Home » Yatindra Siddaramaiah: ಭಾರತ ಯಾವುದೇ ಕಾರಣಕ್ಕೂ ಹಿಂದೂಗಳ ದೇಶವಾಗಬಾರದು, ಆದರೆ ದಿವಾಳಿಯಾಗುತ್ತೆ – ಯತೀಂದ್ರ ಸಿದ್ದರಾಮಯ್ಯ!!

Yatindra Siddaramaiah: ಭಾರತ ಯಾವುದೇ ಕಾರಣಕ್ಕೂ ಹಿಂದೂಗಳ ದೇಶವಾಗಬಾರದು, ಆದರೆ ದಿವಾಳಿಯಾಗುತ್ತೆ – ಯತೀಂದ್ರ ಸಿದ್ದರಾಮಯ್ಯ!!

0 comments

Yatindra Siddaramaiah: ಭಾರತ ಯಾವುದೇ ಕಾರಣಕ್ಕೂ ಹಿಂದೂ ರಾಷ್ಟ್ರ ಆಗಬಾರದು. ಒಂದುವೇಳೆ ಹಿಂದೂ ರಾಷ್ಟ್ರವಾದರೆ ಅದಕ್ಕಿಂತ ದೊಡ್ಡ ಅಪಾಯ ಮತ್ತೊಂದಿಲ್ಲ. ಹಿಂದೂಗಳ ರಾಷ್ಟ್ರ ಆದರೆ ಪಾಕಿಸ್ತಾನ, ಅಫ್ಘಾನಿಸ್ಥಾನದ ರೀತಿ ದಿವಾಳಿಯಾಗಿಬಿಡುತ್ತೆ ಎಂದು ಮಾಜಿ ಶಾಸಕ ಯತೀಂದ್ರನ ಸಿದ್ದರಾಮಯ್ಯ(Yatindra Siddaramaiah)ಹೇಳಿದ್ದಾರೆ.

ಹೌದು, ನಮ್ಮ ದೇಶವನ್ನು ಹಿಂದು ರಾಷ್ಟ್ರಮಾಡಲಿಕ್ಕೆ ಹೊರಟಿದ್ದಾರೆ. ಆ ರೀತಿ ಹಿಂದೂ ರಾಷ್ಟ್ರ ಆದ್ರೆ ನಮ್ಮ ದೇಶವು ಪಾಕಿಸ್ಥಾನ ಆಪಘಾನಿಸ್ತಾನವಾಗುತ್ತದೆ. ಇದನ್ನ ಅಂಬೇಡ್ಕರ್ ಕೂಡ ಹೇಳಿದ್ದಾರೆ. ನಮ್ಮ ದೇಶ ಹಿಂದೂ ರಾಷ್ಟ್ರವಾದರೆ ದೇಶಕ್ಕೆ ತೊಂದರೆ. ನಮ್ಮ ದೇಶ ಕೂಡ ಪಾಕಿಸ್ತಾನ ಮತ್ತು ಅಪಘಾನಿಸ್ತಾನದಂತೆ ದಿವಾಳಿಯಾಗುತ್ತದೆ. ಯಾಕೆಂದರೆ ಪಾಕಿಸ್ತಾನ ಮತ್ತು ಅಪಘಾನಿಸ್ತಾನ ದೇಶಗಳು ಧರ್ಮದ ಹೆಸರಲ್ಲಿ ಸರ್ವಾಧಿಕಾರ ಮಾಡಿ ಇಂದು ದಿವಾಳಿಯಾಗಿವೆ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ ಯತೀಂದ್ರ ಅವರು.

ಅಂದಹಾಗೆ ದಾವಣಗೆರೆ ತಾಲೂಕಿನ ರುದ್ರನಕಟ್ಟೆ ಗ್ರಾಮದಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ದೇಶ ಜಾತ್ಯಾತೀತ ರಾಷ್ಟ್ರವಾಗಿದೆ. ಆದರೆ ಯಾವುದೇ ದೇಶ ಜಾತ್ಯಾತೀತ ತತ್ಬ ಬಿಟ್ಟು ಧರ್ಮದ‌ ಹಿಂದೆ ಹೋದರೆ ಅಭಿವೃದ್ಧಿ ಕಾಣುವುದಿಲ್ಲ. ಆದರೆ ಜಾತ್ಯಾತೀತ ತತ್ವಕ್ಕೆ ಅಪಾಯ ಬಂದಿದೆ. ಬಿಜೆಪಿ ಹಾಗೂ ಮಾತೃ ಸಂಸ್ಥೆ ಆರ್​ಎಸ್​ಎಸ್​ನಿಂದ ಅಪಾಯ ಶುರುವಾಗಿದೆ ಎಂದು ಅಘಾತ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಧರ್ಮಕ್ಕಾಗಿ ಇನ್ನೊಬ್ಬರ ಜೊತೆ ಹೋರಾಟ ಮಾಡೋಕೆ ಹೋದರೆ ನಮ್ಮ ಹಕ್ಕು ಕಳೆದುಕೊಳ್ಳಬೇಕಾಗುತ್ತದೆ. ಇದಕ್ಕಾಗಿ ನಾವು ಬದಲಾಗಬೇಕು. ಧರ್ಮದ ಮೇಲೆ ರಾಜಕೀಯ ಮಾಡುವ ಪಕ್ಷಗಳ ಬಗ್ಗೆ ನಾವು ಹುಷಾರಾಗಿರಬೇಕು ಎಂದು ಹೇಳಿದರು.

You may also like

Leave a Comment