Home » Instagram Tips and Tricks: ನಿಮಗಿದು ಗೊತ್ತೇ? ಇನ್ಸ್ಟಾಗ್ರಾಂ ನಲ್ಲಿ ಎಷ್ಟು ಗಂಟೆಗೆ ಫೋಟೋ, ರೀಲ್ಸ್ ಹಾಕಿದರೆ ಹೆಚ್ಚು ಲೈಕ್ಸ್ ಸಿಗುತ್ತೆ ಎಂದು? ಇಲ್ಲಿದೆ ವಿವರ

Instagram Tips and Tricks: ನಿಮಗಿದು ಗೊತ್ತೇ? ಇನ್ಸ್ಟಾಗ್ರಾಂ ನಲ್ಲಿ ಎಷ್ಟು ಗಂಟೆಗೆ ಫೋಟೋ, ರೀಲ್ಸ್ ಹಾಕಿದರೆ ಹೆಚ್ಚು ಲೈಕ್ಸ್ ಸಿಗುತ್ತೆ ಎಂದು? ಇಲ್ಲಿದೆ ವಿವರ

by Mallika
0 comments

ಈಗಿನ ಕಾಲದಲ್ಲಿ ಸೋಷಿಯಲ್ ಮೀಡಿಯಾ ಎನ್ನುವುದು ತ್ವರಿತಗತಿಯಲ್ಲಿ ಏರುವ ಒಂದು ತಂತ್ರಜ್ಞಾನ ಎಂದೇ ಹೇಳಬಹುದು. ಸಣ್ಣವರಿಂದ ಹಿಡಿದು ದೊಡ್ಡವರ ವರೆಗೂ ಈ ತಂತ್ರಜ್ಞಾನದ ಪ್ರಯೋಜನ ಪಡೆದವರೇ ಎಂದು ಹೇಳಬಹುದು. ಇವತ್ತು ನಾವು ಇನ್ಸ್ಟಾಗ್ರಾಂ ಬಗ್ಗೆ ಒಂದಷ್ಟು ಮಾಹಿತಿಯನ್ನು ತಿಳಿಸುತ್ತೇವೆ. ಬನ್ನಿ ಅದೇನೆಂದು ತಿಳಿಯೋಣ.

ಇನ್ಸ್ಟಾಗ್ರಾಂ ನಲ್ಲಿ ಕೆಲವರು ಎಷ್ಟೇ ಫೋಟೋ ಹಾಕಿದರೂ ಲೈಕ್ಸ್, ಕಮೆಂಟ್ ಬರುವುದೇ ಇಲ್ಲ ಎಂದು ಕೊರಗುತ್ತಾರೆ. ಹಾಗಾದರೆ ನಿಮ್ಮ ಪೋಸ್ಟ್​ಗೆ ಹೆಚ್ಚು ಲೈಕ್ಸ್, ವೀವ್ಸ್, ಕಮೆಂಟ್ ಬರಬೇಕು ಎಂಬ ಹಂಬಲ ಇದ್ದರೆ ಇಲ್ಲಿದೆ ಕೆಲವೊಂದು ಉಪಾಯ.

ಮೆಟಾ ಒಡೆತನದ ಫೇಸ್​ಬುಕ್, ವಾಟ್ಸ್​ಆ್ಯಪ್ (WhatsApp) ಮತ್ತು ಇನ್​ಸ್ಟಾಗ್ರಾಮ್ ಟಾಪ್ 3 ಸೋಷಿಯಲ್ ಮೀಡಿಯಾ ಆ್ಯಪ್ ಆಗಿಬಿಟ್ಟಿದೆ. ಹಾಗೆ ನೋಡಿದರೆ ವಿಶ್ವದಾದ್ಯಂತ ಈಗ ವಾಟ್ಸ್​ಆ್ಯಪ್ ಬಿಟ್ಟರೆ ನೆಕ್ಸ್ಟ್ ಹೆಚ್ಚಿನ ಜನರು ಉಪಯೋಗಿಸುತ್ತಿರುವುದೇ ಇನ್​ಸ್ಟಾಗ್ರಾಮ್. ಭಾರತದಲ್ಲಿ ಟಿಕ್​ಟಾಕ್ (TikTok) ನಿಷೇಧಗೊಳಿಸಿದ ನಂತರ, ಇನ್​ಸ್ಟಾ ಅಪ್ಲಿಕೇಶನ್ ಉಪಯೋಗ ಮಾಡುವವರ ಸಂಖ್ಯೆ ಹೆಚ್ಚಾಯಿತು. ಇನ್‌ಸ್ಟಾಗ್ರಾಮ್‌ (Instagram) ಕೂಡಾ ತನ್ನ ರೀಲ್ಸ್‌ನಲ್ಲಿ ಹಲವು ಆಕರ್ಷಕ ಫೀಚರ್​ಗಳನ್ನು ಕೂಡ ಪರಿಚಯಿಸುತ್ತಾ ಜನಾಕರ್ಷಣೆ ಪಡೆಯುತ್ತಿದೆ. ಆದರೆ, ಇಲ್ಲೊಂದು ಕಂಪ್ಲೇಂಟ್ ಏನೆಂದರೆ ಕೆಲವರು ತಮ್ಮ ಇನ್​ಸ್ಟಾದಲ್ಲಿ ಎಷ್ಟೇ ಫೋಟೋ, ವೀಡಿಯೋ‌ ಹಾಕಿದರೂ ಅದಕ್ಕೆ ಲೈಕ್ಸ್, ಕಮೆಂಟ್ ಬರುವುದೇ ಇಲ್ಲ. ಹಾಗಾದರೆ ನಿಮ್ಮ ಪೋಸ್ಟ್​ಗೆ ಹೆಚ್ಚು ಲೈಕ್ಸ್, ವೀವ್ಸ್, ಕಮೆಂಟ್ ಬರಬೇಕು ಅಂದುಕೊಂಡಿದ್ದರೆ ಇಲ್ಲಿದೆ ನೋಡಿ ಟಿಪ್ಸ್.

