Home » Ration Card Cancel: ಈ ತಿಂಗಳ ಕೊನೆಗೆ ಅನರ್ಹ ಬಿಪಿಎಲ್ ಕಾರ್ಡ್ ರದ್ದು

Ration Card Cancel: ಈ ತಿಂಗಳ ಕೊನೆಗೆ ಅನರ್ಹ ಬಿಪಿಎಲ್ ಕಾರ್ಡ್ ರದ್ದು

0 comments

Ration Card Cancel: ಕರ್ನಾಟಕ ರಾಜ್ಯದಲ್ಲಿ ಅನರ್ಹ BPL ಕಾರ್ಡ್ಗಳನ್ನು ಈ ತಿಂಗಳ ಒಳಗೆ ರದ್ದೂಗೊಳಿಸುವಂತೆ (Ration Card Cancel) ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕರ ವ್ಯಾಜ್ಯಗಳ ಇಲಾಖೆ ಚಿಂತನೆ ನಡೆಸಿದೆ.

ಹಲವು ಮಾನದಂಡಗಳನ್ನು ಆಧರಿಸಿ ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ಸರಕಾರ ಸಂಖ್ಯೆ ನಿಗದಿಪಡಿಸಿದೆ. ಅದಕ್ಕೆ ಹೋಲಿಸಿದರೆ 17.87 ಲಕ್ಷ ಹೆಚ್ಚುವರಿ ಕಾರ್ಡ್‌ಗಳಿವೆ. ಈ ಪೈಕಿ ಎರಡೆರಡು ರಾಜ್ಯಗಳಲ್ಲಿ ಕಾರ್ಡ್‌ ಹೊಂದಿದ್ದು ಸೌಲಭ್ಯ ಪಡೆಯುತ್ತಿರುವವರು ಲಕ್ಷಾಂತರ ಮಂದಿ ಇದ್ದು, ಮೊದಲ ಹಂತದಲ್ಲಿ ಈ ವರ್ಗಕ್ಕೆ ಕತ್ತರಿ ಹಾಕಲು ಸಿದ್ಧತೆಗಳು ನಡೆದಿವೆ.

ಬಿಪಿಎಲ್‌ ಕಾರ್ಡ್‌ಗೆ ಯಾರು ಅನರ್ಹರು?

ಸರ್ಕಾರ ಅಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಸಂಸ್ಥೆಗಳಿಂದ ವೇತನ ಪಡೆಯಬಾರದು.

ಪಡಿತರ ಚೀಟಿ ಹೊಂದಲು ಅನರ್ಹರು. ಇನ್ನು ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಪಾವತಿಸುವವರು ಆಗಿರಬಾರದು.

ಅಲ್ಲದೇ ಗ್ರಾಮೀಣ ಪ್ರದೇಶದಲ್ಲಿ ಮೂರು ಹೆಕ್ಟೇರ್ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ, ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಹೊಂದಿರಬಾರದು.

ಇನ್ನು ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರ್ಯಾಕ್ಟರ್​​, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿರಬಾರದು.

ಮುಖ್ಯವಾಗಿ ಕುಟುಂಬದ ವಾರ್ಷಿಕ ಆದಾಯವು ರೂ.1.20 ಲಕ್ಷಗಳಿಗಿಂತಲೂ ಹೆಚ್ಚು ಇರಬಾರದು.

ಇದನ್ನೂ ಓದಿ:Health Tips: ಚಿಕ್ಕ ಮಕ್ಕಳಿಗೆ ಟೀ ಕೊಡ್ತೀರಾ? ಮಕ್ಕಳು ಚಹಾ ಕುಡಿದರೆ ಏನಾಗುತ್ತದೆ? ಆರೋಗ್ಯದ ಮೇಲಾಗುವ ಪರಿಣಾಮಗಳೇನು?

ಸದ್ಯ ರಾಜ್ಯದಲ್ಲಿ ನಿಯಮಬಾಹಿರವಾಗಿ ಬಿಪಿಎಲ್‌ ಕಾರ್ಡ್‌ ಹೊಂದಿದವರನ್ನು ಪತ್ತೆ ಮಾಡಲಾಗುತ್ತಿದ್ದು, ಇಂತಹ ಸರಿಸುಮಾರು 16-17 ಲಕ್ಷ ಕಾರ್ಡ್‌ಗಳಿದ್ದು ಅವರನ್ನು ಹಂತಹಂತವಾಗಿ ರದ್ದುಗೊಳಿಸಲು ಉದ್ದೇಶಿಸಲಾಗಿದೆ.

You may also like