Home » Viral Post : ಗಂಡನಿಗೆ ಡೈವರ್ಸ್ ಕೊಡಲು ಮುಂದಾದ ಭಾರತೀಯ ಮಹಿಳೆ – ಕಾರಣ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್!!

Viral Post : ಗಂಡನಿಗೆ ಡೈವರ್ಸ್ ಕೊಡಲು ಮುಂದಾದ ಭಾರತೀಯ ಮಹಿಳೆ – ಕಾರಣ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್!!

0 comments

Viral Post : ಭಾರತದಲ್ಲಿ ದಿನದಿಂದ ದಿನಕ್ಕೆ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿವೆ. ದಾಂಪತ್ಯದಲ್ಲಿ ಸಣ್ಣಪುಟ್ಟ ಜಗಳ ನಡೆದರೂ ಕೂಡ ಡೈವೋರ್ಸ್ ಪಡೆಯುವ ಹಂತ ತಲುಪುತ್ತದೆ. ಅಂತೆಯೇ ಇಲ್ಲೊಬ್ಬಳು ಹೆಂಡತಿ ತನ್ನ ಗಂಡನಿಗೆ ಡೈವೋರ್ಸ್ ನೀಡಲು ಮುಂದಾಗಿದ್ದಾಳೆ. ಆದರೆ ಇದಕ್ಕೆ ಕಾರಣ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್.

https://www.instagram.com/p/DO28HKhjsxg/?igsh=MWNyc2R0Z29yOWJvcw==

ಡೊನಾಲ್ಡ್ ಟ್ರಂಪ್ (Donald Trump) ಸರ್ಕಾರ ಇತ್ತೀಚೆಗೆ ಹೊಸದಾಗಿ ಪರಿಚಯಿಸಿದ H-1B ವೀಸಾ ಮೇಲೆ 1 ಲಕ್ಷ ಡಾಲರ್‌ ಶುಲ್ಕ ನಿರ್ಧಾರದಿಂದ ಭಾರತೀಯರು ಅಕ್ಷರಶಃ ಕಂಗಾಲು ಆಗಿ ಹೋಗಿದ್ದಾರೆ. ಪದವಿ ಅಥವಾ ಕೆಲಸದ ಅನುಭವದ ಮೂಲಕ ಪಡೆದ ವಿಶೇಷ ವೃತ್ತಿಪರ ಪರಿಣತಿಯನ್ನು ಹೊಂದಿರುವ ವಿದೇಶಿ ಪ್ರಜೆಗಳಿಗೆ ಅಮೆರಿಕದಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಅನುಮತಿ ನೀಡುತ್ತದೆ. ಅಮೆರಿಕೇತರರು ಅದರಲ್ಲಿಯೂ ಹೆಚ್ಚಾಗಿ ಭಾರತೀಯರು ಇದೇ ವೀಸಾ ಪಡೆದುಕೊಂಡು ಅಮೆರಿಕದಲ್ಲಿ ವಾಸವಾಗಿದ್ದಾರೆ. ಆದರೆ ಇದೀಗ H-1B ವೀಸಾ ಮೇಲೆ 1 ಲಕ್ಷ ಡಾಲರ್‌ ಶುಲ್ಕ ವಿಧಿಸಿದ್ದು, ಹಲವು ಭಾರತೀಯರು ಹೈರಾಣ ಆಗಿದ್ದಾರೆ. ಇದೇ ವಿಚಾರಕ್ಕೆ ಇದೀಗ ಭಾರತೀಯ ಮಹಿಳೆ ತನ್ನ ಗಂಡನಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾಳೆ.

