Home » Madikeri: ಗೋವುಗಳ ಅಕ್ರಮ ಸಾಗಾಟ, ಗೂಡ್ಸ್‌ ವಾಹನ ಪಲ್ಟಿ

Madikeri: ಗೋವುಗಳ ಅಕ್ರಮ ಸಾಗಾಟ, ಗೂಡ್ಸ್‌ ವಾಹನ ಪಲ್ಟಿ

0 comments

Madikeri: ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಗೂಡ್ಸ್‌ ವಾಹನ ಪಲ್ಟಿಯಾಗಿ ಬಿದ್ದಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ರಸ್ತೆಯಲ್ಲಿ ನಡೆದಿದೆ.

ಕಾಗಡಿಕಟ್ಟೆ ಬಳಿ ಗೂಡ್ಸ್‌ ವಾಹನ ಪಲ್ಟಿಯಾಗಿದೆ. ಗೂಡ್ಸ್‌ನಲ್ಲಿದ್ದ ಮೂರು ಗೋವುಗಳು ಗಾಯಗೊಂಡಿದೆ. ಗೂಡ್ಸ್‌ ವಾಹನದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸಲಾಗುತ್ತಿತ್ತು ಎಂದು ವರದಿಯಾಗಿದೆ.

ಇದನ್ನೂ ಓದಿ;Cough Syrup: ಕೆಮ್ಮಿನ ಸಿರಪ್‌ನಿಂದ ಮಕ್ಕಳ ಸಾವು ಪ್ರಕರಣ: ಸ್ರೇಸನ್‌ ಫಾರ್ಮಾ ಬಂದ್‌, ಕೋಲ್ಡ್ರಿಫ್‌ ಸಿರಪ್‌ ಲೈಸೆನ್ಸ್‌ ರದ್ದು

ಅಪಘಾತವಾಗುತ್ತಿದ್ದಂತೆ ಗೂಡ್ಸ್‌ ವಾಹನದಲ್ಲಿದ್ದ ಇಬ್ಬರು ಆರೋಪಿಗಳನ್ನು ಇನ್ನೋವಾ ಕಾರಿನಲ್ಲಿ ಬಂದವರು ಬೇರೆ ಕಡೆ ಸಾಗಿಸಿದ್ದಾರೆ ಎಂದು ವರದಿಯಾಗಿದೆ. ಸದ್ಯ ಪ್ರಕರಣ ದಾಖಲು ಮಾಡಿರುವ ಪೊಲೀಸರು ಪರಿಶೀಲನೆ ಮಾಡಿದ್ದು, ಆರೋಪಿಗಳ ಹುಡುಕಾಟ ನಡೆಸುತ್ತಿದ್ದಾರೆ.

You may also like