Indian Post Recruitment : ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳೇ ಗಮನಿಸಿ, ಭಾರತೀಯ ಅಂಚೆ ಇಲಾಖೆ ಖಾಲಿಯಿರುವ (Indian Post Recruitment)ಗ್ರೂಪ್ ‘ಸಿ’ ವೃಂದದ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನ ಮಾಡಿದ್ದು, ಆಸಕ್ತರು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.
ಹುದ್ದೆಯ ವಿವರ :
ಒಟ್ಟು ಹುದ್ದೆ- 94
ಪೋಸ್ಟಲ್ ಅಸಿಸ್ಟೆಂಟ್
ಸಾರ್ಟಿಂಗ್ ಅಸಿಸ್ಟೆಂಟ್
ಪೋಸ್ಟ್‌ಮೆನ್
ಮೈಲ್ ಗಾರ್ಡ್
ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್)
ಭಾರತ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಮಾರ್ಗಸೂಚಿಗಳ ಅನ್ವಯ ಈ ನೇಮಕಾತಿ ನಡೆಯಲಿದ್ದು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು 9.12. 2023 ಕೊನೆಯ ದಿನವಾಗಿದೆ. ಅರ್ಜಿ ಶುಲ್ಕ ಪಾವತಿ ಮತ್ತು ಅರ್ಜಿ ತಿದ್ದುಪಡಿಗೆ ಡಿಸೆಂಬರ್ 9 ರಿಂದ 14 ರವರೆಗೆ ಅನುವು ಮಾಡಿಕೊಡಲಾಗಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು https://dopsportsrecruitment.cept.gov.in ವೆಬ್‌ಸೈಟ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದು . ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಭಾರತೀಯ ಅಂಚೆ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.t
ಅರ್ಜಿಗಳನ್ನು ಸಲ್ಲಿಸಲು ಅಭ್ಯರ್ಥಿಗಳಿಗೆ 100 ರೂ. ಶುಲ್ಕವನ್ನು ವಿಧಿಸಲಾಗಿದೆ. ಮಹಿಳಾ, ತೃತೀಯ ಲಿಂಗಿಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲ, ಆರ್ಥಿಕವಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಕರ್ನಾಟಕ ವೃತ್ತದಲ್ಲಿ ಒಟ್ಟು 94 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಹುದ್ದೆಗಳಿಗೆ ಒಟ್ಟು 65 ಕ್ರೀಡೆಗಳನ್ನು ಪಟ್ಟಿ ಮಾಡಲಾಗಿದೆ. ಕ್ರೀಡಾಪಟುಗಳು ಷರತ್ತು, ವಯೋಮಿತಿ, ವಿದ್ಯಾರ್ಹತೆ ಒಳಪಟ್ಟರೆ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ. ಪೋಸ್ಟಲ್ ಅಸಿಸ್ಟೆಂಟ್, ಸಾರ್ಟಿಂಗ್ ಅಸಿಸ್ಟೆಂಟ್, ಪೋಸ್ಟ್‌ಮೆನ್, ಮೈಲ್ ಗಾರ್ಡ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳಿಗೆ ವಯೋಮಿತಿ 18-27 ನಿಗದಿ ಮಾಡಲಾಗಿದೆ. ಇದರ ಜೊತೆಗೆ ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) ಹುದ್ದೆಗೆ 18-25 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ.
ವೇತನ
*ಪೋಸ್ಟಲ್ ಅಸಿಸ್ಟೆಂಟ್ ಹುದ್ದೆಗೆ ಹಂತ-4 ವೇತನ 25,500- 81,100 ರೂ. ನಿಗದಿ ಮಾಡಲಾಗಿದೆ.
*ಸಾರ್ಟಿಂಗ್ ಅಸಿಸ್ಟೆಂಟ್ ಹಂತ-4 ವೇತನ 25,500-81,100 ರೂ. ನಿಗದಿ ಮಾಡಲಾಗಿದೆ.
* ಪೋಸ್ಟ್‌ಮೆನ್ ಹಂತ-3 ವೇತನ 21,700-69,100 ರೂ. ನಿಗದಿ ಮಾಡಲಾಗಿದೆ.
*ಮೈಲ್ ಗಾರ್ಡ್ ಹಂತ-3 ವೇತನ 21,700-69,100 ರೂ. ನಿಗದಿ ಮಾಡಲಾಗಿದೆ.
ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) ಹುದ್ದೆಗೆ ಹಂತ-1 ಹುದ್ದೆಗೆ 18,000-56,900 ರೂ. ವೇತನವನ್ನು ನಿಗದಿ ಮಾಡಲಾಗಿದೆ.
