Dubai: ಕಾನೂನು ಮತ್ತು ಭದ್ರತೆ ವಿಷಯ ಬಂದಾಗ, ಯುಎಇಯ ದುಬೈ ಪ್ರಪಂಚದ ಇತರ ದೇಶಗಳಿಂತ ಹೆಚ್ಚು ಮುಂದಿದೆ. ಅಲ್ಲದೆ, ದುಬೈನಲ್ಲಿ ಸಂಚಾರ ನಿಯಮಗಳ ಬಗ್ಗೆ ಕಟ್ಟುನಿಟ್ಟಿನ ಕಾನೂನು ಕ್ರಮವಿದೆ. ಇತ್ತೀಚೆಗೆ, ದುಬೈನಲ್ಲಿರುವ ಭಾರತೀಯ ವಲಸಿಗರು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಂಡವನ್ನು ವಿಧಿಸಿದ್ದು, ಇದರ ಬೆಲೆ ಕೇಳಿದರೆ ನಿಜಕ್ಕೂ ನೀವು ಆಶ್ಚರ್ಯ ಪಡುವಿರಿ. ಈ ದಂಡದ ಮೊತ್ತದಿಂದ ನೀವು ಹೊಚ್ಚಹೊಸ ಕಾರನ್ನು ಖರೀದಿ ಮಾಡಬಹುದು.
ಗಲ್ಫ್ ನ್ಯೂಸ್ ಪ್ರಕಾರ, ದುಬೈ ನಿವಾಸಿಯಾಗಿರುವ 22 ವರ್ಷದ ಸಂಜಯ್ ರಿಜ್ವಿ ಕಚೇರಿಗೆ ಹೋಗಲು ತಡವಾಯಿತು ಎಂದು ರೆಡ್ ಸಿಗ್ನಲ್ ಜಂಪ್ ಮಾಡಿದ್ದಕ್ಕೆ, ಅಲ್ಲಿನ ಸರಕಾರ ಆತನಿಗೆ 50 ಸಾವಿರ ದಿರ್ಹಮ್‌ಗಳ ದಂಡ ಪಾವತಿ ಮಾಡಬೇಕಾಯಿತು. ಅಂದರೆ ಭಾರತದ ರೂಪಾಯಿಯಲ್ಲಿ ಸರಿ ಸುಮಾರು 11 ಲಕ್ಷ ರೂ. ಎಂದರೆ ನಂಬುತ್ತೀರಾ?
ಅಷ್ಟೇ ಅಲ್ಲ, ಈತನ ಹೊಸ ಎಲೆಕ್ಟ್ರಿಕ್ ಕಾರು ಟೆಸ್ಲಾವನ್ನು ಅಲ್ಲಿನ ಆಡಳಿತ ಒಂದು ತಿಂಗಳ ಕಾಲ ಮುಟ್ಟುಗೋಲು ಹಾಕಿತು. ಈ ಘಟನೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದಿದ್ದು, ಈ ಘಟನೆಯಿಂದ ನಾನು ಪಾಠ ಕಲಿತಿದ್ದೇನೆ ಮತ್ತು ಈಗ ರಸ್ತೆ ನಿಯಮಗಳ ಬಗ್ಗೆ ಹೆಚ್ಚು ಜಾಗರೂಕನಾಗಿದ್ದೇನೆ ಎಂದು ರಿಜ್ವಿ ಹೇಳಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಯುಎಇಯಲ್ಲಿ ಸಂಚಾರ ನಿಯಮಗಳು ಹೆಚ್ಚು ಕಠಿಣವಾಗಿವೆ. ನಿರ್ಬಂಧಿತ ಪ್ರದೇಶಗಳಲ್ಲಿ ಯಾರಾದರೂ ಬೈಕ್ ಚಲಾಯಿಸುವುದು ಕಂಡುಬಂದರೆ, ಅವರು 20 ಸಾವಿರ ದಿರ್ಹಮ್‌ಗಳ ದಂಡ ವಿಧಿಸಲಾಗುತ್ತದೆ. ಇದು ಸರಿಸುಮಾರು 4 ಲಕ್ಷ 50 ಸಾವಿರ ರೂ.ಗೆ ಸಮ.
