Home » Indian railway: ಇನ್ಮುಂದೆ ರೈಲು ಟಿಕೆಟ್ ಬುಕಿಂಗ್ ಇನ್ನೂ ಸುಲಭ; ವೈಟಿಂಗ್ ಪಿರಿಯೆಡ್‌ ಸಮಸ್ಯೆ ಇಲ್ಲ!

Indian railway: ಇನ್ಮುಂದೆ ರೈಲು ಟಿಕೆಟ್ ಬುಕಿಂಗ್ ಇನ್ನೂ ಸುಲಭ; ವೈಟಿಂಗ್ ಪಿರಿಯೆಡ್‌ ಸಮಸ್ಯೆ ಇಲ್ಲ!

0 comments
Indian railway

Indian railway: ರೈಲು ಪ್ರಯಾಣ ಸುಲಭ ಮತ್ತು ಅಗ್ಗವಾಗಿದೆ ಹೌದು, ಆದ್ರೆ ಆನ್‌ಲೈನ್ ಟಿಕೆಟ್ ಬುಕಿಂಗ್‌ನಲ್ಲಿ ಎದುರಾಗುವ ಕೆಲ ಸಮಸ್ಯೆಗಳು ಪ್ರಯಾಣಿಕರನ್ನು ಹೆಚ್ಚಾಗಿ ನಿರಾಶೆ ಮಾಡುತ್ತವೆ. ಇದಕ್ಕೆ ಕಾರಣ ಆನ್ಲೈನ್ ಟಿಕೆಟ್ ಬುಕಿಂಗ್ ಸಮಯದಲ್ಲಿ ವೈಟಿಂಗ್ ಪಿರಿಯೆಡ್ ಪರಿಣಾಮ. ಆದರೆ ಇದೀಗ ಭಾರತೀಯ ರೈಲ್ವೇ (Indian railway) ಹೊಸ ತಂತ್ರಜ್ಞಾನ ಹಾಗೂ ರೈಲು ಟಿಕೆಟ್ ಸಾಮರ್ಥ್ಯ ಹೆಚ್ಚಿಸಲಾಗುತ್ತಿದೆ. ಇದರಿಂದ ಟಿಕೆಟ್ ಬುಕಿಂಗ್ ಮಾಡಿದ ತಕ್ಷಣವೇ ಕನ್‌ಫರ್ಮೇಶನ್ ಬರಲಿದ್ದು, ಟಿಕೆಟ್ ಖಚಿತಗೊಳ್ಳಲಿದೆ.

ಹೌದು, ಅತ್ಯಾಧುನಿಕ ರೈಲು ಟಿಕೆಟ್ ಬುಕಿಂಗ್ ವ್ಯವಸ್ಥೆ ಈಗಾಗಲೇ ಆರಂಭಗೊಂಡಿದೆ. ಅದಕ್ಕಾಗಿ ಈಗಾಗಲೇ ಬ್ಯಾಕ್ಎಂಡ್ ಕೋಡಿಂಗ್ ಕೆಲಸಗಳು ನಡೆಯುತ್ತಿದೆ. ಹೊಸ ವಿಧಾನದಿಂದ ಪ್ರಯಾಣಿಕರು ಸುಲಭವಾಗಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದು. ಅಷ್ಟೇ ವೇಗದಲ್ಲಿ ಹಣ ಪಾವತಿ ಮಾಡಿ, ಟಿಕೆಟ್ ಕನ್‌ಫರ್ಮೇಶನ್ ಪಡೆಯಲು ಸಾಧ್ಯವಿದೆ ಎಂದು IRCTC ಚೇರ್ಮೆನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಜೈನ್ ಹೇಳಿದ್ದಾರೆ.

ಮೊದಲ್ಲೆಲ್ಲ ವೈಟಿಂಗ್ ಪಿರಿಯೆಡ್ ಸ್ಟೇಟಸ್ ಇದ್ದರೆ, ಅತ್ತ ಹಣವೂ ಕಡಿತಗೊಂಡಿರುತ್ತದೆ, ಇತ್ತ ಟಿಕೆಟ್ ಖಚಿತವಾಗಿರುವುದಿಲ್ಲ. ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಹೊಸ ವಿಧಾನದ ಬುಕಿಂಗ್ ವ್ಯವಸ್ಥೆಯನ್ನು ರೈಲ್ವೇ ಇಲಾಖೆ ಜಾರಿಗೆ ತರುತ್ತಿದೆ.

ಅದಕ್ಕಾಗಿ ತಂತ್ರಜ್ಞಾನವನ್ನು ಆಧುನೀಕರಣಗೊಳಿಸಲಾಗುತ್ತಿದೆ. ಇದರಿಂದ ಟಿಕೆಟ್ ಬುಕ್ ಮಾಡುವ ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಸಂಜಯ್ ಜೈನ್ ಹೇಳಿದ್ದಾರೆ.

You may also like

Leave a Comment