ನೀವು ಫೇಸ್​ಬುಕ್ ಖಾತೆ ಹೊಂದಿದ್ದರೆ ಮೊದಲು ಇನ್‌ಸ್ಟಾಗ್ರಾಂಗೆ ಲಿಂಕ್ ಮಾಡಿ. ಯಾಕೆಂದರೆ ನೀವು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ಚಿತ್ರಗಳು, ವಿಡಿಯೋಗಳಲ್ಲದೆ, ನಿಮ್ಮ ಸ್ಟೋರಿಗಳನ್ನು ಫೇಸ್​ಬುಕ್​ನಲ್ಲಿ ಕೂಡ ಶೇರ್ ಮಾಡಿಕೊಳ್ಳಬಹುದು. ಫೇಸ್​ಬುಕ್ ತಾಣದಲ್ಲಿರುವ ಯಾವುದೇ ಸ್ನೇಹಿತರು ಇನ್​ಸ್ಟಾಗ್ರಾಮ್ ಸೇರಿದಾಗ ನಿಮಗೂ ನೋಟಿಫಿಕೇಶನ್ ಬರುತ್ತಾ ಇರುತ್ತದೆ. ಹೀಗಾಗಿ ಅವರ ಬಳಿ ನಿಮ್ಮನ್ನ ಫಾಲೋ ಮಾಡುವಂತೆ ಕೂಡ ಹೇಳಬಹುದು. ಈಗ ಇನ್​ಸ್ಟಾಗ್ರಾಮ್ ಸಾಕಷ್ಟು ಅಪ್ಡೇಟ್ ಆಗಿದ್ದು, ನೀವು ಯಾವುದೇ ಫೋಟೋ, ವಿಡಿಯೋ ಹಂಚಿಕೊಂಡರೆ ಫೇಸ್​ಬುಕ್​ನಲ್ಲಿ ಅಟೋಮೆಟಿಕ್ ಶೇರ್ ಆಗುವಂತಹ ಆಯ್ಕೆ ಕೂಡ ಇದೆ.

ಇನ್ನು ಇನ್​ಸ್ಟಾಗ್ರಾಮ್​ನಲ್ಲಿ ನೀವು ಯಾವುದೇ ಫೈಲ್ ಅನ್ನು ಶೇರ್ ಮಾಡುವಾಗ ಸರಿಯಾದ ಸಮಯಕ್ಕೆ ಮಾಡಿ. ಒಂದೇ ಬಾರಿಗೆ 2, 3 ವಿಡಿಯೋ ಹಂಚಿಕೊಂಡರೆ ಲೈಕ್ಸ್, ಕಮೆಂಟ್ ಹಾಗೂ ಹೆಚ್ಚು ರೀಚ್ ಕೂಡ ಆಗುವುದಿಲ್ಲ. ಈ ಬಗ್ಗೆ ವೆಬ್ ತಾಣ ಗಿಜ್​ಬಾಟ್ ವರದಿ ಮಾಡಿದ್ದು ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ, ವಿಡಿಯೋ ಹಂಚಿಕೊಳ್ಳಲು ದಿನದಲ್ಲಿ ಯಾವುದು ಸರಿಯಾದ ಸಮಯ ಎಂದು ಹೇಳಿದೆ.

