Home » Donald Trump: ‘ನನ್ನ ದೋಸ್ತ್.. ಮೋದಿ ಜೊತೆ ಮಾತನಾಡಲು ಕಾಯುತ್ತಿದ್ದೇನೆ’ – ಡೊನಾಲ್ಡ್ ಟ್ರಂಪ್ ಹೇಳಿಕೆ

Donald Trump: ‘ನನ್ನ ದೋಸ್ತ್.. ಮೋದಿ ಜೊತೆ ಮಾತನಾಡಲು ಕಾಯುತ್ತಿದ್ದೇನೆ’ – ಡೊನಾಲ್ಡ್ ಟ್ರಂಪ್ ಹೇಳಿಕೆ

0 comments

Donald Trump : ಭಾರತದ ಮೇಲೆ ಮನಸ್ಸಿಗೆ ಬಂದಂತೆ ಸುಮಾರು 50 ಪರ್ಸೆಂಟ್ ಅಷ್ಟು ಟ್ಯಾಕ್ಸ್ ಹಾಕಿರುವ ಅಮೆರಿಕದ ಡೊನಾಲ್ಡ್ ಟ್ರಂಪ್ ಇದೀಗ ಭಾರತದ ಮೇಲೆ ಮತ್ತೆ ಫ್ರೆಂಡ್ಶಿಪ್ ಒಲವನ್ನು ತೋರಿಸುತ್ತಿದ್ದು, ಇತ್ತೀಚಿಗಷ್ಟೇ ಮೋದಿ ನನ್ನ ಬೆಸ್ಟ್ ಫ್ರೆಂಡ್ ಎಂದು ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೇ ಈಗ ಭಾರತದ ಪ್ರಧಾನಿ ಜೊತೆಗೆ ಮಾತುಕತೆಗೆ ಕಾಯುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆ.

ಯಸ್, ಮುಂದಿನ ದಿನಗಳಲ್ಲಿ ತನ್ನ ಆತ್ಮೀಯ ಸ್ನೇಹಿತ ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತನಾಡಲು ಕಾಯುತ್ತಿರುವುದಾಗಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಎರಡು ದೇಶಗಳ ನಡುವಣ ವ್ಯಾಪಾರಿ ಸಂಬಂಧಿ ಅಡೆತಡೆಗಳನ್ನು ನಿವಾರಿಸಲು ಅವರ ಸರ್ಕಾರವೂ ಭಾರತದೊಂದಿಗೆ ಮಾತುಕತೆ ಮುಂದುವರೆಸಲಿದೆ ಎಂದು ಟ್ರಂಪ್ ಧೃಡಪಡಿಸಿದ್ದಾರೆ.

ಇದನ್ನೂ ಓದಿ:Gold Price : 1.12 ಲಕ್ಷ ರೂ ತಲುಪಿದ 10.ಗ್ರಾಂ ಚಿನ್ನ- ಒಂದೇ ದಿನ 5080 ರೂ. ಏರಿಕೆ!!

ಈ ಬಗ್ಗೆ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಷಿಯಲ್‌ನಲ್ಲಿ ಬರೆದಿರುವ ಅವರು, ನಮ್ಮ ಎರಡು ರಾಷ್ಟ್ರಗಳ ನಡುವಿನ ವ್ಯಾಪಾರ ಅಡೆತಡೆಗಳನ್ನು ಪರಿಹರಿಸಲು ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಮಾತುಕತೆಗಳನ್ನು ಮುಂದುವರಿಸುತ್ತಿವೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಮುಂಬರುವ ವಾರಗಳಲ್ಲಿ ನನ್ನ ಆತ್ಮೀಯ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ (PM Narendra Modi) ಮಾತನಾಡಲು ನಾನು ಎದುರು ನೋಡುತ್ತಿದ್ದೇನೆ. ನಮ್ಮ ಎರಡೂ ಮಹಾನ್ ದೇಶಗಳು ಯಶಸ್ವಿ ತೀರ್ಮಾನಕ್ಕೆ ಬರಲು ಯಾವುದೇ ತೊಂದರೆ ಇರುವುದಿಲ್ಲ ಎಂದು ನನಗೆ ಖಚಿತವಾಗಿದೆ! ಎಂದು ಅವರು ಹೇಳಿದ್ದಾರೆ.

You may also like