Home » Indigo Flight: ಟೇಕಾಫ್‌ ಆದ ಕೆಲವೇ ಕ್ಷಣದಲ್ಲಿ ʼಇಂಡಿಗೋ ವಿಮಾನʼ ತುರ್ತು ಭೂಸ್ಪರ್ಶ: ತಪ್ಪಿತು ಇನ್ನೊಂದು ದುರಂತ

Indigo Flight: ಟೇಕಾಫ್‌ ಆದ ಕೆಲವೇ ಕ್ಷಣದಲ್ಲಿ ʼಇಂಡಿಗೋ ವಿಮಾನʼ ತುರ್ತು ಭೂಸ್ಪರ್ಶ: ತಪ್ಪಿತು ಇನ್ನೊಂದು ದುರಂತ

by V R
0 comments

Indigo Flight: ಮಂಗಳವಾರ ರಾತ್ರಿ ಪಾಟ್ನಾದ ಜಯಪ್ರಕಾಶ್‌ ನಾರಾಯಣ್‌ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೆಹಲಿಯಿಂದ ಪಾಟ್ನಾಗೆ ಪ್ರಯಾಣ ಮಾಡುತ್ತಿದ್ದ ಇಂಡಿಯೋ ವಿಮಾನ (6E 2482) ಅಪಘಾತದಿಂದ ಪಾರಾಗಿರುವ ಘಟನೆ ನಡೆದಿದೆ.

ವಿಮಾನ ಲ್ಯಾಂಡ್‌ ಆಗುವ ಸಂದರ್ಭದಲ್ಲಿ ರನ್‌ವೇಯಲ್ಲಿ ಗೊತ್ತುಪಡಿಸಿದ ಟಚ್ಡೌನ್‌ ಪಾಯಿಂಟ್ಗಿಂತ ಸ್ವಲ್ಪ ಮುಂದೆ ಹೋಗಿದ್ದು, ಉಳಿದ ರನ್‌ವೇ ಉದ್ದ ವಿಮಾನ ನಿಲುಗಡೆಗೆ ಸುರಕ್ಷಿತ ಅಲ್ಲ ಎಂದು ತಿಳಿದ ಪೈಲಟ್‌ ತಕ್ಷಣ ವಿಮಾನವನ್ನು ಟೇಕಾಫ್‌ ಮಾಡಿದ್ದಾರೆ. ನಂತರ ವಿಮಾನ 3 ಸುತ್ತು ಹೊಡೆದು ರಾತ್ರಿ 9 ಗಂಟೆಗೆ ಸುರಕ್ಷಿತವಾಗಿ ಲ್ಯಾಂಡ್‌ ಆಗಿದೆ.

ವಿಮಾನದಲ್ಲಿದ್ದ 173 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು, ಸುರಕ್ಷಿತರಾಗಿದ್ದು, ಪೈಲಟ್‌ ಚಾಣಾಕ್ಷತೆ ಎಲ್ಲರ ಮೆಚ್ಚುಗೆ ಪಡೆದಿದೆ.

ಇದನ್ನೂ ಓದಿ: Heart Attack: ಚಹಾ ಕುಡಿಯುತ್ತಿರುವಾಗಲೇ ನಗರಸಭೆ ಮಾಜಿ ಅಧ್ಯಕ್ಷ ಹಾರ್ಟ್‌ ಅಟ್ಯಾಕ್‌ಗೆ ಸಾವು

You may also like