Home » Agniveer Salary Accounts : ಅಗ್ನಿವೀರರ 11 ಬ್ಯಾಂಕ್ ಗಳಲ್ಲಿ ವೇತನ ಖಾತೆ | ಯಾವ ಬ್ಯಾಂಕ್? ಇಲ್ಲಿದೆ ಕಂಪ್ಲೀಟ್ ವಿವರ!!!

Agniveer Salary Accounts : ಅಗ್ನಿವೀರರ 11 ಬ್ಯಾಂಕ್ ಗಳಲ್ಲಿ ವೇತನ ಖಾತೆ | ಯಾವ ಬ್ಯಾಂಕ್? ಇಲ್ಲಿದೆ ಕಂಪ್ಲೀಟ್ ವಿವರ!!!

0 comments

ಭಾರತೀಯ ಸೇನೆಯಲ್ಲಿ ಮಹತ್ತರ ಬೆಳವಣಿಗೆ ತರಲು ಸರ್ಕಾರ ಪ್ರಯತ್ನಿಸುತ್ತಲೇ ಇದೆ. 3 ವಿಧದ ಸೇನೆಯಲ್ಲಿ ಅಂದರೆ ಭೂಸೇನೆ, ವಾಯುಪಡೆ, ನೌಕಾಪಡೆ ಯಲ್ಲಿ ಸಾವಿರಾರು ಸೈನಿಕರನ್ನು ಈಗಾಗಲೇ ನೇಮಕ ಮಾಡಿಕೊಂಡಿದೆ. ಮುಂದಿನ ಭವಿಷ್ಯದ ಸವಾಲಿನಲ್ಲಿ ಈ ಸೈನಿಕರ ಪಾತ್ರ ಮಹತ್ವವಾದದ್ದು.

ಅಗ್ನಿಪಥ ಯೋಜನೆ ಘೊಷಣೆಯಾದ ಆರಂಭದಲ್ಲಿ ದೇಶದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅನೇಕ ಕಡೆಗಳಲ್ಲಿ ಅಂದರೆ ಉತ್ತರ ಭಾರತದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದವು. ಆದರೆ, ಕೇಂದ್ರ ಸರ್ಕಾರ ತನ್ನ ನಿಲುವನ್ನು ಬದಲಾಯಿಸದೆ ಮುಂದುವರೆದಿತ್ತು. ಯೋಜನೆ ಅನುಷ್ಠಾನಗೊಳಿಸುವ ಬಗ್ಗೆ ದೃಢ ನಿರ್ಧಾರ ಮಾಡಿತ್ತು . ಅಲ್ಲದೆ ನಿರ್ದಿಷ್ಟ ಯೋಜನೆ ರೂಪಿಸುವಲ್ಲಿ ಯಶಸ್ವಿ ಆಗಿದೆ.

ಅಗ್ನಿಪಥ ಯೋಜನೆ ಅಡಿಯಲ್ಲಿ ನೇಮಕವಾಗುವ ಅಗ್ನಿವೀರರ ವೇತನ ಖಾತೆಗಳನ್ನು ತೆರೆಯಲು ಮತ್ತು ಅವರಿಗೆ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಸಲುವಾಗಿ 11 ಬ್ಯಾಂಕ್​ಗಳ ಜತೆ ಒಪ್ಪಂದ ಮಾಡಿಕೊಂಡಿದೆ. ಸೇನೆಯ ಮಾನವಸಂಪನ್ಮೂಲ ಯೋಜನೆ ಮತ್ತು ವ್ಯಕ್ತಿಗತ ಸೇವೆಗಳ ಪ್ರಧಾನ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ವಿ. ಶ್ರೀಹರಿ ಹಾಗೂ ಬ್ಯಾಂಕ್​ಗಳ ಹಿರಿಯ ಅಧಿಕಾರಿಗಳು ಒಪ್ಪಂದಕ್ಕೆ ಸಹಿ ಹಾಕಿದರು. ಲೆಫ್ಟಿನೆಂಟ್ ಜನರಲ್ ಸಿ. ಬನ್ಸಿ ಪೊನ್ನಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಅಗ್ನಿವೀರರಿಗೆ ಸೇವೆ ಸಿಗಲಿರುವ ಬ್ಯಾಂಕ್ ಗಳು :

