Pahalgam Attack: ಪಹಲ್ಗಾಮ್ ಪ್ರದೇಶದಲ್ಲಿ ನಡೆದ ಹತ್ಯಾಕಾಂಡವನ್ನು ಕೇಂದ್ರ ಸರಕಾರ ಗಂಭೀರವಾಗಿ ತೆಗೆದುಕೊಂಡಿದೆ. ಈ ಕುರಿತು ಸಂಜೆ 6 ಗಂಟೆಗೆ ಮೋದಿ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಮಹತ್ವದ ಸಭೆ ನಡೆಯಲಿದೆ. ಪಹಲ್ಗಾಮ್ ದಾಳಿಗೆ ಪ್ರತಿ ದಾಳಿಯ ಕುರಿತು ಮಹತ್ವದ ಚರ್ಚೆ ನಡೆಯಲಿದೆಯೇ ಕಾದು ನೋಡಬೇಕಿದೆ.
ಈ ಸಭೆಯಲ್ಲಿ ಗಡಿ ಭದ್ರತೆಗೆ ಧಕ್ಕೆ ತಂದ ಸನ್ನಿವೇಶದ ಕುರಿತು ಮುಂದಿನ ಕ್ರಮ ಕೈಗೊಳ್ಳುವ ಕುರಿತು ಚರ್ಚೆ ಮಾಡಲಾಗುತ್ತದೆ. ದೇಶದ ಭದ್ರತೆಗೆ ಸಂಬಂಧಿಸಿದ ಉನ್ನತ ತೀರ್ಮಾನಗಳನ್ನು ಮಾಡಲಾಗುತ್ತದೆ. ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರದ ಕುರಿತು ಕೇಂದ್ರ ಸರಕಾರ ರಹಸ್ಯ ಕಾಪಾಡಲಿದೆ ಎನ್ನಲಾಗಿದೆ.
ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿ ಕೇಂದ್ರದ ಕ್ಯಾಬಿನೆಟ್‌ನ ಭದ್ರತೆಯ ಉಪಸಮಿತಿ ಸಭೆ ನಡೆಸಲಿರುವ ಕುರಿತು ವರದಿಯಾಗಿದೆ.
