Facebook, Instagram: ಪ್ರಪಂಚದಾದ್ಯಂತ ಸಾವಿರಾರು ಬಳಕೆದಾರರಿಗೆ ಮೆಟಾ-ಮಾಲೀಕತ್ವದ(META) ಅಪ್ಲಿಕೇಶನ್‌ಗಳಾದ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಮಂಗಳವಾರ ಸ್ಥಗಿತಗೊಂಡಿವೆ. ಹಲವಾರು ಬಳಕೆದಾರರು ಆ್ಯಪ್(APP) ಮತ್ತು ವೆಬ್‌ಸೈಟ್‌ಗಳು(Website) ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಪೋಸ್ಟ್(Post) ಮಾಡಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ. “ಎಲ್ಲರಿಗೂ ಇನ್‌ಸ್ಟಾಗ್ರಾಮ್ ಕಾಮೆಂಟ್‌ಗಳು(Comments) ಡೌನ್ ಆಗಿವೆ ಎಂದು ತೋರುತ್ತಿದೆ. ನನ್ನನ್ನು ಬ್ಲಾಕ್ ಮಾಡಲಾಗಿದೆ ಎಂದು ಭಾವಿಸಿದ್ದೆ” ಎಂದು ಬಳಕೆದಾರರು Xನಲ್ಲಿ ಪೋಸ್ಟ್ ಮಾಡಿದ್ದಾರೆ.
ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ (IST ಸಮಯ ಸಂಜೆ 6:30) ಔಟೇಜ್ ಟ್ರ್ಯಾಕಿಂಗ್ ವೆಬ್‌ಸೈಟ್ ವರದಿಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಅದೇ ಸಮಯದಲ್ಲಿ ಅನೇಕ ಫೇಸ್‌ಬುಕ್ ಬಳಕೆದಾರರು ಪ್ಲಾಟ್‌ಫಾರ್ಮ್‌ನಲ್ಲಿನ ಸಮಸ್ಯೆಗಳನ್ನು ವರದಿ ಮಾಡಲು ಪ್ರಾರಂಭಿಸಿದರು.
Instagram ಬಳಕೆದಾರರು ಈ ಸಮಸ್ಯೆಯು ಮುಖ್ಯವಾಗಿ ತಮ್ಮ ಪೋಸ್ಟ್‌ಗಳ ಕಾಮೆಂಟ್‌ಗಳ ವಿಭಾಗದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ. ಬಳಕೆದಾರರು ತಮ್ಮ ಸ್ಟೋರಿ ಮತ್ತು ಚಿತ್ರಗಳು ಕಾಮೆಂಟ್‌ಗಳನ್ನು ಹೊಂದಿದ್ದರೂ, ಅವುಗಳಲ್ಲಿ ಯಾವುದನ್ನೂ ವೀಕ್ಷಿಸಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಮಾಡಿದ್ದಾರೆ.