  1. ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ
  2. ಪಂಜಾಬ್ ನ್ಯಾಷನಲ್ ಬ್ಯಾಂಕ್
  3. ಬ್ಯಾಂಕ್ ಆಫ್ ಬರೋಡಾ
  4. ಐಡಿಬಿಐ ಬ್ಯಾಂಕ್
  5. ಐಸಿಐಸಿಐ ಬ್ಯಾಂಕ್
  6. ಎಚ್​ಡಿಎಫ್​ಸಿ ಬ್ಯಾಂಕ್
  7. ಆಯಕ್ಸಿಸ್ ಬ್ಯಾಂಕ್
  8. ಯೆಸ್ ಬ್ಯಾಂಕ್
  9. ಕೋಟಕ್ ಮಹೀಂದ್ರಾ ಬ್ಯಾಂಕ್
  10. ಐಡಿಎಫ್​ಸಿ ಬ್ಯಾಂಕ್
  11. ಬಂಧನ್ ಬ್ಯಾಂಕ್

ಅಗ್ನಿವೀರರ ವೇತನ ಪ್ಯಾಕೇಜ್ ರಕ್ಷಣಾ ಇಲಾಖೆಯ ವೇತನ ಪ್ಯಾಕೇಜ್​ಗೆ ಸಮನಾಗಿರಲಿದೆ ಎಂದು ಸಚಿವಾಲಯ ತಿಳಿಸಿದೆ. ಅಗ್ನಿವೀರರಿಗೆ ತಮ್ಮ ಉದ್ಯಮ ಕೌಶಲವನ್ನು ವೃದ್ಧಿಸಿಕೊಳ್ಳುವ ಸಲುವಾಗಿ ಸಾಲಗಳನ್ನು ನೀಡುವ ಬಗ್ಗೆಯೂ ಬ್ಯಾಂಕ್​ಗಳು ಭರವಸೆ ನೀಡಿವೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜೂನ್ 14ರಂದು ಸೇನೆಯ ಮೂರು ಪಡೆಗಳಿಗೆ ಅಂದರೆ ಭೂಸೇನೆ, ವಾಯುಪಡೆ, ನೌಕಾಪಡೆಗಳಲ್ಲಿ ಅಲ್ಪಾವಧಿ ನೇಮಕಾತಿ ಮಾಡುವ ಅಗ್ನಿಪಥ ಯೋಜನೆಯನ್ನು ಘೋಷಿಸಿತ್ತು. ಮತ್ತು ಅಗ್ನಿಪಥ ಯೋಜನೆಯ ಅಡಿಯಲ್ಲಿ ಅಗ್ನಿವೀರರ ಮೊದಲ ಬ್ಯಾಚ್ 2023ರ ಜನವರಿಯಲ್ಲಿ ತರಬೇತಿಗೆ ಹಾಜರಾಗಲಿದೆ.

ಅಗ್ನಿಪಥ ಯೋಜನೆ ಅಡಿ ನೇಮಕವಾಗುವ ಅಗ್ನಿವೀರರಿಗೆ ಸೇವೆಯಿಂದ ನಿವೃತ್ತರಾದ ಬಳಿಕ ಸ್ವ-ಉದ್ಯಮಕ್ಕೆ ಪ್ರೋತ್ಸಾಹ, ವಿವಿಧ ಇಲಾಖೆಗಳಲ್ಲಿ ನೇಮಕಾತಿ ಮಾಡುವ ವೇಳೆ ಮೀಸಲಾತಿ ನೀಡುವುದಾಗಿಯೂ ಕೇಂದ್ರ ಸರ್ಕಾರ ಆಶ್ವಾಸನೆ ನೀಡಿದೆ.

ಪ್ರಸ್ತುತ ಪ್ರತಿಯೊಬ್ಬ ಸೈನಿಕನು ಮುಂದಿನ ನಮ್ಮ ದೇಶದ ಭವಿಷ್ಯದ ಸವಾಲುಗಳನ್ನು ಯಶಸ್ವಿ ಗೊಳಿಸುವಲ್ಲಿ ಅಗ್ನಿವೀರರು ಸದಾ ಸಿದ್ಧರಾಗಿದ್ದಾರೆ.

You may also like

Leave a Comment