Affair: ತನ್ನ ಪತ್ನಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಿ, ಸ್ನೇಹಿತರ ಸಹಾಯದಿಂದ ಅಪಹರಣ ಮಾಡಿ, ನಂತರ ಹೊಲದಲ್ಲಿ ಏಳು ಅಡಿ ಆಳದ ಗುಂಡಿ ತೋಡಿ ಜೀವಂತವಾಗಿ ಹೂತು ಹಾಕಿದ ಪ್ರಕರಣವೊಂದು ಹರಿಯಾಣದ ರೋಹ್ಟಕ್‌ನಲ್ಲಿ ನಡೆದಿದೆ.
ಚಂಡೀಗಢ ಮೂಲದ ವ್ಯಕ್ತಿ ತನ್ನ ಮನೆಯ ಬಾಡಿಗೆದಾರನು ಪತ್ನಿಯೊಂದಿಗೆ ಅನೈತಿಕ ಸಂಬಂಧ ಇರುವುದನ್ನು ಪತ್ತೆ ಹಚ್ಚಿದ್ದಾನೆ. ನಂತರ ಆತನನ್ನು ಏಳು ಅಡಿ ಗುಂಡಿ ತೆಗೆದು ಸಜೀವವಾಗಿ ಹೂತು ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಯೋಗ ಶಿಕ್ಷಕ ಹತ್ಯೆಗೊಳಗಾದ ವ್ಯಕ್ತಿ.
ಖಾಸಗಿ ವಿವಿಯಲ್ಲಿ ಯೋಗ ಶಿಕ್ಷಕನಾಗಿರುವ ಜಗದೀಪ್‌ನನ್ನು ಡಿ.24 ನನ್ನು ಅಪಹರಣ ಮಾಡಲಾಯಿತು. ಆರೋಪಿಗಳು ಆತನ ಕೈಕಾಲುಗಳನ್ನು ಕಟ್ಟಿ, ಬೊಬ್ಬೆ ಹಾಕದ ರೀತಿಯಲ್ಲಿ ಬಾಯಿಗೆ ಟೇಪ್ ಸುತ್ತಿ ನಿರ್ಜನ ಹೊಲಕ್ಕೆ ಕರೆದುಕೊಂಡು ಹೋಗಿ ಆಳವಾದ ಗುಂಡಿ ತೋಡಿ, ಜಗದೀಪ್‌ನನ್ನು ಜೀವಂತವಾಗಿ ಹೂತು ಹಾಕಿದ್ದನು.
ಅಪಹರಣ ನಡೆದ 10 ದಿನಗಳ ನಂತರ ಫೆ.3 ರಂದು ನಾಪತ್ತೆ ಪ್ರಕರಣ ದಾಖಲಾಗಿತ್ತು. ಮೂರು ತಿಂಗಳ ಕಾಲ ತನಿಖೆ ಮಾಡಿದ ಪೊಲೀಸರು ಪ್ರಕರಣ ಬಯಲಿಗೆಳೆದಿದ್ದಾರೆ.
ಜಗದೀಪ್ ಬಾಡಿಗೆ ಕಟ್ಟಡದಲ್ಲಿ ವಾಸ ಮಾಡುತ್ತಿದ್ದ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಎಂದು ಆರೋಪಿಸಲಾಗಿದೆ. ಈ ಸಂಬಂಧ ಮಹಿಳೆಯ ಪತಿ ಕೊಲೆ ಮಾಡಿದ್ದಾನೆ.
