Uttar Pradesh: ಮದುವೆಯಾಗಿ (marriage) ಕೆಲವು ಸಮಯ ಕಳೆದ ನಂತರ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ. ಆದರೆ, ಇಲ್ಲಿ ವಿಚಿತ್ರ. ಫಸ್ಟ್ ನೈಟ್ ನಡೆದ ಒಂದೇ ದಿನಕ್ಕೆ ವಧು ತಾಯಿಯಾಗಿದ್ದಾಳೆ. ಈ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ. ಅಷ್ಟಕ್ಕೂ ಅಸಲಿ ಕತೆಯೇನು? ಈ ಮಾಹಿತಿ ಓದಿ.
ಗ್ರೇಟರ್ ನೋಯ್ಡಾದ ಹಳ್ಳಿಯೊಂದರ ವ್ಯಕ್ತಿ ಸಿಕಂದ್ರಾಬಾದ್‌ನ ಯುವತಿಯೊಬ್ಬಳನ್ನು ಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ
ಮದುವೆಯಾಗಿದ್ದಾನೆ. ಶಾಸ್ರ್ತೋತ್ರವಾಗಿ ವಿವಾಹ ಮುಗಿದು, ವರ ಮೊದಲನೆ ರಾತ್ರಿಯಂದು ವಧುವಿಗಾಗಿ ಕಾಯುತ್ತಿರುವ ವೇಳೆ. ವಧು ಕೋಣೆಗೆ ಸೇರಿ ಒಂದು ಗಳಿಗೆಯೂ ಆಗಿಲ್ಲ. ಆಗಲೇ ವಧು ಹೊಟ್ಟೆನೋವು ಎಂದು ಚೀರಾಡಿದ್ದಾಳೆ. ಆಶ್ಚರ್ಯ ಗಾಬರಿಯಿಂದ ವರನ ಕುಟುಂಬಸ್ಥರು ಸೇರಿ ವಧುವನ್ನು ಆಸ್ಪತ್ರೆಗೆ ಕರೆದೊಯ್ದರು.
ಯುವತಿಯನ್ನು ಪರಿಕ್ಷಿಸಿದ ನಂತರ ವೈದ್ಯರು ಹೇಳಿದ ಮಾತು ಕೇಳಿ ವಾರ ಒಂದು ಬಾರಿ ದಂಗಾಗಿ ಹೋದ. ಯಾಕೆ ಅಂತೀರಾ?!ಅದಾಗಲೇ ಯುವತಿ ಗರ್ಭಿಣಿಯಾಗಿದ್ದಳು. ನವವಧು ಏಳು ತಿಂಗಳ ಗರ್ಭಿಣಿ ಎಂಬುದನ್ನು ವೈದ್ಯರು ತಿಳಿಸಿದರು. ಇದಾಗಿ ಒಂದು ದಿನ ಕಳೆಯುತ್ತಿದ್ದಂತೆ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ಅಸಲಿಗೆ ನವವಿವಾಹಿತೆ ಮದುವೆಗೂ ಮೊದಲೇ ಗರ್ಭ ಧರಿಸಿದ್ದಳು. ಬೇರೊಬ್ಬನ ಮಗುವನ್ನು ತನ್ನ ಗರ್ಭದಲ್ಲಿ ಇರಿಸಿಕೊಂಡೇ ನೋಯ್ಡಾದ ವ್ಯಕ್ತಿಯನ್ನು ಮದುವೆಯಾಗಿದ್ದಳು. ಇದಿಷ್ಟೇ ಅಲ್ಲ, ಯುವತಿಯ ಗರ್ಭಿಣಿ ಅನ್ನೋ ವಿಚಾರ ಆಕೆಯ ಮನೆಯವರಿಗೆ ತಿಳಿದಿತ್ತು. ಆದರೆ, ಎಲ್ಲಾರೂ ಸೇರಿ ವರ ಹಾಗೂ ವರನ ಕುಟುಂಬಸ್ಥರಿಂದ ಸತ್ಯ ಮುಚ್ಚಿಟ್ಟು ಮದುವೆ ಮಾಡಿ ಮುಗಿಸಿದರು.
ವಿವಾಹದ ಸಂದರ್ಭದಲ್ಲಿ ವರನಿಗೆ ಹುಡುಗಿಯ ಹೊಟ್ಟೆ ಯಾಕೋ ಸ್ವಲ್ಪ ದಪ್ಪಗಿದೆ ಎಂದು ಅನುಮಾನ ಬಂದು ಪ್ರಶ್ನಿಸಿದಾಗ, ಯುವತಿಯ ಮನೆಯವರು ಸುಳ್ಳು ಹೇಳಿ ಪರಿಸ್ಥಿತಿ ಗಂಭೀರ ಆಗದ ಹಾಗೆ ನೋಡಿಕೊಂಡರು. ಈ ವಿಚಾರಕ್ಕೆ ಅಷ್ಟಾಗಿ ತಲೆಕೆಡಿಸಿಕೊಳ್ಹದೆ ಯುವಕ ಮದುವೆಯಾಗಲು ಒಪ್ಪಿಗೆ ಸೂಚಿಸಿದ್ದ. ಇದೀಗ ಆಕೆ ಮದುವೆಯಾಗಿ ಒಂದು ದಿನ ಕಳೆಯುತ್ತಿದ್ದಂತೆ ಹೆಣ್ಣು ಮಗುವಿಗೆ ಜನ್ಮ ನೀಡಿರುವುದನ್ನು ಕಂಡು ಆತ ಆಘಾತಕ್ಕೊಳಗಾಗಿದ್ದಾನೆ.
ವರ ಈ ಮೋಸಕ್ಕೆ ಆಕ್ರೋಶಗೊಂಡಿದ್ದು, ಯುವತಿ ಮನೆಯವರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ವರ ಮಗು ಹಾಗೂ ವಧುವನ್ನು ಮನೆಗೆ ಸೇರಿಸಿಕೊಳ್ಳುವುದಿಲ್ಲ ಎಂದಿದ್ದಾನೆ. ಹುಡುಗಿಯ ಪೋಷಕರು ವಧು ಹಾಗೂ ಮಗುವನ್ನು ಸಿಕಂದರಾಬಾದ್‌ಗೆ ಕರೆದುಕೊಂಡು ಹೋಗಿದ್ದಾರೆ. ಎರಡೂ ಕುಟುಂಬಗಳು ಮಾತುಕತೆ ಮೂಲಕ ಒಪ್ಪಂದ ಮಾಡಿಕೊಂಡಿದ್ದು, ಈ ಹಿನ್ನೆಲೆ ಠಾಣೆಗೆ ದೂರು ದಾಖಲಿಸಿಲ್ಲ.
ಇದನ್ನು ಓದಿ: Anna bhagya Scheme: ಅಕ್ಕಿಯ ಬದಲು ದುಡ್ಡು ಸಿಗೋದು ಕಾಲಿ 3 ತಿಂಗಳು ಮಾತ್ರ.. ! ಏನಿದು ಸರ್ಕಾರದ ಹೊಸ ಗಿಮಿಕ್..?