ಹೌದು, ಭಾರತೀಯ ಮಹಿಳೆಯೊಬ್ಬಳು ಇದೇ ಕಾರಣಕ್ಕೆ ಗಂಡನಿಗೆ ಡಿವೋರ್ಸ್​ ಕೊಟ್ಟು, ಅಮೆರಿಕದ ಪ್ರಜೆಯಾಗಿರುವ ಅರ್ಥಾತ್​ ಗ್ರೀನ್​ ಕಾರ್ಡ್​ ಹೊಂದಿರುವ ಸಹೊದ್ಯೋಗಿಯನ್ನು ಮದುವೆಯಾಗಲು ನಿರ್ಧರಿಸಿರುವುದಾಗಿ ಹೇಳಿರುವ ಪೋಸ್ಟ್​ ಒಂದು ಸೋಷಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಸೃಷ್ಟಿಸಿದೆ. ಈ ಬಗ್ಗೆ ಆಕೆ ಜನರ ಅಭಿಪ್ರಾಯವನ್ನು ಕೇಳಿದ್ದಾಳೆ.

ಈ ಕುರಿತಾಗಿ ಪೋಸ್ಟ್ ಹಾಕಿರುವ ಆಕೆ ನಮಸ್ಕಾರ ಗೆಳೆಯರೇ, ದಯವಿಟ್ಟು ನಿರ್ಧಾರ ತೆಗೆದುಕೊಳ್ಳಲು ನನಗೆ ಸಹಾಯ ಮಾಡಿ. ನನ್ನ ಪತಿ ವರ್ಷಕ್ಕೆ 140 ಸಾವಿರ ಸಂಪಾದಿಸುವ H1B ಹೋಲ್ಡರ್, ನಾನು H4 ಮತ್ತು ಕೆಲಸ ಮಾಡುತ್ತಿದ್ದೇನೆ. ಈ H1B ವೀಸಾ ಅನಿಶ್ಚಿತತೆಯಿಂದಾಗಿ ನಮಗೆ ಮಕ್ಕಳಿಲ್ಲ, ನಾವು ತುಂಬಾ ಒತ್ತಡದಲ್ಲಿದ್ದೇವೆ. ನನ್ನ ಕಚೇರಿಯಲ್ಲಿ ಒಬ್ಬ ವ್ಯಕ್ತಿ ಗ್ರೀನ್ ಕಾರ್ಡ್ ಹೋಲ್ಡರ್ ಆಗಿದ್ದಾರೆ, ಅವರು ಆರ್ಥಿಕವಾಗಿ ಚೆನ್ನಾಗಿ ನೆಲೆಸಿದ್ದಾರೆ, ಅವರು ನನ್ನನ್ನು ತುಂಬಾ ಇಷ್ಟಪಡುತ್ತಾರೆ ಮತ್ತು ನಾನು ಅವರನ್ನು ಸ್ವಲ್ಪ ಇಷ್ಟಪಡುತ್ತೇನೆ. ನಾನು ನನ್ನ ಗಂಡನನ್ನು ವಿಚ್ಛೇದನ ಮಾಡಿ ನನ್ನ ಸಹೋದ್ಯೋಗಿಯನ್ನು ಮದುವೆಯಾಗಬಹುದೇ..? ನಾನು ಭವಿಷ್ಯದಲ್ಲಿ ವೀಸಾಕ್ಕಾಗಿ ಒತ್ತಡಕ್ಕೊಳಗಾಗಲು ಬಯಸುವುದಿಲ್ಲ ಮತ್ತು ನಾನು ಮತ್ತೆ ಎಂದಿಗೂ ಭಾರತಕ್ಕೆ ಭೇಟಿ ನೀಡಲು ಬಯಸುವುದಿಲ್ಲ” ಎಂದು ಬರೆದುಕೊಂಡಿದ್ದಾಳೆ.

ಇದನ್ನೂ ಓದಿ:GST ಕಡಿತ ಜಾರಿ – ಹೊಸ ಬೆಲೆ ಘೋಷಿಸಿದ MG ಮೋಟಾರ್, ಕಾರುಗಳ ದರ ಭಾರೀ ಇಳಿಕೆ !!

ಅಂದಹಾಗೆ ಈ ಪೋಸ್ಟ್ ನ ಕಲಿಯೋ ಅಥವಾ ಅಸಲಿಯೋ ಎಂಬುದು ತಿಳಿದಿಲ್ಲ ಆದರೆ ಇದನ್ನು ಅನೇಕರು ನಕಲಿ ಪೋಸ್ಟ್ ಎಂದು ಹೇಳುತ್ತಿದ್ದಾರೆ.

You may also like