Home » Karkala: ಕಾರ್ಕಳದಲ್ಲಿ ಅಕ್ರಮ ಮದ್ಯ ಮಾರಾಟ!

Karkala: ಕಾರ್ಕಳದಲ್ಲಿ ಅಕ್ರಮ ಮದ್ಯ ಮಾರಾಟ!

by ಕಾವ್ಯ ವಾಣಿ
0 comments
Alcohol

Karkala: ಕಾರ್ಕಳ (Karkala) ನಗರದ ಹೋಟೆಲ್ ಕಿಂಗ್ಸ್ ಬಾರ್‌ನ ಹೊರಗಡೆ ಪರವಾನಿಗೆಯ ನಿಯಮಗಳನ್ನು ಉಲ್ಲಂಘಿಸಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಏ. 4ರಂದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದ್ಯದ ಬಾಟಲಿ ಹಾಗೂ ಸ್ಯಾಚೇಟ್‌ಗಳನ್ನು ಶೇಖರಣೆ ಮಾಡಿಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಕಾರ್ಕಳ ನಗರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರು (ತನಿಖೆ), ಶಿವಕುಮಾರ ಎಸ್ ಆರ್ ತನ್ನ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ 4,615/- ರೂಪಾಯಿ ಮೌಲ್ಯದ ವಿವಿಧ ಮಾದರಿಯ ಸ್ವದೇಶಿ ನಿರ್ಮಿತ ಮಧ್ಯವನ್ನು ವಶಪಡಿಸಿಕೊಂಡು, ಆಪಾದಿತ ರಾಮರ್‌ರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

You may also like