Home » Dmk minister ponmudi : ‘ಇಂಡಿಯಾ’ ಮೈತ್ರಿ ಕೂಟ ರಚನೆಯಾದದ್ದೇ ಸನಾತನ ಧರ್ಮದ ನಾಶಕ್ಕಾಗಿ, ಅದನ್ನು ಮಾಡುತ್ತೇವೆ’ – ಮತ್ತೆ ನಾಲಗೆ ಹರಿಬಿಟ್ಟ ಇನ್ನೊಬ್ಬ DMK ಸಚಿವ !!

Dmk minister ponmudi : ‘ಇಂಡಿಯಾ’ ಮೈತ್ರಿ ಕೂಟ ರಚನೆಯಾದದ್ದೇ ಸನಾತನ ಧರ್ಮದ ನಾಶಕ್ಕಾಗಿ, ಅದನ್ನು ಮಾಡುತ್ತೇವೆ’ – ಮತ್ತೆ ನಾಲಗೆ ಹರಿಬಿಟ್ಟ ಇನ್ನೊಬ್ಬ DMK ಸಚಿವ !!

0 comments

dmk minister ponmudi : ಸನಾತನ ಧರ್ಮದ ವಿರುದ್ಧ ಒಬ್ಬರು ಮೇಲೊಬ್ಬರು ಕಿಡಿಕಾರುತ್ತಿದ್ದಾರೆ. ಈ ಹಿಂದೆ ಸನಾತನ ಧರ್ಮವನ್ನು ಮಲೇರಿಯಾ, ಕರೋನಾ ಮತ್ತು ಡೆಂಗ್ಯೂ ಮುಂತಾದ ಕಾಯಿಲೆಗಳಿಗೆ ಹೋಲಿಸಿ ತಮಿಳುನಾಡು ಸಿಎಂ ಸ್ಟಾಲಿನ್‌ ಪುತ್ರ ಉದಯನಿಧಿ ಸ್ಟಾಲಿನ್‌ ವಿವಾದ ಸೃಷ್ಟಿಸಿದ್ದರು. ಇದೀಗ ಡಿಎಂಕೆ ಸರ್ಕಾರದ ಉನ್ನತ ಶಿಕ್ಷಣ ಸಚಿವ ಕೆ. ಪೊನ್ಮುಡಿ (dmk minister ponmudi) ಅವರು ಸನಾತನ ಧರ್ಮ ನಿಮೂರ್ಲನೆ ಮಾಡಲೆಂದೇ I.N.D.I.A ಒಕ್ಕೂಟವನ್ನು ರಚಿಸಲಾಗಿದೆ ಎಂದು ನಾಲಗೆ ಹರಿಬಿಟ್ಟಿದ್ದಾರೆ.

“ಸನಾತನ ಧರ್ಮದ ತತ್ವಗಳ ವಿರುದ್ಧ ಹೋರಾಡಲು I.N.D.I.A ಒಕ್ಕೂಟವನ್ನು ರಚಿಸಲಾಗಿದೆ. ನಮ್ಮಲ್ಲಿ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಮೈತ್ರಿಯಲ್ಲಿರುವ 26 ಪಕ್ಷಗಳು ಸನಾತನ ಧರ್ಮದ ವಿರುದ್ಧದ ಹೋರಾಟದಲ್ಲಿ ಒಂದಾಗಿವೆ. ಆದರೆ ಸನಾತನ ಧರ್ಮವನ್ನು ರದ್ದುಗೊಳಿಸುವ ವಿಷಯಕ್ಕೆ ಬಂದಾಗ ನಾವೆಲ್ಲರೂ ಒಂದು ಅಂಶವನ್ನು ಒಪ್ಪುತ್ತೇವೆ. ನಾವು ರಾಜಕೀಯದಲ್ಲಿ ಗೆದ್ದಾಗ ಮಾತ್ರ, ಬದಲಾವಣೆಗಳನ್ನು ಮಾಡಬಹುದು ಎಂದು ಖಚಿತಪಡಿಸಿಕೊಳ್ಳಬಹುದು” ಎಂದು ಡಿಎಂಕೆ ಸಚಿವ ಪೊನ್ಮುಡಿ ಹೇಳಿದ್ದಾರೆ.

ಸದ್ಯ ಸನಾತನ ಧರ್ಮದ ವಿರುದ್ಧ ಹೋರಾಡಲು I.N.D.I.A ಒಕ್ಕೂಟವನ್ನು ರಚಿಸಲಾಗಿದೆ ಎಂದು ಡಿಎಂಕೆ ಸಚಿವರು ಹೇಳುವ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಹೇಳಿಕೆಗೆ ಭಾರೀ ಆಕ್ರೋಶವೂ ವ್ಯಕ್ತವಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ತರಹೇವಾರಿ ಕಮೆಂಟಿಸುತ್ತಿದ್ದಾರೆ.

You may also like

Leave a Comment