ಇವರು ಹೇಳಿರುವ ಪ್ರಕಾರ ಸೋಮವಾರ ಮಧ್ಯಾಹ್ನ 3:30, ಸಂಜೆ 7:30 ಹಾಗೂ ಬೆಳಗ್ಗೆ 7:30 ಉತ್ತಮ ಸಮಯವಂತೆ.
ಅಂತೆಯೆ ಮಂಗಳವಾರ ಫೋಟೋ ಅಥವಾ ರೀಲ್ಸ್ ಹಂಚಿಕೊಳ್ಳುವ ಪ್ಲಾನ್​ನಲ್ಲಿದ್ದರೆ ನೀವು 11:30 am, 1:30 am, 6:30 am.
ಬುಧವಾರ- 4:30 pm, 5:30 pm, 8:30 am, ಗುರುವಾರ- 6:30 pm, 9:30 am, 4:30 am ( next day)
ಶುಕ್ರವಾರ- 2:30 pm, 10:30 pm, 12:30 am( next day)
ಶನಿವಾರ- 8:30 pm, 4:30 am ( next day) 5:30 am ( next day)
ಭಾನುವಾರ- 4:30 pm, 5:30 pm, 1:30 am ( next day)

ಹಾಗೆನೇ ಗಮನದಲ್ಲಿಟ್ಟುಕ್ಕೊಳ್ಳಬೇಕಾದ ಅಂಶವೇನೆಂದರೆ ಒಂದೇ ರೀತಿಯ ಫೋಟೋವನ್ನು ಪೋಸ್ಟ್ ಮಾಡಬೇಡಬಾರದು. ಯಾವುದಾದರೂ ಒಂದು ಪೋಟೊ ಚೆನ್ನಾಗಿದೆ ಎಂದು ಅದೇ ಫೋಟೋವನ್ನು ಹತ್ತು ಬಾರಿ ಇನ್‌ಸ್ಟಾಗ್ರಾಂನಲ್ಲಿ ಫೋಸ್ಟ್ ಮಾಡಬಾರದು. ಗಮನ ಸೆಳೆಯುವಂತಹ ಗುಣಮಟ್ಟದ ಚಿತ್ರಗಳನ್ನು ಮಾತ್ರ ಶೇರ್ ಮಾಡಿದರೆ ಉತ್ತಮ. ದಿನಕ್ಕೆ ಹೆಚ್ಚೆಂದರೆ 2 ರಿಂದ 3 ಫೋಟೋಗಳನ್ನು ಶೇರ್ ಮಾಡಿದರೆ ಅಷ್ಟೇ ಸಾಕು.

ಅಂತೆಯೇ ನೀವು ಇನ್ನೊಬ್ಬರಿಗೆ ಲೈಕ್ ಮಾಡಿದರೆ ಮಾತ್ರ ಅವರೂ ನಿಮ್ಮ ಪೋಸ್ಟ್‌ಗಳಿಗೆ ಲೈಕ್ ಮಾಡಲು ಮನಸ್ಸು ಮಾಡುತ್ತಾರೆ. ನಿಮಗೆ ಲೈಕ್ ಬರುವುದು ನಿಮ್ಮನ್ನು ಫಾಲೋ ಮಾಡುವವರಿಂದ ಎಂಬ ವಿಷಯ ನಿಮಗೆ ನೆನಪಿರಲಿ. ನಿಮಗೆ ಲೈಕ್, ಕಾಮೆಂಟ್ ಬರಬೇಕೆಂದರೆ ನೀವು ಕೂಡಾ ಇತರರನ್ನು ಲೈಕ್ ಮಾಡಿದರೆ ಮಾತ್ರ ಬರುತ್ತದೆ. ಹಾಗೆಯೇ ಇನ್ನೊಂದು ಮುಖ್ಯವಾದ ವಿಷಯ ಏನೆಂದರೆ, ಹ್ಯಾಶ್‌ಟ್ಯಾಗ್ ಬಳಸುವುದು. ಇನ್‌ಸ್ಟಾಗ್ರಾಂನಲ್ಲಿ ಹ್ಯಾಶ್‌ಟ್ಯಾಗ್ ತುಂಬಾ ಮಹತ್ತರ ಪಾತ್ರ ವಹಿಸುತ್ತದೆ. ಹಾಗಾಗಿ ಪ್ರತಿಯೊಂದು ಫೋಟೋ ಜತೆ ಅದಕ್ಕೆ ತಕ್ಕ ಜನಪ್ರಿಯ ಹ್ಯಾಶ್‌ಟ್ಯಾಗ್‌ಗಳನ್ನು ಹಾಕಿದರೆ ನಿಮ್ಮ ಪೋಸ್ಟ್ ಹೆಚ್ಚು ಜನರಿಗೆ ರೀಚ್ ಆಗಲು ಸಹಾಯ ಮಾಡುತ್ತದೆ.

You may also like

Leave a Comment