Home » ಸ್ವಾತಂತ್ರ್ಯ ದಿನದ ಅಮೃತಮಹೋತ್ಸವ ಸಂಭ್ರಮಾಚರಣೆಗೆ ಬೀಳುತ್ತಾ ಉಗ್ರರ ಕರಿನೆರಳು!?

ಸ್ವಾತಂತ್ರ್ಯ ದಿನದ ಅಮೃತಮಹೋತ್ಸವ ಸಂಭ್ರಮಾಚರಣೆಗೆ ಬೀಳುತ್ತಾ ಉಗ್ರರ ಕರಿನೆರಳು!?

0 comments

ನವದೆಹಲಿ: ಸ್ವಾತಂತ್ರ್ಯ ದಿನದ ಅಮೃತಮಹೋತ್ಸವ ಸಂಭ್ರಮಾಚರಣೆಗೆ ಇಡೀ ದೇಶಕ್ಕೆ ದೇಶವೇ ತಯಾರಾಗಿ ನಿಂತಿದ್ದರೆ, ಇತ್ತ ಜನತೆಗೆ ಉಗ್ರರ ಕರಿನೆರಳಿನ ಎಚ್ಚರಿಕೆ ಸಂದೇಶ ರವಾನಿಸಿದೆ.

ಹೌದು.ಆಗಸ್ಟ್ 15ರಂದು ವಿಜೃಂಭಣೆಯಿಂದ ಸ್ವಾತಂತ್ರೋತ್ಸವ ಆಚರಿಸಲು ಭಾರತೀಯರು ಸಿದ್ದವಿದ್ದು, ಇದರ ನಡುವೆ ದೇಶದ ಜನತೆಗೆ ಎಚ್ಚರಿಕೆ ಕರೆಗಂಟೆಯೊಂದು ಬಂದಿದೆ. ಲಷ್ಕರ್ ಎ ತೊಯ್ದಾ (ಎಲ್‌ಇಟಿ), ಜೈಷ್ ಇ ಮೊಹಮ್ಮದ್ (ಜೆಇಎಂ) ಮತ್ತು ಇತರೆ ಉಗ್ರ ಸಂಘಟನೆಗಳ ಭಯೋತ್ಪಾದಕರು ದೇಶವನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವ ಸಾಧ್ಯತೆ ಇದೆ ಎಂದು ಇಂಟೆಲಿಜೆನ್ಸ್ ಬ್ಯೂರೋ (ಐಬಿ) ದೆಹಲಿ ಪೊಲೀಸರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.

ಕೇಂದ್ರ ಸರ್ಕಾರಕ್ಕೆ 10 ಪುಟಗಳ ವರದಿ ಸಲ್ಲಿಸಿರುವ ಐಬಿ, ಎಲ್‌ಇಟಿ, ಜೆಇಎಂ ಮತ್ತು ಇತರೆ ಭಯೋತ್ಪಾದಕ ಸಂಘಟನೆಗಳಿಂದ ಬೆದರಿಕೆ ಇದ್ದು, ಆಗಸ್ಟ್ 15ರಂದು ದೆಹಲಿಯ ಕೆಂಪುಕೋಟೆಯ ಪ್ರವೇಶಕ್ಕೆ ಕಠಿಣ ನಿಯಮಗಳನ್ನು ಜಾರಿಗೆ ತರುವಂತೆ ದೆಹಲಿ ಪೊಲೀಸರಿಗೆ ಐಬಿ ನಿರ್ದೇಶಿಸಿದೆ.

ವರದಿಯ ಪ್ರಕಾರ, ಪಾಕ್ ಗುಪ್ತಚರ ಸಂಸ್ಥೆ ಐಎಸ್‌ಐ, ಜೈಷ್ ಮತ್ತು ಲಷ್ಕರ್ ಭಯೋತ್ಪಾದಕರಿಗೆ ಲಾಜಿಸ್ಟಿಕ್ಸ್ ಬೆಂಬಲ ನೀಡುವ ಮೂಲಕ ಭಯೋತ್ಪಾದಕ ದಾಳಿಗಳನ್ನು ಪ್ರಚೋದಿಸುತ್ತಿದ್ದು, ದೊಡ್ಡ ನಾಯಕರು ಮತ್ತು ಪ್ರಮುಖ ಸ್ಥಳಗಳನ್ನು ಗುರಿಯಾಗಿಸಲು ಜೆಎಂ ಮತ್ತು ಎಲ್‌ಇಟಿಗೆ ಸೂಚನೆ ನೀಡಲಾಗುತ್ತಿದೆ ಎಂದು ವರದಿ ತಿಳಿಸಿದೆ. ಐಬಿ ವರದಿಯಲ್ಲಿ ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಮೇಲಿನ ದಾಳಿ ಮತ್ತು ಉದಯಪುರ ಮತ್ತು ಅಮರಾವತಿಯಲ್ಲಿ ನಡೆದ ಘಟನೆಗಳನ್ನು ಉಲ್ಲೇಖಿಸಲಾಗಿದೆ.

You may also like

Leave a Comment