Home » Luck: ಈ ಒಂದು ದಿನ ತುಳಸಿ ನೆಟ್ಟರೆ ಅದೃಷ್ವವೇ ಬದಲಾಗುತ್ತೆ!

Luck: ಈ ಒಂದು ದಿನ ತುಳಸಿ ನೆಟ್ಟರೆ ಅದೃಷ್ವವೇ ಬದಲಾಗುತ್ತೆ!

by ಹೊಸಕನ್ನಡ
0 comments

 

Luck: ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಪವಿತ್ರವಾದ ಸ್ಥಾನವನ್ನು ನೀಡಲಾಗಿದ್ದು, ಅದನ್ನು ಮನೆಯಲ್ಲಿ ನೆಡುವುದರಿಂದ ಶುಭ ಫಲಗಳು ಪ್ರಾಪ್ತವಾಗುತ್ತದೆ ಎನ್ನುವ ನಂಬಿಕೆಯಿದೆ. ಅದರಲ್ಲೂ ಕೆಲವೊಂದು ವಿಶೇಷವಾದ ದಿನದಂದು ನಾವು ತುಳಸಿ ಗಿಡವನ್ನು ನೆಡುವುದರಿಂದ ಅದೃಷ್ಟವೇ(luck) ಬದಲಾಗುವುದು.

ತುಳಸಿಯನ್ನು ನೆಡಲು ವಾರದ 7 ದಿನಗಳಲ್ಲಿ ಒಂದು ದಿನ ಅತ್ಯಂತ ಶುಭ ಹಾಗೂ ಮಂಗಳಕರವಾಗಿರುತ್ತದೆ. ಹೌದು, ವಾರದ 7 ದಿನಗಳಲ್ಲಿ ಬುಧವಾರದ ದಿನದಂದು ಮನೆಯಲ್ಲಿ ತುಳಸಿ ಗಿಡವನ್ನು ನೆಡುವುದರಿಂದ ಸಂತೋಷ ಮತ್ತು ಸಮೃದ್ಧಿ ಪ್ರಾಪ್ತವಾಗುವುದು ಎನ್ನುವ ನಂಬಿಕೆಯಿದೆ.

ಬುಧವಾರದ ದಿನದಂದು ಮನೆಯಲ್ಲಿ ತುಳಸಿ ಗಿಡವನ್ನು ನೆಡುವುದರಿಂದ ಕುಟುಂಬದ ಸದಸ್ಯರ ಆರ್ಥಿಕ ಸ್ಥಿತಿ ದೃಢವಾಗುತ್ತದೆ ಮತ್ತು ಮನೆಯ ಸಮಸ್ಯೆಗಳು ಪರಿಹಾರವಾಗುವುದು ಎಂದು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಬುಧವಾರದ ದಿನದಂದು ಮನೆಯಲ್ಲಿ ತುಳಸಿ ಗಿಡವನ್ನು ನೆಡುವುದರಿಂದ ಜಾತಕದಲ್ಲಿನ ಬುಧನ ಸ್ಥಾನವು ಉತ್ತಮಗೊಳ್ಳುವುದು.

ಬುಧವಾರ ತುಳಸಿ ಗಿಡಕ್ಕೆ ನೀರನ್ನು ಅರ್ಪಿಸುವುದರಿಂದ  ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸುತ್ತದೆ. ವಿಷ್ಣುವಿಗೆ ತುಳಸಿಯೆಂದರೆ ತುಂಬಾನೇ ಪ್ರಿಯ. ಹಾಗಾಗಿ, ಬುಧವಾರದ ದಿನದಂದು ತುಳಸಿಗೆ ನೀರನ್ನು ಅರ್ಪಿಸುವುದರಿಂದ, ನೆಡುವುದರಿಂದ ವಿಷ್ಣು ದೇವನು ನಿಮ್ಮ ಮೇಲೆ ಆತನ ಆಶೀರ್ವಾದದ ಹೊಳೆಯನ್ನೇ ಹರಿಸುತ್ತಾನೆ. ನಿಮ್ಮ ಮನೆಯಲ್ಲಿನ ಹಾಗೂ ನಿಮ್ಮ ಜೀವನದಲ್ಲಿನ ನಕಾರಾತ್ಮಕ ಶಕ್ತಿಯನ್ನು ಇದು ನಾಶಮಾಡುವುದು. ಲಕ್ಷ್ಮಿ ದೇವಿಯ ಆಶೀರ್ವಾದವೂ ದೊರೆಯುವುದು.

You may also like