2
Death: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಭಾರತ ಮೂಲದ ವಿದ್ಯಾರ್ಥಿನಿ ವಂಶಿಕಾ (21) ಅವರ ಮೃತದೇಹವು ಕೆನಡಾದ ಒಂಟಾರಿಯೋ ಪ್ರಾಂತ್ಯದಲ್ಲಿ ಪತ್ತೆಯಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಒಟ್ಟಾವಾದ ಮೆಜೆಸ್ಟಿಕ್ ಡ್ರೈವ್‌ನ ಬಾಡಿಗೆ ಮನೆಯಲ್ಲಿ ವಾಸವಿದ್ದ ವಂಶಿಕಾ ಕಳೆದ ಮೂರು ದಿನಗಳ ಹಿಂದೆಯಷ್ಟೇ ರಾತ್ರಿ 8ರ ಸುಮಾರಿಗೆ ಮನೆಯಿಂದ ಹೊರಹೋಗಿದ್ದರು. ನಂತರ ರಾತ್ರಿ 11 ಗಂಟೆಯ ನಂತರ ವಂಶಿಕಾ ಮೊಬೈಲ್ ಸ್ವಿಚ್ ಆಗಿತ್ತು. ಇದಲ್ಲದೇ ಮಾರನೆ ದಿನವೂ ನಡೆದ ಪ್ರಮುಖ ಪರೀಕ್ಷೆಗೂ ಅವರು ಗೈರಾಗಿದ್ದರು ಎಂದು ಇಂಡಿಯಾ ಕೆನಡಿಯನ್ ಒಕ್ಕೂಟವು ತಿಳಿಸಿದೆ.
ಅಮೃತ ವಂಶಿಕಾ ಅವರು ಭಾರತದ ಚಂಡೀಗಢದ ದೇರಾ ಬಸ್ಸಿ ನಿವಾಸಿ ಹಾಗೂ ಪಂಜಾಬ್ ನ ಆಮ್ ಆದ್ಮ ಪಕ್ಷದ ಮುಖಂಡ ಓರ್ವರ ಪುತ್ರಿ.
