Home » Indigo : ಮಂಗಳೂರಲ್ಲಿ ಡಿ. 13ರವರೆಗೆ ಇಂಡಿಗೋ ವಿಮಾನ ಸಂಚಾರ ಇಲ್ಲ!!

Indigo : ಮಂಗಳೂರಲ್ಲಿ ಡಿ. 13ರವರೆಗೆ ಇಂಡಿಗೋ ವಿಮಾನ ಸಂಚಾರ ಇಲ್ಲ!!

0 comments

Indigo : ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಇಂಡಿಗೋ (IndiGo) ಏರ್‌ಲೈನ್ಸ್ ವಿಮಾನಗಳ ಸಂಚಾರ ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೂ ಇಂಡಿಗೋ ವಿಮಾನ ಹಾರಾಟ ಗೊಂದಲ ಎಂದು ಕೂಡ ಮುಂದುವರೆದಿದೆ. ಮಂಗಳೂರಿನಲ್ಲಿ ಡಿಸೆಂಬರ್ 13ರವರೆಗೆ ಇಂಡಿಗೋ ವಿಮಾನ ಹಾರಾಟ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಸ್, ಮಂಗಳೂರಿನಲ್ಲೂ ಬಹುತೇಕ ಇಂಡಿಗೋ ವಿಮಾನ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದೀಗ ಡಿಸೆಂಬರ್ 8 ರಿಂದ 13 ರವರೆಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮತ್ತು ಹೊರಡುವ ಒಟ್ಟು 44 ವಿಮಾನಗಳು ರದ್ದಾಗಿವೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳೂರು-ಬೆಂಗಳೂರು, ಬೆಂಗಳೂರು-ಮಂಗಳೂರು, ಮಂಗಳೂರು-ಮುಂಬೈ, ಮುಂಬೈ-ಮಂಗಳೂರು ನಡುವೆ ಇಂಡಿಗೋ ವಿಮಾನ ಸಂಚಾರ ಇರುವುದಿಲ್ಲ ಎಂದು ವಿಮಾನ ನಿಲ್ದಾಣ ಮೂಲಗಳು ತಿಳಿಸಿವೆ.

You may also like