Haridwara: ಕಾಲೇಜಿನಲ್ಲಿ ಕೆಲವು ಮುಸ್ಲಿಂ ವಿದ್ಯಾರ್ಥಿಗಳು ಇಫ್ತಾರ್ ಕೂಟವನ್ನು ಆಯೋಜಿಸಿದ್ದರು. ಈ ಕೂಟಕ್ಕೆ ಹೊರಗಿನ ವಿದ್ಯಾರ್ಥಿಗಳನ್ನು ಕರೆಸಲಾಗಿದೆ ಎಂದು ಆರೋಪಿಸಿ ಬಜರಂಗ ದಳ ಕಾರ್ಯಕರ್ತರು ದಾಳಿ ನಡೆಸಿದ ಘಟನೆ ಹರಿದ್ವಾರದ(Haridwara) ಆಯುರ್ವೇದಿಕ್ ಕಾಲೇಜು ಒಂದರಲ್ಲಿ ನಡೆದಿದೆ.
ಋಷಿಕುಲ ಆಯುರ್ವೇದಿಕ್ ಕಾಲೇಜಿಗೆ ಐತಿಹಾಸಿಕ ಮಹತ್ವವಿದೆ. ಪಂಡಿತ್ ಮಹಾಮಾನ ಮದನ್ ಮೋಹನ್ ಮಾಳವೀಯ ಅವರು ಸ್ಥಾಪಿಸಿದ ಋಷಿಕುಲ ವಿದ್ಯಾಪೀಠದಡಿ ಈ ವೈದ್ಯಕೀಯ ಕಾಲೇಜು ಸ್ಥಾಪಿಸಲಾಗಿದೆ. ದೇಶಾದ್ಯಂತ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯಲು ಇಲ್ಲಿಗೆ ಬರುತ್ತಾರೆ. ಆದರೆ ಕಾಲೇಜು ಕ್ಯಾಂಪಸ್‌ಗೆ ಹೊರಗಿನವರನ್ನು ಕರೆತರುವ ಷಡ್ಯಂತ್ರದ ಭಾಗವಾಗಿ ಇಫ್ತಾರ್ ಕೂಟ ಆಯೋಜಿಸಲಾಗಿದೆ ಎಂದು ಬಜರಂಗದಳದ ಪದಾಧಿಕಾರಿ ಅಮಿತ್ ಕುಮಾರ್ ಆರೋಪಿಸಿದ್ದಾರೆ.”
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ
