Home » Floating School: ತೇಲುವ ಶಾಲೆ| ಮಕ್ಕಳ ಬಳಿಯೇ ಬರುತ್ತೇ ಈ ಶಾಲೆ| ಯಾವ ದೇಶದಲ್ಲಿದೆ?

Floating School: ತೇಲುವ ಶಾಲೆ| ಮಕ್ಕಳ ಬಳಿಯೇ ಬರುತ್ತೇ ಈ ಶಾಲೆ| ಯಾವ ದೇಶದಲ್ಲಿದೆ?

0 comments

ಸಣ್ಣ ಮಕ್ಕಳಿಗೆ ಶಾಲೆಗೆ ಹೋಗೋದು ಅಂದ್ರೆ ಅದೇನೋ ಉದಾಸೀನತೆ. ಮನೆಯಲ್ಲೇ ಆಟವಾಡಿಕೊಂಡು ಇರಲು ಸಣ್ಣ ಪುಟ್ಟ ಸುಳ್ಳು ಕಾರಣ ಹೇಳಿ ಶಾಲೆಗೆ ಹೋಗೋದರಿಂದ ತಪ್ಪಿಸಿಕೊಳ್ಳುತ್ತಾರೆ. ಇನ್ನೂ ಮಕ್ಕಳು ಶಾಲೆಗೆ ಹೋಗೋದು ಎಲ್ಲರಿಗೂ ಗೊತ್ತಿರೋದೆ. ಆದರೆ ಶಾಲೆಯೇ ಮಕ್ಕಳ ಬಳಿ ಬರುತ್ತದೆ ಎಂದರೆ ವಿಸ್ಮಯವೆನಿಸುತ್ತದೆ ಅಲ್ವಾ!!

ಇನ್ನೂ ಈ ಶಾಲೆ ಕಟ್ಟಡದ ರೂಪದಲ್ಲಿಲ್ಲ, ಬದಲಾಗಿ ಇದು ತೇಲುವ ಶಾಲೆಯಾಗಿದೆ. ನೀರಿನ ಮೇಲೆ ತೇಲುವ ದೋಣಿಗಳಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತದೆ. ಈ ವಿಶೇಷವಾದ ತೇಲುವ ಶಾಲೆ ಬಾಂಗ್ಲಾದೇಶದಲ್ಲಿ ಇದೆ.

ಬಾಂಗ್ಲಾದೇಶದ ಅಟ್ರೈ ನದಿ ದಡದಲ್ಲಿರುವ ಹುಲ್ಲಿನಲ್ಲಿ ಸಣ್ಣ ಗುಡಿಸಲಿನ ರೀತಿ ಕಾಣುವ ಹಲವು ಶಾಲೆಗಳನ್ನು ದೋಣಿಯ ಮೇಲೆ ನಿರ್ಮಾಣ ಮಾಡಲಾಗಿದೆ. ಇದರೊಳಗೆ ಮಕ್ಕಳಿಗೆ ಪಾಠ ಮಾಡಲಾಗುತ್ತದೆ. ಈ ದೋಣಿಯ ಒಳಭಾಗದಲ್ಲಿ ಕಿರಿದಾದ ಬೆಂಚುಗಳಿದ್ದು, ಒಟ್ಟು 29 ವಿದ್ಯಾರ್ಥಿಗಳು ಮಾತ್ರ ಒಂದು ದೋಣಿಯಲ್ಲಿ ಕೂರಲು ಸಾಧ್ಯವಾಗುತ್ತದೆ.

ಈ ವಿಶೇಷ ಮಾರ್ಗ ಯಾಕಂದ್ರೆ, ಬಾಂಗ್ಲಾದೇಶದಲ್ಲಿ ಶಿಕ್ಷಕರಿಗೆ ಸಮಸ್ಯೆ ಇದೆಯಂತೆ, ಅವರು ಹಲವು ಸವಾಲುಗಳನ್ನು ಎದುರಿಸುತ್ತಿದ್ದು, ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ ಎಂದು ಹೇಳಲಾಗಿದೆ. ಹಾಗೂ ಹಣಕಾಸಿನ ನಿರ್ಬಂಧಗಳು, ಪಠ್ಯಪುಸ್ತಕಗಳ ಕೊರತೆ, ತುಂಬಿದ ತರಗತಿಗಳು, ಇನ್ನೂ ಮಳೆಗಾಲ ಬಂತೆಂದರೆ ಇಲ್ಲಿನ ಪರಿಸ್ಥಿತಿ ಕೇಳಲೇ ಬೇಕಿಲ್ಲ, ಇಲ್ಲಿನ ಶಾಲೆಯ ಕಷ್ಟ ಒಂದೆರಡಲ್ಲ.

ಇನ್ನೂ ಈ ಹೊಸ ತೇಲುವ ಶಾಲೆ ತುಂಬಾ ಪ್ರಯೋಜನಕಾರಿ ಆಗಿದೆ. ಒಟ್ಟು 23 ತೇಲುವ ಶಾಲೆಗಳು ಇದ್ದು, ವಿದ್ಯಾರ್ಥಿಗಳು ಶಾಲೆಗೆ ಹೋಗಲು ನಿರಾಕರಿಸಿದರೆ, ಪ್ರತಿದಿನ ಬೆಳಿಗ್ಗೆ ದೋಣಿ ವಿದ್ಯಾರ್ಥಿಗಳ ಬಳಿ ಸಾಗಿ ಅವರನ್ನು ತುಂಬಿಸಿಕೊಂಡು ಅದರಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತದೆಯಂತೆ. ಮಹಿಳೆಯರಿಗೂ ಕೂಡ ಶಿಕ್ಷಣ ನೀಡಲಾಗುತ್ತದೆಯಂತೆ. ಇನ್ನೂ ಬೆಂಗಾಲಿ, ಇಂಗ್ಲಿಷ್, ಗಣಿತ ಮತ್ತು ವಿಜ್ಞಾನ ಹೀಗೆ ಬೇರೆ ಬೇರೆ ವಿಷಯಗಳನ್ನು ಈ ವಿಶೇಷ ಶಾಲೆಯಲ್ಲಿ ಕಲಿಸಲಾಗುತ್ತದೆ.

ಶಾಲಾ ಸಮಯ ಮುಗಿದ ನಂತರ ವಿದ್ಯಾರ್ಥಿಗಳನ್ನು ಮತ್ತೆ ದಡಕ್ಕೆ ತಂದು ಬಿಡುತ್ತಾರೆ. ಇನ್ನೂ ಈ ಶಾಲೆಯಲ್ಲಿ ಕಂಪ್ಯೂಟರ್​ ತರಗತಿ ಹಾಗೂ ರೇಡಿಯೋ ತರಗತಿಗಳು ಸೇರಿದಂತೆ ಹಲವು ರೀತಿಯ ಸೌಕರ್ಯಗಳೂ ಕೂಡ ಇದೆ. ಹಾಗೇ ಮಳೆಗಾಲದಲ್ಲಿ ಶಾಲೆ ನಡೆಸುವುದು ಹೇಗೆ ಎಂದೆನಿಸಿದರೂ, ಮಕ್ಕಳ ಶಿಕ್ಷಣ ಆಗಲೂ ಮುಂದುವರೆಯುತ್ತದೆ. ಇನ್ನೂ ಮಳೆಗಾಲದ ಸಮಯದಲ್ಲಿ ಸ್ಥಳೀಯ ಹಳ್ಳಿಗಳು ಪ್ರಪಂಚದ ಇತರ ಭಾಗಗಳಿಂದ ಸಂಪರ್ಕ ಕಳೆದುಕೊಳ್ಳುತ್ತವೆಯಂತೆ ಆದರೂ ಕೂಡ ಶಿಕ್ಷಣ ಮುಂದುವರೆಯುತ್ತದೆ.

You may also like

Leave a Comment