Karnataka Election: 18 ವರ್ಷ ತುಂಬಿದ ಪ್ರತಿಯೊಬ್ಬರು ಮತದಾನದ ಚೀಟಿ ಮಾಡಿಸಿ, ಜನರ ಹಿತರಕ್ಷಕರಿಗೆ ಮತದಾನ ಮಾಡಬೇಕು. ರಾಜ್ಯ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಮೇ 10 ರಂದು ರಾಜ್ಯದಲ್ಲಿ ಮತದಾನ ನಡೆಯಲಿದೆ. ಮೇ 13 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಮಧ್ಯೆ ಇದೀಗ ಮತದಾರರಿಗೆ ಗುಡ್ ನ್ಯೂಸ್ ಇಲ್ಲಿದೆ. ಹೌದು , ವೋಟ್ ಹಾಕಿದವರಿಗೆ ವಂಡರ್ ಲಾದಲ್ಲಿ ಶೇ. 15 ರಷ್ಟು ರಿಯಾಯಿತಿ ಘೋಷಿಸಲಾಗಿದೆ.
ಚುನಾವಣೆಯಲ್ಲಿ (Karnataka Election) ಮತದಾನದ ಪ್ರಮಾಣ ಹೆಚ್ಚಿಸುವ ಸಲುವಾಗಿ ಹಲವು ಸಂಸ್ಥೆಗಳಿಂದ ಜಾಗೃತಿ ಮೂಡಿಸಲಾಗುತ್ತಿದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಮತದಾನ ಮಾಡಬೇಕು ಎಂದು ತಿಳಿಸಿ ಹೇಳಲಾಗುತ್ತಿದೆ. ಇನ್ನು ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ಮತ್ತು ಮತದಾನ ಉತ್ತೇಜಿಸುವ ನಿಟ್ಟಿನಲ್ಲಿ ವಂಡರ್ ಲಾ ಅಮ್ಯೂಸ್ ಮೆಂಟ್ ಪಾರ್ಕ್ ವಿಶೇಷ ರಿಯಾಯಿತಿ ಘೋಷಣೆ ಮಾಡಿದೆ.
ಈ ಬಾರಿ ತಪ್ಪದೆ ಮತದಾನ ಮಾಡುವ ನಾಗರಿಕರಿಗೆ ವಂಡರ್ ಲಾ (wonderla) ಪ್ರವೇಶ ಶುಲ್ಕದಲ್ಲಿ ರಿಯಾಯಿತಿ ನೀಡಿದ್ದು, ಶೇಕಡ 15 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಈ ಕೊಡುಗೆ ಮೇ 10 ರಿಂದ 12 ರವರೆಗೆ ಆನ್ನೈನ್ ಬುಕ್ಕಿಂಗ್ ನಲ್ಲಿ ಲಭ್ಯವಿರುತ್ತದೆ. ಗ್ರಾಹಕರು ಇಂದಿನಿಂದಲೇ బుಕಿಂಗ್ ಮಾಡಬಹುದಾಗಿದೆ. www.wonderland.com ವೆಬ್ ಸೈಟ್ ಗೆ ಭೇಟಿ ನೀಡಿ, ಟೀಕೆಟ್ ಬುಕ್ ಮಾಡಿ ಆಫರ್ ಪಡೆಯಬಹುದು. ಮಾಹಿತಿಗಾಗಿ 80372 30333 ಸಂಪರ್ಕಿಸಿ.
ಇದನ್ನೂ ಓದಿ: ನೀಟ್ ಎಕ್ಸಾಂ ದಿನದಂದೇ ಪ್ರಧಾನಿ ಮೋದಿ ರೋಡ್ ಶೋ! ವಿದ್ಯಾರ್ಥಿಗಳೇ ನಿಮಗಾಗಿ ಇಲ್ಲಿದೆ ಪ್ರಮುಖ ವಿಷಯ!
