಡಿದ ಪ್ರತಿ ಬಿಹಾರ ಮಂಡಳಿಯದ್ದಾಗಿದ್ದು, 10 ನೇ ತರಗತಿಯದ್ದಾಗಿದೆ ಎಂದು ಹೇಳಲಾಗಿದೆ.

You may also like